ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 3

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 3

 

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.

 

ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.

 

ಅವುಗಳನ್ನು ಸಾಧ್ಯವಾದರೆ ಸುಧಾರಿಸಿ, ಪೂರ್ತಿಗೊಳಿಸಿ ಸ್ನೇಹಿತರೊಡನೆ ಮತ್ತು ಸಂಪದಿಗರೊಡನೆ ಹಂಚಿಕೊಳ್ಳಿ ಮತ್ತು ಸಮಾಜದಲ್ಲಿನ ಸಂತೋಷದ ಮಟ್ಟವನ್ನು ಹೆಚ್ಚಿಸಿ!

 

21)

 

ಮೂಲ ಹಾಡು - ಜಿಸ ಗಲೀ ಮೇ ತೇರಾ ಘರ ನ ಹೋ ಬಾಲಮಾ

 

ಹಿಂದಿ ಚಿತ್ರ - ಕಟೀ ಪತಂಗ್

 

ನನ್ನ ಅನುವಾದ -

 

ಯಾವ ಗಲ್ಲಿಯಲ್ಲಿ ನಿನ್ನ ಮನೆ ಇಲ್ಲವೋ

 

ಆ ಗಲ್ಲಿಯಲ್ಲಿ ನಾ ಕಾಲಿಡೆ

 

ಯಾವ ದಾರಿಯು ತಾ ಒಯ್ಯದೋ ನಿನ್ನೆಡೆ

 

ಆ ದಾರಿಯ ಗೊಡವೆ ನನಗೇತಕೆ

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1HOj68YhbwnxCxK-_YrDNXZKuLneLRmX0/view?usp=drivesdk

 

22)

 

ಮೂಲ ಇಂಗ್ಲೀಷ್ ಹಾಡು - Just walking in the rain

 

ಗಾಯಕ - Jim Reeves

 

ನನ್ನ ಅನುವಾದ -

 

ಮಳೆಯಲಿ ನೆನೆಯುತ

 

ನಿನ್ನನೇ ನೆನೆಯುತ

 

ನಡೆದೆನು ನವೆಯುತ

 

ಮರೆಯಲು ಸೋಲುತ

 

ಮಳೆಯಲಿ ನಡೆದೆನು

 

ಹೊತ್ತು ಎದೆ ಭಾರವ

 

ನನ್ನೆದೆ ನಿನ ಮರೆಯದು

 

ಇಂದಿಗೂ ನೆನೆವುದು

 

ಕಿಟಕಿಗೆ ಜನ ಬಂದರು

 

ನನ್ನನು ಕಂಡರು

 

ನೋಡುತ ಅಂದರು

 

ಎಂತಹ ಮರುಳಿದು !

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1HXjkyuLhzas61q-h8S8b7feVWdwV0K48/view?usp=drivesdk

 

23)

 

ಮೂಲ ಹಾಡು - ಕಹಾಂ ಸೆ ಆಯೆ ಬದರಾ

 

ಹಿಂದಿ ಚಿತ್ರ - ಚಷ್ಮ- ಏ- ಬದ್ದುರ್

 

ನನ್ನ ಅನುವಾದ - 

 

ದಟ್ಟೈಸಿ ಬಂತು ಮೋಡಾ

 

ಕಣ್ತುಂಬಿ ಬಂತು ನೋಡಾ

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1HbJtvebNf5eJex3HpZtyfoGWZEFjiQ6B/view?usp=drivesdk

 

24)

 

ಮೂಲ ಹಾಡು - ಕಿಸ್ಮತ್ ಸೇ ತುಂ ಹಂ ಕೋ ಮಿಲೇ ಹೋ

 

ಹಿಂದಿ ಚಿತ್ರ - ಪುಕಾರ್

 

ನನ್ನ ಅನುವಾದ -

 

ಪುಣ್ಯದ ಬಲದಿ ಒದಗಿಹೆ ನೀನು

 

ಹೇಗೆ ಬಿಟ್ಟೇನು , ಈ ಕೈಯ

 

ಹೇಗೆ ಬಿಟ್ಟೇನು 

 

ಕನಸಿನ ಲೋಕವ ನನಸಾಗಿಸುತ

 

ಭಾಗ್ಯದ ಬಾಗಿಲು ತೆರೆಯುತಲಿರಲೂ

 

ಹಿಂದಕೆ ಸರಿಯುವೆನೇ , ನಾನು 

 

ಹಿಂದಕೆ ಸರಿಯುವೆನೇ ?

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1Hef4QBklpHQCl3KpeNPNvWjHKI8CdEPT/view?usp=drivesdk

 

25)

 

ಮೂಲ ಹಾಡು - ಕೋಯಿ ಜಬ ತುಮ್ಹಾರಾ ಹೃದಯ ತೋಡ್ ದೇ

 

ಹಿಂದಿ ಚಿತ್ರ - ಪೂರಬ್ ಔರ್ ಪಶ್ಚಿಮ್

 

ನನ್ನ ಅನುವಾದ - 

 

ಒಂದೊಮ್ಮೆ ನಿನ ನಲ್ಲ ಕೈಬಿಟ್ಟರೆ 

 

ನಿನ್ನೊಲವನು ಆತ ಒಲ್ಲೆಂದರೆ

 

ನೀ ಆಗ ನನ್ನ ಬಳಿ ಬಾರೆ ಗೆಳತಿ

 

ನನ ಮನಸು ನಿನಗಾಗಿ ತೆರೆದೇ ಇದೆ,

 

ಎಂದೆಂದಿಗೂ

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1Hi3B7JLjYpWASpRCTXXZaksl2-olBLVI/view?usp=drivesdk

 

26)

 

ಮೂಲ ಹಾಡು - ಕೋರಾ ಕಾಗಜ್ ಥಾ ಜೀವನ್ ಮೇರಾ

 

ಹಿಂದಿ ಚಿತ್ರ - ಆರಾಧನಾ

 

ನನ್ನ ಅನುವಾದ -

 

ಬಿಳಿಯ ಕಾಗದವಾಗಿತ್ತು ನನ್ನ ಮನಸು

 

ಬರೆದೆ ಅದರ ಮೇಲೆ ನಿನ್ನ ಹೆಸರು

 

ಖಾಲಿ ಅಂಗಳವಾಗಿತ್ತು ಬಾಳು

 

ಅಲ್ಲಿ ಬೇರೂರಿತು ನಿನ್ನ ಪ್ರೀತಿ

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1HtenZxk-Bf4GwC_u3udGv3EBMnh7A5RL/view?usp=drivesdk

 

27)

 

ಮೂಲ ಹಾಡು - ಕುಛ್ ನಾ ಕಹೋಂ

 

ಹಿಂದಿ ಚಿತ್ರ - 1942 - A Love Story

 

ನನ್ನ ಅನುವಾದ -

 

ಹೇಳದಿರು ಏನೂ

 

ಏನನೂ ಹೇಳದಿರು

 

ಹೇಳುವುದು ಏನು

 

ಕೇಳುವುದು ಏನು

 

ನಾನೂನೂ ಬಲ್ಲೆ

 

ನೀನೂನೂ ಬಲ್ಲೆ

 

ಸಮಯದ ಈ ಗಳಿಗೆ

 

ನಿಂತಂತಿದೆ

 

ಮತ್ತೇ ಈ ಗಳಿಗೆಯಲಿ

 

ಬೇರಾರೂ ಇಲ್ಲ

 

ನಾ ಮತ್ತೆ ನೀನು

 

ಬೇರಾರೂ ಇಲ್ಲ

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1Hx83nmKpiHtICM4KsryhJiRoQaqeiY6f/view?usp=drivesdk

 

28)

 

ಮೂಲ ಹಾಡು - ಮಾಂಗ್ ಲೂಂಗಾ ಮೈ ತುಮ್ಹೆ ತಕದೀರ ಸೇ

 

ಹಿಂದಿ ಚಿತ್ರ - romance

 

ನನ್ನ ಅನುವಾದ -

 

ಬೇಡಿ ಪಡೆವೆ ನಿನ್ನ ನಾನು ದೇವನ

 

ನಿನ್ನ ಹೊರತು ಸಾಗದೆನ್ನ ಜೀವನ

 

ನನ್ನ ಹಾಡಿಗೆ ಕೊಂಡಿ -https://drive.google.com/file/d/1HxImCjd7gdA8Yl7P7VwwpeTh-5tOf25f/view?usp=drivesdk

 

29)

 

ಮೂಲ ಹಾಡು - ಮೇರಾ ಜೀವನ ಕೋರಾ ಕಾಗಜ

 

ಹಿಂದಿ ಚಿತ್ರ -ಕೋರಾ ಕಾಗಜ

 

ನನ್ನ ಅನುವಾದ -

 

ನನ್ನ ಜೀವನ ಬಿಳಿಯ ಕಾಗದ

 

ಬಿಳಿಯದಾಗೇ ಉಳಿಯಿತು

 

ಬರೆದುದೆಲ್ಲಾ ಕಣ್ಣ ನೀರಲೀ

 

ಅಳಿಸಿ ಹೋಯಿತು.

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1I-RnmjWETB4P96j-l4S7gfkmrUZNnlOm/view?usp=drivesdk

 

30)

 

ಮೂಲ ಹಾಡು - ಮೇರಾ ಪ್ಯಾರ ಭೀ ತೂ ಹೈ

 

ಹಿಂದಿ ಚಿತ್ರ - ಸಾಥೀ

 

ನನ್ನ ಅನುವಾದ -

ನನ್ನ ಜೀವವೇ ನೀ

ನನ್ನ ಭಾವವೇ ನೀ

ನಲ್ಲೇ ನೀನಿಲ್ಲದಿರಲಾರೆನಲ್ಲೆ

ನೀನಿಲ್ಲದಿರಲಾರೆ

 

ನನ್ನ ಹಾಡಿಗೆ ಕೊಂಡಿ - 

 

https://drive.google.com/file/d/1I8hnHtBA2Dd2yboA7dRsLM_U1wGDTDcQ/view?usp=drivesdk 

 

Rating
Average: 4 (1 vote)