ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 30

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 30

265) ಮೂಲ ಹಾಡು : ಮೈ ಚಾಹತಾ ಹೂಂ ತುಜ ಕೋ ದಿಲ- ಓ - ಜಾನ್ ಕಿ ತರಾ 8
ನನ್ನ ಅನುವಾದ : 
ನಾ ಬಯಸುವೆ ನಿನ್ನನು ಪ್ರಾಣದ ಹಾಗೆ
ಆವರಿಸಿರುವೆ ನೀ ಆಗಸದಂತೆ

266) ಮೂಲ ಹಾಡು : ಸುಹಾನೀ ರಾತ ಢಲ ಚುಕೀ
ನನ್ನ ಅನುವಾದ : 
ಸೊಂಪಾದ ಹುಣ್ಣಿಮೆ ಕಳೆದ್ಹೋಯ್ತು
ನಾ ಅರಿಯೆ ನೀ ಎಂದು ಬರುವೆ

267) ಮೂಲ ಹಾಡು : ತುಮ್ ಪಾಸ ಆಯೆ ಯೂ ಮುಸ್ಕುರಾಯೆ
ನನ್ನ ಅನುವಾದ : 
ನೀ ಬಳಿಗೆ ಬಂದೆ
ಮುಗುಳು ನಗೆಯ ಬೀರಿ
ಏನೇನೊ ಕನಸು
ನನ್ನಲ್ಲಿ ತಂದೆ
ನನ್ನದೆಯೋ ಈಗ
ಮಲಗಿಲ್ಲ ಎದ್ದಿಲ್ಲ
ಮಾಡುವುದು ಏನು?
ಆಗುತ್ತಿದೆ ಏನು?

268) ಮೂಲ ಹಾಡು : ಲಗೀ ಆಜ ಸಾವನ ಕೀ
ನನ್ನ ಅನುವಾದ :  ಶುರುವಾಗಿದೆ ಮತ್ತೆ ಶ್ರಾವಣದ ಮಳೆಯು
ಅದೇ ಬೆಂಕಿ ಎದೆಯಲ್ಲಿ ಮತ್ತೊಮ್ಮೆ ಈಗ

269) ಮೂಲ ಹಾಡು : ಆಕೆ ಭರಲೋ ಬಾಜುವೊಂ  ಮೇ
ನನ್ನ ಅನುವಾದ : 
ಬಂದು ಸೇರು ನನ್ನ ತೋಳು
ನಿನ್ನ ಹೊರತು
ನನ್ನ ಜೀವ
ಹೊರಟು ಹೋಗುವುದು

270) ಮೂಲ ಹಾಡು : ತೇರಿ ತಸ್ವೀರ ಕೋ ಸೀನೆ ಮೆ
ನನ್ನ ಅನುವಾದ : 
ನಿನ್ನ ಚಿತ್ರವೇ ಇದೆ ನನ್ನ ಎದೆಯಲ್ಲಿ
ಸೃಷ್ಟಿ ನಾ ಮಾಡಿರುವೆ
ನಿನಗಾಗಿ ಬೇರೆ ಲೋಕವನೇ

271) ಮೂಲ ಹಾಡು : ಚಲ್ ಅಕೇಲಾ ಶಲ್ ಅಕೀಲಾ
ನನ್ನ ಅನುವಾದ : 
ನಡೇ ಒಬ್ಬಂಟಿ
ನಡೇ ಒಬ್ಬಂಟಿ
ನಿನ್ನ ಜನರ
ಹಿಂದಕೆ ಬಿಟ್ಟು
ನಡೇ ಒಬ್ಬಂಟಿ

272) ಮೂಲ ಹಾಡು : ಇತನಾ ಹೈ ತುಮ್ ಸೆ ಪ್ಯಾರ ಮುಝೆ
ನನ್ನ ಅನುವಾದ : 
ಇಷ್ಟೊಂದು ಪ್ರೀತಿ ನನಗೆ ಉಂಟು ನಲ್ಲೆ ನಿನ್ನಲಿ
ಆಗಸದಿ ತಾರೆ ಇರುವಂತೆ ಅಗಣಿತ

273) ಮೂಲ ಹಾಡು : ಮೇರೆ ಖಯಾಲೋಂ ಕೆ ಮಲಿಕಾ
ನನ್ನ ಅನುವಾದ : 
ನನ್ನ ಭಾವುಕತೆಯ ರಾಣಿ
ಎಲ್ಲೆಡೆ ನಿನ್ನದೇ  ಘಮಲು
ಬಾರೆ ನನ್ನ ಒಲಿದು
ಎಲ್ಲೆಡೆ ನಿನ್ನದೇ  ಘಮಲು ಘಮಲು

ನೀನು ಹೂವಿನ ರಸದಿ  ಮಿಂದೆ
ತಂದೆ ಹೂವಿನ ಘಮಲು ತಂದೆ
ನಿನ್ನ ಕಣ್ಣಲಿದೆ ಎಂಥ ಮಾದಕತೆ
ನಿನ್ನ ರೂಪವಿದೆ ನನ್ನ ಕಣ್ಣಲ್ಲಿ

ಮೋಹ, ಕವಿದಿದೆ ನಿನ್ನ ಮೋಹ
ಇಲ್ಲ ಹಿಡಿತ, ಹೃದಯದ ಮೇಲೆ
ಕನಸಿನ ಕನ್ಯೆಯೇ , ಹೇಳು ನೀ ಇದನು
ಇರುವುದು ನೀನು ಎಲ್ಲಿ ?  ನಿನ್ನ ಹೆಸರು ಏನು?

274) ಮೂಲ ಹಾಡು : ಪ್ಯಾರ್ ಮೇ ದಿಲ ದೇ ದಿಯಾ
ನನ್ನ ಅನುವಾದ : 
ಪ್ರೇಮದಲ್ಲಿ ನ ಹೃದಯ ಕೊಟ್ಟೆ
ನಿಂಗೆ ನಾನು ಓ ನಲ್ಲೆ
ಮರುಳ ನಾನು ಮರುಳ

Rating
Average: 4 (2 votes)