ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 39
371) ಹಾಡು : ಹರ್ ಕಿಸೀ ಕೋ ನಹೀ ಮಿಲತಾ
ನನ್ನ ಅನುವಾದ:
ಪ್ರತಿಯೊಬ್ಬನಿಗೂ ಸಿಗೋದಲ್ಲ
ಈ ಬಾಳಲ್ಲಿ ಪ್ರೀತಿ ತಾನು
ಅವ ಭಾಗ್ಯಶಾಲಿಯೇ
ಯಾರಿಗೆ ಪ್ರೀತಿ ದಕ್ಕಿದೆ
372) ಹಾಡು: ಕೈಸೆ ಕಟೇಗಿ ಜಿಂದಗೀ
ನನ್ನ ಅನುವಾದ:
ಹೇಗೆ ನಡೆವುದು ಜೀವನ
ನೀ ಇಲ್ಲದೆ
ಕಾಣುವೆನು ಕೊರತೆ
ಪ್ರತಿಯೊಂದರಲ್ಲೂ
373) ಹಾಡು : ದೋ ದಿನ್ ತೋ ಕ್ಯಾ
ನನ್ನ ಅನುವಾದ:
ಎರಡು ದಿನ ಏನು ,
ಕಳೆಯನು ಎರಡು ಗಳಿಗೆ ನೀನಿಲ್ಲದೆ
ಹಿಡಿವುದು ಹುಚ್ಚು ನಿನ್ನ ಪ್ರೇಮದಿ ನನಗೆ ನೀ ಇಲ್ಲದೆ
374) ಹಾಡು : ಮೇರಿ ಕಿಸ್ಮತ್ ಮೇ ತೂ ನಹೀ ಶಾಯ ದ್
ನನ್ನ ಅನುವಾದ :
ನನ್ನ ಹಣೆಯಲ್ಲಿ ಬಹುಶಃ ನೀನಿಲ್ಲ
ಆದರೂ ಏಕೆ ದಾರಿ ಕಾಯುವನ
ನಿನ್ನನು ಹಿಂದೆ ಪ್ರೀತಿ ಮಾಡಿದೆನು
ನಿನ್ನನು ಇಂದು ಕೂಡ ಪ್ರೀತಿಸುವೆ
375) ಹಾಡು :- ನಗಮಾ ಹಮಾರಾ ಗಾಯೆಗಾ ಏ ಜಹಾಂ
ನನ್ನ ಅನುವಾದ:
ನಮ್ಮ ಹಾಡನು ಹಾಡುವುದು ಈ ಲೋಕ
ನಾವು ಕೊಟ್ಟೆವು ಪ್ರೀತಿಗೆ ಅಂತಹ ಧಾಟಿಯ
376) ಹಾಡು : ಕಹಾ ಥಾ ತುಮನೆ , ಕ್ಯೂ ಮೈನೆ ಮಾನಾ
ನನ್ನ ಅನುವಾದ:
ಹೇಳಿದ್ದೆ ನೀನು
ನಾನೇಕೆ ಒಪ್ಪಿದೆ
ಬಾಳು ಒಂದು
ಪ್ರೀತಿಯ ಗೀತೆ
377 ) ಹಾಡು: ಚುಪಕೆಸೆ ಚುಪಕೆಸೆ ರಾತ್ ಕೆ ಚಾದರ ತಲೆ
ನನ್ನ ಅನುವಾದ -
ಸದ್ದಿಲ್ಲದೆ ಸದ್ದಿಲ್ಲದೆ ರಾತ್ರಿಯ ಹೊದಿಕೆ ಅಡಿ
ಚಂದಿರನ ಹೆಜ್ಜೆ ಸದ್ದೂ ಬೇಡ
ಹೋಗೋಣ ಮೋಡದ್ ಆಚೆ
378) ಹಾಡು: ಇಲು ಇಲು ಏ ಇಲು ಇಲು ಕ್ಯಾ ಹೈ
ನನ್ನ ಅನುವಾದ :
ಇಲು ಇಲು
ಈ ಇಲು ಇಲು ಏನು?
ತೋಟದಿ ಹೂ ಅರಳಲು
ಹೇಳಿತು ದುಂಬಿ
ಇಲು ಇಲು
ಪರ್ವತವ ಮೋಡ ಮುಸುಕಿ
ಹೇಳಿತು ಗಾಳಿ
ಇಲು ಇಲು
ಯಾರೋ ಕಂಡು ಚೆಂದಾಗಿ
ಹೇಳಿತು ಹೃದಯ
ಇಲು ಇಲು
ಇಲು ದ ಅರ್ಥ ಐ ಎಲ್ ಯೂ
ಐ ಲವ್ ಯೂ
379) ಹಾಡು: (ಚುಯಿ ಮುಯಿ ಸೀ ತುಂ ಲಗತೀ ಹೋ ) ಇಕ ಲಡಕೀ ಮೇರೆ ಖ್ವಾಬೋ ಮೇ ಆತೀ ಹೈ
ನನ್ನ ಅನುವಾದ:
ಒಬ್ಬ ಹುಡುಗೀ
ನನ್ನ ಕನಸಲ್ಲಿ ಬರುತಾಳೆ
ಅದು ನೀನೆ
ಅದು ನೀನೆ
ನನ್ನ ನಲ್ಲೆ
ಅದು ನೀನೇನೆ
380) ಹಾಡು: - ದೇಖಾ ತುಝೆ ತೋ ಹೋ ಗಯೀ ದಿವಾನೀ
ನನ್ನ ಅನುವಾದ :
ನಿನ್ನನ್ನು ನೋಡೇ ನಾನಾದೆ ಮರುಳು
ನಿನ್ನನ್ನು ಪಡೆಯೇ ನಾ ಹೋಗುವೆನು ಸತ್ತು