ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 4
ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.
ಅವುಗಳನ್ನು ಸಾಧ್ಯವಾದರೆ ಸುಧಾರಿಸಿ, ಪೂರ್ತಿಗೊಳಿಸಿ ಸ್ನೇಹಿತರೊಡನೆ ಮತ್ತು ಸಂಪದಿಗರೊಡನೆ ಹಂಚಿಕೊಳ್ಳಿ ಮತ್ತು ಸಮಾಜದಲ್ಲಿನ ಸಂತೋಷದ ಮಟ್ಟವನ್ನು ಹೆಚ್ಚಿಸಿ!
31)
ಮೂಲ ಹಾಡು - ನಹೀ ಸಾಮನೆ
ಹಿಂದಿ ಚಿತ್ರ - ತಾಲ್
ನನ್ನ ಅನುವಾದ -
ಇಲ್ಲ ಕಣ್ಮುಂದೆ
ಅದು ಬೇರೆ ವಿಷಯ
ನನ್ನ ಹತ್ತಿರ
ನೀನು ನನ್ನ ಹತ್ತಿರ
ನನ್ನ ಜತೆಗೇನೆ
ಮನಸಾ
ನನ್ನ ಜತೆಗೇನೆ
ನನ್ನ ಹಾಡಿಗೆ ಕೊಂಡಿ - https://drive.google.com/file/d/1ICDM3g6HdT17-qsvyyaAgg3lQPHFpB4F/view?usp=drivesdk
32)
ಮೂಲ ಹಾಡು - ನೀರ್ಮಿಳಿ ಪೀಲಿಯಿಲ್
ಮಲಯಾಳಂ ಚಿತ್ರ - ವಚನಮ್
ನನ್ನ ಅನುವಾದ -
ಕಣ್ಣಲಿ ಕಂಬನಿ ತುಂಬಿರಲು
ಅವುಗಳ ನೀನು ತಡೆದಿರಲು
ಕಂಬನಿ ತೊಡೆಯದೆಯೇ
ನಾ ಏನನು ನುಡಿಯದೆಯೇ
ನಿಂತೆನು ಪರಕೀಯ ನಾ
ಪೂರಾ ಪರಕೀಯ
ಎದೆಯ ಒಳಗೋ ಸ್ನೇಹದ ಕಡಲು
ಹೊರಹೊಮ್ಮಲೆ ಇಲ್ಲ ಒಂದು ಹನಿ ತಾ
ಮನಸಿನ ಭಾವವ ಮನದಲಿ ಅಡಗಿಸಿ
ಕುಳಿತೆವು ಗೆಳತಿ ಮಾತಿರದೆ
ಅಜ್ಞಾತ ಸಹಯಾತ್ರಿಕ ನಾನು
ನಾ ಬಲ್ಲೆನು ನಿನ್ನೆದೆ ತುಡಿತಗಳ
ಅರಿಯದೆ ವಿನಿಮಯ ಮಾಡಿದೆವೆ?
ಬಯಕೆಗಳ ಮತ್ತು ನೋವುಗಳ
ನನ್ನ ಹಾಡಿಗೆ ಕೊಂಡಿ - https://drive.google.com/file/d/1ICqRbvddv3NZ4L6_9965Mrh5vnmgPV6y/view?usp=drivesdk
33)
ಮೂಲ ಹಾಡು - ಪರಬತ್ ಕೇ ಪೀಛೆ
ಹಿಂದಿ ಚಿತ್ರ - ಮೆಹಬೂಬಾ
ನನ್ನ ಅನುವಾದ -
ಪರ್ವತದ ಆಚೆ
ಅಲ್ಲೊಂದು ಹಳ್ಳಿ
ಆ ಹಳ್ಳಿಯಲ್ಲಿ ಇಬ್ರು
ಪ್ರೇಮಿ ಇದ್ದಾರೆ
ನಾವಲ್ಲ ಅವರು
ಅವರನ್ನು ಜನರು
ಹುಚ್ಚರು ಅಂತ
ಕರಿತಾರೇ
ನನ್ನ ಹಾಡಿಗೆ ಕೊಂಡಿ - https://drive.google.com/file/d/1ICqRbvddv3NZ4L6_9965Mrh5vnmgPV6y/view?usp=drivesdk
34)
ಮೂಲ ಹಾಡು - ಪೂಛೋನ ಕೈಸೆ ಮೈನೆ ರೈನ ಬಿತಾಯೀ
ಹಿಂದಿ ಚಿತ್ರ - ಮೇರಿ ಸೂರತ್ ತೇರಿ ಆಂಖೇ
ನನ್ನ ಅನುವಾದ -
ಕೇಳದೆ ಇರು
ಇರುಳ ಹೇಗೆ ಕಳೆದೆ
ಯುಗವೊಂದರ ಹಾಗೆ
ಕ್ಷಣವು ಕಳೆಯಿತು
ಯುಗಗಳೇ ಕಳೆದರು
ನಿದಿರೆ ಬರಲಿಲ್ಲ
ನನ್ನ ಹಾಡಿಗೆ ಕೊಂಡಿ - https://drive.google.com/file/d/1IFstgV3CqHLxDw0eG3V034ciG5o4BrXA/view?usp=drivesdk
35)
ಮೂಲ ಹಾಡು - ಸಾಂಝ ಢಲೆ ಗಗನ ತಲೇ
ಹಿಂದಿ ಚಿತ್ರ - ಉತ್ಸವ್
ನನ್ನ ಅನುವಾದ -
ಸಂಜೆಯ ಈ ಆಗಸದಡಿ
ನಾನೆನಿತು ಏಕಾಕಿ
ಕವಿಯುತಿದೆ ಕಂಗಳಿಗೆ
ಕತ್ತಲು ತಾ ಅವಸರದಿ
ನನ್ನ ಹಾಡಿಗೆ ಕೊಂಡಿ - https://drive.google.com/file/d/1IGTp4_CANJo4igPYZcJlnSYRI5V6dRMu/view?usp=drivesdk
36)
ಮೂಲ ಹಾಡು - ಸನ್ಯಾಸಿನಿ ನಿನ್ ಪುಣ್ಯಾಶ್ರಮತ್ತಿಲ್
ಮಲಯಾಳಂ ಚಿತ್ರ - ರಾಜಹಂಸಂ
ನನ್ನ ಅನುವಾದ -
ಸನ್ಯಾಸಿನಿ ನಿನ ಪುಣ್ಯಾಶ್ರಮಕೆ ನಾ
ಸಂಜೆಯ ಹೂಗಳ ತಂದೆನು
ಯಾರೂ ತೆರೆಯದ ಬಾಗಿಲ ಬಳಿಯಲಿ
ನಿಂತೆನು ಪರಕೀಯನಂತೆ
ನನ್ನ ಹಾಡಿಗೆ ಕೊಂಡಿ - https://drive.google.com/file/d/1IJrBgT6kpCmyVzAn0tZVxN6f_zY6xaG0/view?usp=drivesdk
37)
ಮೂಲ ಹಾಡು - ತೇರೆ ಬಿನ ಸೂನಾ ಮೇರಿ ಮನ ಕೆ ಮಂದಿರ
ಹಿಂದಿ ಚಿತ್ರ - ಸಾವನ ಕೋ ಆನೇ ದೋ
ನನ್ನ ಅನುವಾದ -
ನಿನ್ನ ವಿನಹ ಶೂನ್ಯ
ನನ ಮನದಾ ಮಂದಿರ
ಬಾರೆ ಬಾ , ಬಾರೆ ಬಾ
ಓ ನಲ್ಲೆ , ಬಾರೆ ಬಾ
ಕಾಲದ ನದಿಯು
ಹರಿದಿದೆ ಮುಂದೆ
ಜನರೂ ಕೂಡ
ಅಂತೆಯೇ
ಆದರೆ ನಾನು
ಒಂದೆಡೆ ನಿಂತೆ
ನಿನ್ನಯ ದಾರಿಯ
ಕಾಯುತ
ನನ್ನ ಗೆಳತೀ
ಹೇಳು ಎಂದು
ಮಧುರ ಮಿಲನ
ನಂದು ನಿನ್ನದು
ನನ್ನ ಹಾಡಿಗೆ ಕೊಂಡಿ -https://drive.google.com/file/d/1kgWk8JMX_79AbPhFBCK268YZ5OPQocIn/view?usp=drivesdk
38)
ಮೂಲ ಹಾಡು - ತುಂ ಗಗನ್ ಕೀ ಚಂದ್ರಮಾ ಹೋ
ಹಿಂದಿ ಚಿತ್ರ - ಸತಿ ಸಾವಿತ್ರಿ
ನನ್ನ ಅನುವಾದ -
ನೀನು ಬಾನಿನ ಚಂದ್ರಮ
ನಾನು ಭೂಮಿಯ ನೈದಿಲೆ
ನೀನು ಪ್ರೇಮದ ದೇವತೆ
ನಿನಗೆ ಅರ್ಪಿತ ಹೂವು ನಾ
ನೀನು ಪೂಜೆ ನಾ ಪೂಜಾರಿ
ನೀನು ಅಮೃತ ನಾ ನೀರಡಿಸಲು
ನೀನು ಸಾಗರದ ಆಳವು
ದಡದ ತೆರೆಯು ನಾ
ನೀನು ದಿವ್ಯ ಸಂಗೀತವು
ಅರ್ಧ ಸಾಲಿನ ಚರಣ ನಾ
ನೀನು ದೇಹ ನಾನು ನೆರಳು
ನೀನು ಕ್ಷಮೆಯು ನಾ ಅಪರಾಧಿಯು
ನನ್ನ ಹಾಡಿಗೆ ಕೊಂಡಿ -
https://drive.google.com/file/d/1IYGU-sXmk9cgaOBlO_ySxVAOWhhhydba/view?usp=drivesdk
39)
ಮೂಲ ಹಾಡು - ವಕ್ತ ಕರತಾ ಜೋ ವಫಾ
ಹಿಂದಿ ಚಿತ್ರ - ದಿಲ್ ನೇ ಪುಕಾರಾ
ನನ್ನ ಅನುವಾದ -
ಕಾಲ ಕೂಡಿ ಬಂದಿದ್ರೆ
ನೀ ನನ್ನಾಕೆ ಆಗಿರ್ತಿದ್ದಿ
ಇಲ್ದಿದ್ರೆ ಈ ರೀತಿ
ಗೆದ್ದಿರೋ ಪಣವ ಸೋಲ್ತಿದ್ನೇ
ನನ್ನ ಹಾಡಿಗೆ ಕೊಂಡಿ - https://drive.google.com/file/d/1IauQyKhRG4i--9vPlen7tMPdBQVUuqnK/view?usp=drivesdk
40)
ಮೂಲ ಹಾಡು - ಏ ಜಮೀನ್ ರುಕ ಜಾಯೆ
ಹಿಂದಿ ಆಲ್ಬಂ - ತೇರಾ ಚೆಹರಾ ( ಅಡ್ನಾನ್ ಸಾಮಿ)
ನನ್ನ ಅನುವಾದ -
ಭೂಮಿಯು ತಾ ತಿರುಗದು
ಬಾನದು ಕೈಗೆ ಸಿಗುವುದು
ನಿನ್ನ ಮೊಗವು ಕಣ್ಣ ಮುಂದೆ ಬಂದಿರೆ
ನನ್ನ ಹಾಡಿಗೆ ಕೊಂಡಿ - https://drive.google.com/file/d/1IbXa4Rt2M7LWsTMEelxFM1cRTnfCTX2Z/view?usp=drivesdk