ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 5

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 5

ಈತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.

 

ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.

 

ಅವುಗಳನ್ನು ಸಾಧ್ಯವಾದರೆ ಸುಧಾರಿಸಿ, ಪೂರ್ತಿಗೊಳಿಸಿ ಸ್ನೇಹಿತರೊಡನೆ ಮತ್ತು ಸಂಪದಿಗರೊಡನೆ ಹಂಚಿಕೊಳ್ಳಿ ಮತ್ತು ಸಮಾಜದಲ್ಲಿನ ಸಂತೋಷದ ಮಟ್ಟವನ್ನು ಹೆಚ್ಚಿಸಿ!

 

41)

 

ಮೂಲ ಹಾಡು - ಯೇ ಜಮೀನ್ ಗಾ ರಹಾ ಹೈ

ಹಿಂದಿ ಚಿತ್ರ - ತೇರಿ ಕಸಮ

 

ನನ್ನ ಅನುವಾದ -

ಬಾನಲೀ ನೀಲಿಯಂತೆ

ಕಾನಲೀ ಹಸಿರಿನಂತೆ

ಮನದೆ ತುಂಬಾ ಸದಾ ನಿನ್ನ ಚಿಂತೆ

 

ಜಾರಿ ಬಾನಿಂದ ತಾರೆ ಆದರೋ ನಿನ್ನ ಕಣ್ಣು

ತಿಂಗಳ ಬೆಳಕೆ ತಾನು ಆಯಿತೋ ಮೈಯ ಬಣ್ಣ

ಸೋತವೋ ನಿನ್ನ ಕಂಡು ಕವಿಗಳ ಮಾತು ನೂರು

 

ಮಗುವಿನ ಮುಗ್ಧ ಭಾವ ಸೆಳೆದಿದೆ ನನ್ನ ಕಣ್ಣ

ನೋಡುತ ನಿನ್ನ ಹೀಗೆ ಮರೆಯುವೆ ನನ್ನೇ ನಾನು

ಕಾಣುವೆ ನಿನ್ನನೆಲ್ಲು

ಕೇಳುವೆ ನಿನ್ನ ದನಿಯ

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1J-HFLNeqztsb2U0h-Ljkdg_PGLb6-Vmz/view?usp=drivesdk

 

42)

 

ಮೂಲ ಹಾಡು - ಜಿಂದಗೀ ಭರ್ ನಹೀ ಭೂಲೇಗೀ 

 

ಹಿಂದಿ ಚಿತ್ರ - ಬರಸಾತ್ ಕೀ ರಾತ್

ನನ್ನ ಅನುವಾದ -

ಬಾಳಿನುದ್ದ ಮರೆಯಲಾರೆ

ಮಳೆಯ ಆ ರಾತ್ರಿ

ಅರಿಯದಿದ್ದ ಚೆಲುವೆಯೊಡನೆ 

ಕಲೆತ ಆ ರಾತ್ರಿ

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1J3XheksZ4DCMbnUoZlycIlIlG8WaqDVQ/view?usp=drivesdk

 

43)

 

ಮೂಲ ಹಾಡು - ಮೌನ ಮೇಲ ನೋಯಿ

ತೆಲುಗು ಚಿತ್ರ - ಸಾಗರ ಸಂಗಮಂ

 

ನನ್ನ ಅನುವಾದ - 

ಮೌನವೇಕೆ ನಲ್ಲೆ

ಈ ಮಧುರ ರಾತ್ರಿಯಲ್ಲಿ

ಚಂದ್ರನ ಬೆಳಕು ತಾ

ಕಣ್ಣಲೀ ತಣ್ಣಗೆ

ಮಿನುಗಿರಲು ಮೆಲ್ಲಗೆ

 

ಮಧುರ ಈ ರಾತ್ರಿಯಲ್ಲಿ

ಎಳೆಯ ಹೃದಯ ಭಾರವು

ಮನದಲೋ ಸಂಗೀತವು

ತುಟಿಯಲೋ ಮೌನವು

ದೀರ್ಘವಾದ ರಾತ್ರಿಗಳನು

ನಾವು ತಾಳದಾದೆವು

ಹೀಗೇಕೆ ಹೇಳೆಯಾ

 

 

ನಮ್ಮದೀ ಸ್ನೇಹವು

ಪ್ರೇಮ ರೂಪ ಪಡೆವುದೇ

ನಮ್ಮ ಈ ಹೆಜ್ಜೆಗಳು

ಸಪ್ತಪದಿಯವಾಗುವವೇ

ನಮ್ಮ ಈ ಕನಸಿವು

ತಾವು ನನಸಾಗುವವೇ

ಎಂತೆಲ್ಲ ಆತಂಕ ಮನದಲಿ

 

 

 

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1J6MD1P8x5m94G85Lam7LtjE8OnQFMEsh/view?usp=drivesdk

 

44)

 

ಮೂಲ ಹಾಡು - ಪ್ಯಾರ್ ಚಾಹಿಯೇ ಮುಝೆ ಜೀನೆ ಕೇ ಲಿಯೆ

ಹಿಂದಿ ಚಿತ್ರ - ಮನೋಕಾಮನಾ

 

ನನ್ನ ಅನುವಾದ -  

ಒಲವು ಬೇಕಿದೆ

ನಾನು ಬದುಕಲು, ನಿನ

ಒಲವು ಬೇಕಿದೆ

ನಾನು ಬದುಕಲು

ನನಗೋ ಪ್ರತಿಕ್ಷಣ

ನಿನ ಹಾಜರಿ ಬೇಕಿದೆ

ರೂಪಲಾವಣ್ಯ ಲೋಕಕೆ ಬೇಕು

ನನಗೋ ಮನಸಿನ ಚೆಲುವು

ನಿನ್ನಲಿದೆ ಅದು ತಾನು

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1JHhYkRaqbw-QbgRxSVM0dkhUqc0ELzoD/view?usp=drivesdk

 

45)

 

ಮೂಲ ಹಾಡು - ತುಮ್ ಕೋ ದೇಖಾ ತೋ ಯಹ್ ಖಯಾಲ್ ಆಯಾ

 

ಹಿಂದಿ ಚಿತ್ರ - ಸಾಥ್ ಸಾಫ್

ನನ್ನ ಅನುವಾದ -

ನಿನ್ನ ಕಂಡ ದಿನವೆ ನಾ ಅಂದೆ

ಬಾಳೇ ಬಿಸಿಲು ನೀನೆ ತಂಗಾಳಿ

 

ನೀನು ಬಂದಂದು ಬಾಳು ತಿಂಗಳೊಳು

ಹಗಲು ಇರುಳು ಹರುಷದ ಹೊನಲು

 

ಅರಳಿದವು ಇಂದೂ ಕೂಡ ಬಯಕೆಯ ಹೂವು 

ಬಾಡಿದವು ಇಂದೇ ಕೂಡ ಬಯಕೆಯ ಹೂವು 

 

ಹಾಡಲಾರೆ ಯಾವ ಹಾಡನು ನಾ

ಹೊಮ್ಮಿತೇಕೇ ಹೃದಯದೀ ತಾನು

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1JPaIFcRYVXLDwcy1ms6gOyh77qez5BNj/view?usp=drivesdk

 

46)

 

ಮೂಲ ಹಾಡು - ಸಂಭಾಲಾ ಹೈ

ಹಿಂದಿ ಚಿತ್ರ - ನಾರಾಜ್

 

ನನ್ನ ಅನುವಾದ - 

ತಿಳಿಹೇಳುವೆ ನನ್ನ ಹೃದಯಕ್ಕೆ ಬಹಳ

ಆದರೂ ಬಾಯಿಗೆ ಬರುವುದು ನಿನ್ನ ಹೆಸರು

ಎಲ್ಲಿ ಗುಟ್ಟನು ಇಟ್ಟುಕೊಳ್ಳೆನೋ

ಬದುಕಲ್ಲಿ ಅಂತಹ ದಿನ ಬಂದಿದೆ

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1JQ7z7ll7MmlJmGCljzXbrEvfqCn61q-b/view?usp=drivesdk

 

47)

 

ಮೂಲ ಹಾಡು - ತೇರೆ ಲಿಯೆ ಹಂ ಹೈ ಜಿಯೆ

ಹಿಂದಿ ಚಿತ್ರ - ವೀರ್ ಝಾರಾ

 

ನನ್ನ ಅನುವಾದ - 

ನಿನಗಾಗಿಯೇ ನಾ ಬದುಕಿಹೆ

ಹೊಲಿದು ತುಟಿಗಳ

ನಿನಗಾಗಿಯೇ ನಾ ಬದುಕಿಹೆ

ತಡೆದು ಕಂಬನಿ

ಎದೆಯಲಿ ಬೆಳಗಿರೆ

ಒಲವಿನಾ ದೀಪ

ನಿನಗಾಗಿಯೇ

ನಿನಗಾಗಿಯೇ

 

ನನ್ನ ಹಾಡಿಗೆ ಕೊಂಡಿ - https://drive.google.com/file/d/1JQYfPKydadRGUgElxmVli15goLccrelH/view?usp=drivesdk

 

48)

 

ಮೂಲ ಹಾಡು - ಯಹ ತೇರಾ ಘರ್ 

ಹಿಂದಿ ಚಿತ್ರ - ಸಾಥ್ ಸಾಥ್

 

ನನ್ನ ಅನುವಾದ -

ಈ ಮನೆ ನಿನ್ನದು

ಈ ಮನೆ ನನ್ನದು

ಬರಲು ಇಲ್ಲಿ ಒಳಗಡೆ

ಕೇಳಬೇಕು ಅನುಮತಿ

ನನ್ನದು ನಿನ್ನದು

ಈ ಮನೆ ನಿನ್ನದು

ಈ ಮನೆ ನನ್ನದು

ಇದು ಬಹಳ ಸುಂದರ

ಇದು ಬಹಳ ಸುಂದರ

 

ನಾನು ಹಾಡಿದ ಹಾಡಿಗೆ ಕೊಂಡಿ -   https://drive.google.com/file/d/1pFXwyzkpLS3sFpf9q7gVuqDWd59-I8t4/view?usp=drivesdk

 

 

 

 

 

49) 

 

ಮೂಲ ಹಾಡು - ಮೈನೇ ಪೂಛಾ ಹೈ ಚಾಂದ್ ಸೆ

ಹಿಂದಿ ಚಿತ್ರ - ಅಬ್ದುಲ್ಲಾ

 

ನನ್ನ ಅನುವಾದ -

ನಾನು ಕೇಳ್ದೆ ಚಂದ್ರನ

ನೋಡಿದೀಯ ಎಲ್ಲಿಯಾದರೂ

ಇವಳ ಹಾಗೆ ಚೆಲುವೆಯ

ಆಗ ಹೇಳ್ದ ಚಂದಿರ

ಬೆಳದಿಂಗಳ ಆಣಿಯಾಗಿಯೂ 

ಇಲ್ಲ, ಇಲ್ಲ, ಇಲ್ಲ!

 

ನಾನು ಹಾಡಿದ ಹಾಡಿಗೆ ಕೊಂಡಿ - https://drive.google.com/file/d/1JRoiBF8suUuM92nFwV9Xc5twifDhIKWX/view?usp=drivesdk

 

 

50) ಮೂಲ ಹಾಡು - ಅಬ ಮುಝೆ ರಾತ ದಿನ

ಹಿಂದಿ ಚಿತ್ರ - ದೀವಾನಾ

 

ನನ್ನ ಅನುವಾದ -

ಈಗ ನಂಗೆ ಇಡೀ ದಿನ

ನಿನದೇ ವಿಚಾರವು

ಈಗ ನಿನ್ನ ಪ್ರೇಮದೆ

ಮರುಳನಂತೆ ಆಡುವೆ

 

ನಾನು ಹಾಡಿದ  ಹಾಡಿಗೆ ಕೊಂಡಿ - https://drive.google.com/file/d/1J_qPUc7IBU5A6hBcYJ4J61iiTOIkN3Df/view?usp=drivesdk

Rating
Average: 4 (1 vote)