ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 8 - 66ನೇ ಹಾಡು!
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.
ಇತ್ತೀಚೆಗೆ ಇನ್ನೊಂದು ಹಾಡನ್ನು ಅನುವಾದಿಸಿ ಹಾಡಿದ್ದೇನೆ . ಕೆಳಗೆ ಅದರ ಪಠ್ಯವಿದೆ. ಹಾಡನ್ನು ಕೇಳಲು ಕೊಂಡಿಯನ್ನೂ ಕೊಟ್ಟಿದ್ದೇನೆ.
ಮೂಲ ಹಾಡು - ಪಿಯಾ ಬಿನಾ ಪಿಯಾ ಬಿನಾ
ಹಿಂದಿ ಚಲನಚಿತ್ರ - ಅಭಿಮಾನ್
ನನ್ನ ಅನುವಾದ -
ನಲ್ಲ ಇಲ್ಲ ...ನಲ್ಲ ಇಲ್ಲ ....
ನಲ್ಲ ಇಲ್ಲ ಸನಿಯಾ
ಹಾಡದು ಕೊರಳಿದು ನನ್ನದು.
ನಲ್ಲ ಮುನಿದು ಹೋಗೆ
ತುಟಿಯಿಂದ ನನ್ನ ಸಂಗೀತ ತೆರಳಿ
ನಾ ಹಾಡಿದಾಗ
ಅನಿಸುವುದು ನನ್ನ
ಪ್ರತಿ ಹಾಡು ಸುಳ್ಳು!
ಹೀಗೆ ಮುನಿದ
ಓ, ಹೀಗೆ ಮುನಿದ
ನನ್ನ ಇನಿಯ
ಅವನ ದನಿ ಇಲ್ಲ
ಕವಿದಂತೆ ಮೋಡ
ಎಲ್ಲೆಲ್ಲೂ ಮೌನ
ಹಾಡದಿರುವ ಕೋಗಿಲೆ
ಕುಣಿಯದಿರುವ ನವಿಲು
ಇರುವಂತೆ ಮೌನ.
ಹಗಲು ಖಾಲಿ
ಓ, ಹಗಲು ಖಾಲಿ
ಇರುಳು ಖಾಲಿ.
ಹಾಡನ್ನು ಕೇಳಲು ಕೊಂಡಿ - https://drive.google.com/file/d/1blDB1k4lHDrssELmculWjf1xEUJRqM4X/view?usp=drivesdk