ಪಾಡ್ಕಾಸ್ಟ್ : ನೇತ್ರದಾನ - ಹೇಗೆ? ಯಾವಾಗ? ಎಲ್ಲಿ?

ಪಾಡ್ಕಾಸ್ಟ್ : ನೇತ್ರದಾನ - ಹೇಗೆ? ಯಾವಾಗ? ಎಲ್ಲಿ?

ಕಣ್ಣಿಲ್ಲದ ಕಷ್ಟ ಕಣ್ಣಿರುವ ನಮಗೆ ಊಹಿಸುದು ಅಸಾಧ್ಯವೇ. ಚಿಕ್ಕಂದಿನಲ್ಲಿ ನಾವು ದಿನವಿಡೀ ಮೌನವಾಗಿರುವ ಒಂದು ಆಟ(?)ವಾಡುತ್ತಿದ್ದೆವು. ನೀವೊಮ್ಮೆ ಮಾಡಿನೋಡಿದರೆ ಗೊತ್ತಾಗಬಹುದು. ಇಡೀ ದಿನ ಬಿಡಿ, ಒಂದೆರಡು ಘಂಟೆ ಸುಮ್ಮನಿರುವುದು ಭಯಂಕರ ಕಷ್ಟ. ಕಣ್ಣು, ಕಿವಿ, ಮೂಗು, ಬಾಯಿಗಳೆಲ್ಲ ಸರಿಯಾಗಿದ್ದರೆ ಅದರಿಂದ ದೊಡ್ಡ ವರ ಬೇರೊಂದಿಲ್ಲ.
ಹೀಗಿರುವಾಗ, ನಮ್ಮ ನಂತರಕ್ಕೆ ಬೇರೊಬ್ಬರಿಗೆ ನಮ್ಮ ಕಣ್ಣು ಬೆಳಕಾಗಬಹುದಾದರೆ ಅದು ಹೇಗೆ? ಯಾವಾಗ? ತೆಗೆದುಕೊಳ್ಳಬೇಕಾದ ಕ್ರಮಗಳೇನು?
ಮೊನ್ನೆ ಆಕಸ್ಮಿಕವಾಗಿ ನನ್ನ ಸಂಬಂಧಿ ನೇತ್ರತಜ್ನರಾದ ಡಾ|ವಿಶ್ವನಾಥ ಭಟ್ ಕಾನಾವು ಅವರ ಜೊತೆ ನೇತ್ರದಾನದ ಬಗ್ಗೆ ನಾನು ಮತ್ತು ಭಾವ ಪ್ರವೀಣ ಶಂಕರ್ ಚರ್ಚಿಸುತ್ತಿದ್ದೆವು.

ಇದನ್ನು ಮತ್ತೊಮ್ಮೆ ಚರ್ಚಿಸಿ ಒಂದು ಪಾಡ್ಕಾಸ್ಟ್ ರೂಪದಲ್ಲಿ ಪ್ರಕಟಿಸಲು ಸಾಧ್ಯವೇ ಎಂದು ಅವರನ್ನು ಕೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿಕೊಂಡರು. ತಮ್ಮ ಬಿಡುವಿರದ ದಿನಚರಿಯಲ್ಲಿ ಸಮಯ ಮಾಡಿಕೊಂಡ ಅವರಿಗೆ ಮತ್ತೊಮ್ಮೆ ಧನ್ಯವಾದಗಳು. ತಾಂತ್ರಿಕ ಸಹಕಾರ ಒದಗಿಸಿದ ಪ್ರವೀಣ್ ಗೆ ವಂದನೆಗಳು.

(ನಾವಿಬ್ಬರೂ ಮಂಗಳೂರಿನವರಾದ್ದರಿಂದ, ಸಂಭಾಷಣೆ ಮಂಗಳೂರು ಕನ್ನಡದಲಿ ಬಂದು ಬಿಟ್ಟಿದೆ, ಕೇಳುಗರ ಸಹಕಾರ ಇರಲಿ..)

ಪಾಡ್ಕಾಸ್ಟ್ ಕೇಳಿ ನಮ್ಮಲ್ಲೊಂದಿಬ್ಬರಾದರೂ ದಾನಕ್ಕೆ ಸಿದ್ಧರಾದರೆ ಪಾಡ್ಕಾಸ್ಟ್ ಸಾರ್ಥಕವಾದಂತೆ. count me in...

Vasanth Kaje

 

Rating
No votes yet

Comments