ಪಾತ್ರಗಳಿಗೆ ಜೀವ ತುಂಬಿದ ಗೆಳೆಯರು

ಪಾತ್ರಗಳಿಗೆ ಜೀವ ತುಂಬಿದ ಗೆಳೆಯರು

ನಾನು ಸಂಪದಕ್ಕೆ ಬರುವ ಮುನ್ನ ಯಾವ ರೀತಿಯ ಹಾಸ್ಯ ಬರೆದರೆ ಅಲ್ಲಿನ ಗೆಳೆಯರಿಗೆ ತಲುಪುತ್ತದೆ ಎನ್ನುವ ಚಿಂತನೆ ಕಾಡುತ್ತಿತ್ತು. ಇದಕ್ಕೆ ಮಡದಿ ಹಾಗೂ ನನ್ನ ಕೆಲ ಸ್ನೇಹಿತರು, ಪಾತ್ರಗಳನ್ನು ಸೃಷ್ಟಿಸಿ ಅದರ ಮುಖಾಂತರ ಕಥೆ ಹೆಣೆದರೆ ಅದೂ ಒಂದಕ್ಕೊಂದು ಜೊತೆಗೂಡಿದರೆ ಖಂಡಿತಾ ವರ್ಕ್ ಔಟ್ ಆಗುತ್ತದೆ ಎಂದಿದ್ದರು. ಅವಾಗ ಹುಟ್ಟಿಕೊಂಡಿದ್ದೇ ಒಂದು ಹಳ್ಳಿ, ಅಲ್ಲಿನ ವಾಸನೆ ಗೌಡಪ್ಪ, ಸುಬ್ಬ, ಸೀನ, ಕಟ್ಟಿಗೆ ಒಡೆಯೋ ಕಿಸ್ನ, ತಂತಿ ಪಕಡು ಸೀತು, ಸುಬ್ಬಿ ಹೀಗೆ ಹಲವರು. ಕೆಲವೊಮ್ಮೆ ಲೇಖನಗಳನ್ನು ಬರೆಯುವಾಗ ನಾನೇ ಸಾಕಷ್ಟು ಬಾರಿ ನಕ್ಕಿದ್ದೂ ಇದೆ. ಏನ್ರೀ ಒಬ್ಬರೇ ನಗ್ತಾ ಇದೀರಾ ಅಂತಿದ್ಲು ನನ್ನ ಹೆಂಡರು. ಅವಳಿಗೆ ಆ ಬರಹಗಳನ್ನು ತೋರಿಸಿದಾಗ ಇಂತಹದೊಂದು ಹಳ್ಳಿ ಹಾಗೇ ಇಂತಹ ಸ್ನೇಹಿತರು ನಿಜವಾಗಿಯೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತಿದ್ಲು.

ಇದೀಗ ಸಂಪದ ನೋಡಿದರೆ ಸಾಕಷ್ಟು ಖುಷಿಯಾಗುತ್ತದೆ. ನಾನು ಸೃಷ್ಟಿಸಿದಂತಹ ಪಾತ್ರಗಳಿಗೆ ಎಲ್ಲರೂ ಜೀವ ತುಂಬಿದ್ದೀರಾ. ನೀವು ಬರೆದಂತಹುದನ್ನು ನಾನು ಓದಿ ಎಂಜಾಯ್ ಮಾಡುತ್ತಿದ್ದೇನೆ. ಖಂಡಿತಾ ನನಗೆ ಯಾವುದೇ ರೀತಿಯ ಬೇಜಾರಿಲ್ಲ. ಬದಲಾಗಿ ಇಂತಹ ಒಂದು ಹಳ್ಳಿ ಏನಾದರೂ ಇದೆಯಾ ಎನ್ನುವ ಕುತೂಹಲ ಆರಂಭವಾಗಿ ಬಿಟ್ಟಿದೆ. ಒಬ್ಬರನ್ನೊಬ್ಬರು ಕಾಲು ಎಳೆಯುವುದು. ಗೌಡಪ್ಪನಿಗೆ ಎಷ್ಟೇ ವ್ಯಂಗ್ಯ ಮಾಡಿದರೂ ಮತ್ತೆ ಇವರೊಡನೆ ಸೇರುವುದು. ಈ ತರಹದ ಜೀವನ ಎಷ್ಟು ಚೆನ್ನಾಗಿರುತ್ತದೆ ಅಲ್ವಾ. ಗಣೇಶ್, ಮಂಜಣ್ಣ, ಶಾನಿ, ನಾವಡರು, ರಾಯರು, ಜಯಂತ್, ಗೋಪಾಲ್ , ಕಾಮತ್ ಹೀಗೆ ಹಲವರು ಗೌಡಪ್ಪನನ್ನು ವಿವಿಧ ಕೋನಗಳಲ್ಲಿ ನೋಡುವ ಮೂಲಕ ಹಾಸ್ಯ ಹೊರ ಹೊಮ್ಮಿಸಿದ್ದೀರಿ. ನನಗಂತೂ ತುಂಬಾ ಖುಷಿಯಾಯಿತು. ನಿಮ್ಮೆಲ್ಲರ ಬರಹಗಳಲ್ಲಿ, ನನ್ನ ಹಲವು ಲೇಖನಗಳಲ್ಲಿ ಬಂದಿರುವಂತಹ ಪಾತ್ರವನ್ನು ಬರೆದಿದ್ದೀರಾ. ಅಂದರೆ ನೀವುಗಳು ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದೀರಲ್ಲಾ ಎನ್ನುವ ಸಂತೋಷವಾಯಿತು.  ಮುಂದಿನ ದಿನಗಳಲ್ಲೂ ನಿಮ್ಮ ಬರಹಗಳು ಹೀಗೆ ಮುಂದುವರೆಯುತ್ತಿರಲಿ. ಗೌಡಪ್ಪ ಎಲ್ಲರ ಸ್ವತ್ತು. ನನಗೆ ಯಾವುದೇ ರೀತಿಯ ಬೇಸರವಿಲ್ಲ. ನಿಮ್ಮ ಹಾಸ್ಯ ಘಟನೆಗಳನ್ನು ಗೌಡಪ್ಪನ ಮೂಲಕ ಹೊರ ಹಾಕಿ. ನೀವು ನಗಿ. ನಮ್ಮನ್ನು ನಗಿಸಿ.

ಕೋಮಲ್

Rating
No votes yet

Comments