ಪಾನ(ಕ) ಸಮಾರಾಧನೆ

ಪಾನ(ಕ) ಸಮಾರಾಧನೆ

ಶ್ರೀರಾಮ ನವಮಿಯ ದಿನದಂದು ಎಲ್ಲೆಲ್ಲೂ ಪಾನಕ-ಕೋಸಂಬರಿ ವಿತರಣೆ ನಡೆಯಿತು. ಈ ಸುದ್ದಿ ದಿನಪತ್ರಿಕೆ, ರೇಡಿಯೋ/ಟಿ.ವಿ. ವಾರ್ತೆ ಇವುಗಳಲ್ಲಿ ಎಲ್ಲ ಬಿತ್ತರಗೊಂಡಿದ್ದೇನೋ ಸರಿ. ಆದರೆ, ಇದೇ ದಿನ ಸಂಜೆಯ ವೇಳೆಗೇ ಪಾನ(ಕ) ಸಮಾರಾಧನೆ ಹೆಚ್ಚೇ ನಡೆಯುತ್ತಿತ್ತು. ಎಂದಿನಂತೆ ಬಾರು-ರೆಸ್ಟೋರಂಟುಗಳ ನಂಟಿನಲ್ಲಿ ಪಾನ ಸಮಾರಾಧನೆ ಅವ್ಯಾಹತವಾಗಿ ನಡೆಯುತ್ತಿತ್ತು. ಅನೇಕ ಹಬ್ಬಗಳ (ಉದಾ: ಶಿವರಾತ್ರಿ, ಕೃಷ್ಣಾಷ್ಟಮಿ, ಇತ್ಯಾದಿ) ಒಂದೆರಡು ದಿನಗಳ ಮುಂಚೆಯೇ ಪತ್ರಿಕೆಗಳಲ್ಲಿ `ಮದ್ಯ-ಮಾಂಸ' ಮಾರಾಟ ಮಾಡುವಂತಿಲ್ಲ ಎಂದೆಲ್ಲ ಓದಿದ್ದ ನೆನಪು. ಆದರೆ ಇಂದಿನ ದಿನಗಳಲ್ಲಿ `ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ' ಎಂಬಂತೆ ಸಂಜೆಯಾಗುತ್ತಿದ್ದಂತೆ ಜನರ ಸರತಿ ಸಾಲುಗಳನ್ನು ಕಾಣಬಹುದು. ಭಾರತೀಯ ಸಂಸ್ಕೃತಿ ಮೇರು ಸಂಸ್ಕೃತಿ ಎಂದೆಲ್ಲಾ ಬೆಳಗ್ಗೇ ಹಾಡಿ-ಕುಣಿದು (???!!!), ಸಂಜೆಗೇ ಪಾನ(ಕ) ಸಮಾರಾಧನೆಗೆ ಮಾರು(ರಿ) ಹೋಗುತ್ತಿರುವುದು ವಿಷಾದದ ವಿಷಯ. ನೀವೇನಂತೀರಿ???

Rating
No votes yet

Comments