ಪಾಪ,ಪುಣ್ಯದ ಫಲ (ಶ್ರೀ ನರಸಿಂಹ 66)
ಪುಣ್ಯದ ಕರ್ಮಗಳನಾರು ಮಾಡಲಿಚ್ಚಿಸರು
ಅದರ ಫಲಗಳನು ಮಾತ್ರವೆ ಬಯಸುವರು
ಪಾಪ ಕರ್ಮಗಳಲೆ ಮನಸು ಮುಳುಗಿಹುದು
ಅದರ ಫಲಗಳ ಮಾತ್ರ ಪಡೆಯಲಿಚ್ಚಿಸದದು
ಭಾರ ಹೊತ್ತಿಹ ಬೆನ್ನು ನೇರವಾಗಿ ನಿಲದೆಂದು
ಪಾಪ ಕರ್ಮಗಳ ಜೀವನದಿ ಸುಖವಿರದೆಂದು
ಪಾಪ ಕರ್ಮಗಳಲಿ ನೀ ಮನಸ ತೊಡಗಿಸದಿರು
ಆತ್ಮಸಾಕ್ಷಿಗೆದುರಾಗಿ ನೀ ಎಂದು ನಡೆಯದಿರು
ಪಾಪ ಕರ್ಮದ ಹೊರೆಯಿಂದ ನೀ ಮುಕ್ತನಾಗಬೇಕು
ಸತ್ಕರ್ಮಗಳಿಂದಲಿ ಶ್ರೀ ನರಸಿಂಹನ ಮೆಚ್ಚಿಸಬೇಕು
Rating
Comments
"ಪುಣ್ಯದ ಕರ್ಮಗಳನಾರು
"ಪುಣ್ಯದ ಕರ್ಮಗಳನಾರು ಮಾಡಲಿಚ್ಚಿಸರು
ಅದರ ಫಲಗಳನು ಮಾತ್ರವೆ ಬಯಸುವರು
ಪಾಪ ಕರ್ಮಗಳಲೆ ಮನಸು ಮುಳುಗಿಹುದು
ಅದರ ಫಲಗಳ ಮಾತ್ರ ಪಡೆಯಲಿಚ್ಚಿಸದದು"
ಇದು ನಿಜ. ಕಷ್ಟ ಪಡದೆ -ಇಷ್ಟ ಪಡುವ ಎಲ್ಲ ಸಿಗಬೇಕು ನಮ್ಮದಾಗಬೇಕು ಎನ್ನುವವರು ನಾವ್...
ಆದ್ರೆ.....!
ಒಳ್ಳೆಯ ಚಿಂತನಾ -ಸದಾಶಯದ ಯಾವತ್ತೂ ಸಲ್ಲುವ ಬರಹ-
ಶುಭವಾಗಲಿ.
\।
In reply to "ಪುಣ್ಯದ ಕರ್ಮಗಳನಾರು by venkatb83
ಧನ್ಯವಾದಗಳು ವೆಂಕಟೇಶ್ ರವರೇ
ಧನ್ಯವಾದಗಳು ವೆಂಕಟೇಶ್ ರವರೇ
.....ಸತೀಶ್
ಸುಲಭಫಲಕ್ಕೆ ಆಶಿಸುವುದು ಸಾಮಾನ್ಯ
ಸುಲಭಫಲಕ್ಕೆ ಆಶಿಸುವುದು ಸಾಮಾನ್ಯ ಸಹಜ ಪ್ರವೃತ್ತಿ. ಒಳಿತು-ಕೆಡುಕುಗಳನ್ನು ತುಲನೆ ಮಾಡಿ ಮುಂದುವರೆಯುವುದು ಸಾಧಕರ ಗುಣ. ಸಾಮಾನ್ಯರೂ ಸಾಧಕರಾಗಲೆಂಬ ಆಶಯ ಹೊಮ್ಮಿಸಿರುವಿರಿ. ಧನ್ಯವಾದ, ಸತೀಶರೇ.
In reply to ಸುಲಭಫಲಕ್ಕೆ ಆಶಿಸುವುದು ಸಾಮಾನ್ಯ by kavinagaraj
ಧನ್ಯವಾದಗಳು ನಾಗರಾಜ್ ರವರೇ
ಧನ್ಯವಾದಗಳು ನಾಗರಾಜ್ ರವರೇ
.....ಸತೀಶ್
ಸತೀಶ್ ಅವರೆ,
ಸತೀಶ್ ಅವರೆ,
ಆತ್ಮಸಾಕ್ಷಿಗೆದುರಾಗಿ ನೀ ಎಂದು ನಡೆಯದಿರು +೧೦೦
ಬಹುಶಃ ಇದರ ಮಾತನ್ನು ಕೇಳಿದರೆ ಯಾವುದೇ ಜಿಜ್ಞಾಸೆ ಇರುವುದಿಲ್ಲ. ಎಂದಿನಂತೆ ಉತ್ತಮ ವಿಚಾರದ ಕವನ/ಸ್ತುತಿ.
In reply to ಸತೀಶ್ ಅವರೆ, by makara
ಧನ್ಯವಾದಗಳು ಶ್ರೀಧರ್ ರವರೇ ....
ಧನ್ಯವಾದಗಳು ಶ್ರೀಧರ್ ರವರೇ .....ಸತೀಶ್