ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!

ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!

canon sx100 ಮಸ್ತ್ ಕೆಮರಾ, 1ox ಜೂಮ್ ಉಳ್ಳದ್ದು, ದೂರದಲ್ಲಿರುವ, ಕಣ್ಣಿಗೆ ಕಾಣದ ಅಕ್ಕರಗಳನ್ನು ಕೂಡ ಓದಬಹುದು ಇದರಿಂದ ಜೂಮ್ ಮಾಡಿ. ಇದು ನನ್ನ ಮೊತ್ತ ಮೊದಲ ಡಿಜಿಟಲ್ ಕೆಮರಾ, ತುಂಬ ಒಳ್ಳೆ ಪಾಪೆಗಳು ಮೂಡುತ್ತವೆ, SLR ಕೆಮೆರಾಗಳ ಮುಂದೆಲ್ಲ ಇದು ಬಚ್ಚಾ ಅಂತ ಗೊತ್ತು. photography ಅನ್ನುವದು, ಪದಗಳಲ್ಲಿ ಅಸ್ಟೇ ಗೊತ್ತಿರುವ ನನ್ನಂತವರಿಗೆ, ಅದೂ ಕೂಡ ಏನೆಲ್ಲ ಸೊಂತಿಕೆಗಳನ್ನು ಬಯಸುತ್ತೆ ಅಂತ ತಿಳಿಯೋಕೆ ಬಲ್ ಅನುಕೂಲ ಇದು. ನಮಗೆ ಸಿಗುವ ನೋಟ, ಬರೀ ಒಂದೇ ಒಂದು ಅರೆಗಳಿಗೆಯದು, ಮುಂದಿನ ಅರೆಗಳಿಗೆಯಲ್ಲಿ ಅದು ಇರುವದಿಲ್ಲ.

ಮೊನ್ನೆ ಇದರಿಂದಾಗಿ ಒಂದು ಸಂಗತಿ ತಿಳಿಯಿತು, ಇರುಳಲ್ಲಿ, ದೂರದ ಜಂಗಮ ದಿನಿಸು(moving object :)), ಕೆಮೆರಾದ flash ಮುಚ್ಚಿದ್ದರೆ, ಕೆಮೆರಾದಲ್ಲಿ ಅದನ್ನು ಸೆರೆ ಹಿಡಿಯುವದು ಬಲ್ ತ್ರಾಸು ಅಂತ. ಪಾಪೆ ಬ್ಲರ್ ಬರುತ್ತೆ. ಆದರೆ ಪಾಪೆ ಹಿಡಿಯುವವರ ಕೈ ಚಳಕದಿಂದ, ಮೂಡುವ ಆ ಬ್ಲರ್ ಕೂಡ ಪಾಸಿಟಿವ್ ಆಗಿ, ಮಾಮೂಲಿಗಿಂತ ಒಳ್ಳೆ ಪಾಪೆ ನೀಡಬಲ್ಲುದು.

ಕೆಳಗಿನ ಪಾಪೆ ಅದಕ್ಕೆ ಒಳ್ಳೆಯ ಮಾದರಿ.

 

 

Rating
No votes yet

Comments