ಪಾಪ, ಪಾಶ್ಚಾತ್ಯ ಅತ್ತೆ

ಪಾಪ, ಪಾಶ್ಚಾತ್ಯ ಅತ್ತೆ

ಅತ್ತೆ ಯರ ಬಗೆಗೆ ಇರುವ quote ಗಳ ಬಗ್ಗೆ ಗೂಗ್ಲ್ ಮಾಡ್ತಾ ಇದ್ದೆ (ಯಾಕೆ ಅಂತ ಕೇಳ್ಬಾರ್ದು). ಪಾಶ್ಚಾತ್ಯ ಗಂಡಸರಿಗೆ ತಮ್ಮ ಅತ್ತೆಯಂದಿರ ಬಗ್ಗೆ ಅಂಥ ಒಳ್ಳೆ ಅಭಿಪ್ರಾಯ ಇಲ್ಲ ಅಂತ ಕಾಣುತ್ತೆ. ಆದರೆ ಭಾರತೀಯ ಗಂಡು ಈ ವಿಷಯದಲ್ಲಿ ಅದೃಷ್ಟಶಾಲಿ. ಮಗಳು ಭದ್ರವಾಗಿರಲೆಂದು ಅತ್ತೆ ತಮ್ಮ ಅಳಿಯಂದಿರನ್ನು ತುಂಬಾ ಜೋಪಾನವಾಗಿ ನೋಡಿ ಕೊಳ್ಳುತ್ತಾರೆ. ಗಂಡನನ್ನು ಹೇಗೆ ನೋಡಿ ಕೊಳ್ಳಬೇಕೆಂದು ತನ್ನ ಮಗಳಿಗೂ ಬುದ್ಧಿ ಹೇಳುತ್ತಾಳೆ. ಆದರೆ ಈ ಅದೃಷ್ಟ ಮಹಿಳಾ ಮಣಿಗಳಿಗೆ ಮಾತ್ರ ಇಲ್ಲ. ಒಂದು ಕಡೆ ಅತ್ತೆ – ಅಳಿಯಂದಿರ ಸಂಬಂಧ ಸುಮಧುರವಾಗಿದ್ದರೆ ಮತ್ತೊಂದು ಕಡೆ ಅತ್ತೆ- ಸೊಸೆಯರ ಜಟಾಪಟಿ ಸೂರ್ಯನಷ್ಟೇ ಸತ್ಯ, ಪ್ರಖರ.

ಈಗ ಪಾಶ್ಯಾತ್ಯ ಗಂಡಿನ ಕಡೆ ಬರೋಣ. ಮೇಲೆ ಹೇಳಿದ ಹಾಗೆ ಅಲ್ಲಿನ ಅತ್ತೆ – ಅಳಿಯದಿರ ಸಂಬಂಧ ನಮ್ಮ ದೇಶದ DMK-CONGRESS ಪಕ್ಷದ ರೀತಿ. ಅಂಥಾ understanding. ಪಾಶ್ಚಾತ್ಯ ಗಂಡು ಹಾಡೋದು, ಅತ್ತೆ, ನೀನು ಸತ್ತರೆ, ನನ್ನ ಬಾಳು ಸಕ್ಕರೆ... ಅಂತ.

ಒಬ್ಬ ತನ್ನ ಅತ್ತೆಯನ್ನು ಮೃಗಾಲಯಕ್ಕೆ ಕರೆದೊಯ್ಯುತ್ತಾನೆ. ಮೊಸಳೆಗಳಿರುವ ಕೊಳದ ಹತ್ತಿರ ಬಂದಾಗ ತನ್ನ ಅತ್ತೆಯನ್ನು ನೂಕಿ ಬಿಡುತ್ತಾನೆ. ಅತ್ತೆಯನ್ನು ಕೊಂದ ಅಪವಾದ ಸಾಲದೆಂಬಂತೆ ಈಗ ಅವನ ಮೇಲೆ ಪ್ರಾಣಿ ದಯಾ ಸಂಘದವರು ಕೇಸು ಹಾಕಿದ್ದಾರೆ, ಮೊಸಳೆಗಳೊಂದಿಗೆ ಈತ ಕ್ರೂರವಾಗಿ ವರ್ತಿಸಿದ ಎಂದು. ಆತ್ತೆಯ ಬಗ್ಗೆ ಇದಕ್ಕಿಂತ ಕ್ರೂರವಾದ ಹೇಳಿಕೆ ಬೇರೇನಿದೆ?      

 
Rating
No votes yet

Comments