ಪಾಬ್ಲೊ ನೆರೂದಾ ರ "ಕವಿತೆ"
"ಬೆಂಕಿಯ ನೆನಪು" ಗಳ ಮೂಲಕ ಓದುಗನ ಹೃದಯಕ್ಕೆ ಬೆಂಕಿ ಹಚ್ಚಿದ ಎಡುವಾರ್ಡೋ ಗೆಲಿಯಾನೊನ "ಅಪ್ಪುಗೆಯ ಪುಸ್ತಕ"ದಲ್ಲಿ ಬರೆದ
ಈ ಸಣ್ಣ ಕಥೆ ಅದ್ಭುತ. ಓದಿ.
ತನ್ನ ಹೆಚ್ಚಿನ ಸಮಯವನ್ನು ಹಾಸಿಗೆಯಲ್ಲೇ ಕಳೆಯುವ ವಯಸ್ಸಾದ ಒಬ್ಬಂಟಿಗ ಮುದುಕೊನೊಬ್ಬ ಇದ್ದ. ಅವನ ಮನೆಯಲ್ಲಿ ಗುಪ್ತನಿಧಿ ಇದೆ
ಎಂಬ ವದಂತಿ ಇತ್ತು. ಒಂದು ದಿನ ಅವನ ಮನೆಗೆ ಕನ್ನ ಹಾಕಿ ಪ್ರವೇಶಿದ ಕೆಲವು ಕಳ್ಳರು ಎಲ್ಲಾ ಕಡೆ ಹುಡುಕಿ ನೆಲಮಾಳಿಗೆಯಲ್ಲಿ
ಪೆಟ್ಟಿಗೆಯೊಂದನ್ನು ಹುಡುಕಿದರು. ಅವರು ಅದನ್ನು ತೆಗೆದುಕೊಂಡು ಹೋಗಿ ತೆರೆದಾಗ ಅದು ಪತ್ರಗಳಿಂದ ತುಂಬಿತ್ತು.
ಅದು ಆ ಮುದುಕ ತನ್ನ ಜೀವನದಾದ್ಯಂತ ಪಡೆದ ಪ್ರೇಮ ಪತ್ರಗಳಾಗಿದ್ದವು. ಕಳ್ಳರು ಅದನ್ನು ಸುಟ್ಟು ಹಾಕುವುದರಲ್ಲಿದ್ದರು,
ಆದರೆ ಅವರು ಪರಸ್ಪರ ಮಾತಾಡಿಕೊಂಡು ಕೊನೆಗೆ ಅವನ್ನು ಹಿಂತಿರುಗಿಸಲು ತೀರ್ಮಾನಿಸಿದರು.
ಒಂದರ ಬಳಿಕ ಒಂದು, ವಾರಕ್ಕೊಂದರಂತೆ. ಅಂದಿನಿಂದ, ಮುದುಕ ಪ್ರತಿ ಸೋಮವಾರ ಮಧ್ಯಾಹ್ನ ಪೋಸ್ಟ್ ಮ್ಯಾನ್
ಬರುವುದನ್ನೇ ಎದುರುನೋಡುತ್ತಿದ್ದ. ಅವನನ್ನು ನೋಡಿದ ಕೂಡಲೇ ಓಡಿಬರುತ್ತಿದ್ದನು ಮತ್ತು ಅದು ತಿಳಿದ ಪೋಸ್ಟ್ ಮ್ಯಾನ್ ಪತ್ರವನ್ನು
ಕೈಯಲ್ಲಿ ಹಿಡಿಕೊಂಡಿರುತ್ತಿದ್ದ. ಒಂದು ಹೆಣ್ಣಿಂದ ಬಂದ ಸಂದೇಶವನ್ನು ಪಡೆಯುವುದರಲ್ಲಿ ಇರುವ ಸಂತೋಷದ ಕಾತರಕ್ಕೆ
ಹೊಡೆದುಕೊಳ್ಳುತ್ತಿದ್ದ ಮುದುಕನ ಹೃದಯ ಬಡಿತದ ಶಬ್ದ ದೇವರಿಗೂ ಕೇಳಿಸುತ್ತಿತ್ತು..
ಒಂದು ಮಾತು: ಸತ್ತು ಹೋದ ಪತ್ರಗಳಿಗೆ ಒಳ್ಳೆಯ ಕಳ್ಳರಿಂದ ಮತ್ತೆ ಜೀವ ಸಿಕ್ಕಿತು. ಮುದುಕನ ಬದುಕಿಗೆ ಹೊಸ ತಿರುವು ಸಿಕ್ಕಿತು. ಸಮಾಧಿ ಸೇರಿದ ಪತ್ರಗಳು ಮಾತನಾಡತೊಡಗಿದವು.
Rating
Comments
"ಇದು ಎಡುವರ್ಸೋ ಗಲಿಯಾನೊರವರ
"ಇದು ಎಡುವರ್ಸೋ ಗಲಿಯಾನೊರವರ ಅದ್ಭುತ ಕಥೆ". ತಲೆಬರಹವನ್ನು ದಯವಿಟ್ಟು ಸರಿಪಡಿಸಿ ಓದಿ. ಪಾಬ್ಲೊ ನೆರೂದಾರವರ ಕವಿತೆಯನ್ನು ಇನ್ನೊಂದು ಲೇಖನದಲ್ಲಿ ಬರೆದಿದ್ದೇನೆ.