ಪಿಳ್ಳಂಗೋವಿಯ ಚೆಲ್ವ ಕೃಷ್ಣನ...
ಮೆಲ್ಲ ಮೆಲ್ಲನೆ ಕೊಳಲಿನಿಂಚರದಿ ಬೃಂದಾವನವ ತುಂಬಿದನ
ಮಂದೆ ಮಂದೆ ಆಕಳನೋಡಾಡಿಸುತಲಿ ನಲಿವ ಗೊಲ್ಲನ
ಇಂದ್ರ ಯಾಗಗಳ ಬೀಳುಗಳೆಯಲೈದ ರಕ್ಕಸರ ಕೊಂದಿಹನ
ಚಂದದಿ ನೆನೆ ನಾಲಿಗೆ ನೀ ಗೊಲ್ಲತಿಯರ ಹೆಗಲೇರಿ ಮೆರೆವನ!
ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತದಿಂದ):
ಮಂದಂ ಮಂದಂ ಮಧುರ ನಿನದೈಃ ವೇಣುಮ್ ಆಪೂರಯಂತಂ
ಬೃಂದಂ ಬೃಂದಾವನಭುವಿ ಗಾವಂ ಚಾರಯಂತಂ ಚರಂತಂ |
ಛಂದೋಬಾಗೇ ಶತಮಖಮುಖ ಧ್ವಂಸಿನಾಂ ದಾನವಾನಾಂ
ಹಂತಾರಂ ತಂ ಕಥಯ ರಸನೇ ಗೋಪಕನ್ಯಾ ಭುಜಂಗಂ ||
-ಹಂಸಾನಂದಿ
ಕೊ: 'ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? ' ಅನ್ನುವುದು ಪುರಂದರ ದಾಸರ ಒಂದು ಜನಪ್ರಿಯ ರಚನೆ.
ಕೊ.ಕೊ: ಮೂಲದಲ್ಲಿ ಇಲ್ಲದ ಕೆಲವು ಪದಗಳು ಅನುವಾದದಲ್ಲಿದ್ದರೂ ಭಾವಕ್ಕೆ ಅಷ್ಟು ಅಡ್ಡಿಯಾಗಿಲ್ಲವೆಂದುಕೊಂಡಿರುವೆ.
ಕೊ. ಕೊ. ಕೊ : ನನ್ನ ಆರಿಸಿದ ಅನುವಾದಗಳ ಪುಸ್ತಕ ’ಹಂಸನಾದ’ ಕೊಳ್ಳಲು ಇಲ್ಲಿ ಚಿಟಕಿಸಿ.
(ಚಿತ್ರ ಕೃಪೆ: http://www.exoticindiaart.com/sculptures/fluting_krishna_rk46.jpg)
Rating