ಪುರಂದರದಾಸರ ಕಾಲದಲ್ಲಿ ಆಗಲೇ ’ಸೂಪ್’ ಇತ್ತೇ ?

ಪುರಂದರದಾಸರ ಕಾಲದಲ್ಲಿ ಆಗಲೇ ’ಸೂಪ್’ ಇತ್ತೇ ?

ಹಿಂದೊಮ್ಮೆ ಇಂಗ್ಲೀಷಿನ ನೀಟು ಶಬ್ದ ಕನ್ನಡದಲ್ಲಿ ಇದೆ . ಅದೇ ಅರ್ಥದಲ್ಲೇ . ೧೬ ನೇ ಶತಮಾನದ ಪುರಂದರದಾಸರ ರಚನೆಯೊಂದರಲ್ಲೇ ಇದೆ ಅಂತ ಸಂಪದದಲ್ಲಿ ಚರ್ಚೆಯಾಗಿತ್ತು .

ಈಗ ಇದನ್ನು ನೋಡಿ !
'ನಿನ್ನ ನಾಮವೆ ಎನಗೆ ಅಮೃತಾನ್ನವು' ಎಂಬ ಪುರಂದರದಾಸರ ರಚನೆ ಇಲ್ಲಿದೆ .
http://haridasa.in/%E0%B2%A6%E0%B2%BE%E0%B2%B8%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF/%E0%B2%A8%E0%B2%BF%E0%B2%A8%E0%B3%8D%E0%B2%A8-%E0%B2%A8%E0%B2%BE%E0%B2%AE%E0%B2%B5%E0%B3%86-%E0%B2%8E%E0%B2%A8%E0%B2%97%E0%B3%86-%E0%B2%85%E0%B2%AE%E0%B3%83%E0%B2%A4%E0%B2%BE%E0%B2%A8%E0%B3%8D%E0%B2%A8%E0%B2%B5%E0%B3%81/837

ಈ ರಚನೆಯನ್ನು ಹಾಕುವಾಗ ನಾನು ಆಧಾರವಾಗಿಟ್ಟುಕೊಂಡ ಪುಸ್ತಕದಲ್ಲಿ

ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ
ಶಂಖಪಾಣಿಯ ನಾಮ ಶಾಕಾದಿ ಸೂಪ
ಸಂಕರುಷಣ ಎಂಬ ನಾಮ ದಿವ್ಯ ಶಾಲ್ಯನ್ನವು
ಪಂಕಜಾಕ್ಷ ನಿನ್ನ ನಾಮ ಪಳದ್ಯ ಸಾರು ||

ಎಂದೇ ಇದೆ . ಇನ್ನೊಂದು ಆವೃತ್ತಿಯಲ್ಲಿ ಸೂಪ ಬದಲಾಗಿ ಶುಭ ಎಂದಿದ್ದರೂ ಸರಿ ಯಾವುದು ಗೊತ್ತಾಗದೇ ಎರಡನ್ನೂ ಅಲ್ಲಿ ಹಾಕಿದ್ದೀನಿ . ಶಾಕ ಅಂದರೆ ಇವತ್ತಿನ ಕನ್ನಡದಲ್ಲಿ ವೆಜಿಟೇಬಲ್ಸು ಅಂತ ಅನಿಸುತ್ತದೆ .

Rating
No votes yet

Comments