ಪುರಾಣದ ಕಥೆಗಳು- ಸೀತೆಯಾದ ವೇದವತಿ....

ಪುರಾಣದ ಕಥೆಗಳು- ಸೀತೆಯಾದ ವೇದವತಿ....

 

 

 

 

 

 

 (ಪುರಾಣದ ಕಥೆಯೊಂದನ್ನು ಸಂಕ್ಷಿಪ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳವ ಪುಟ್ಟ ಪ್ರಯತ್ನ  ಇಷ್ಟವಾದರೆ ಪ್ರೋತ್ಸಾಹಿಸಿ )

 

ಬೃಹಸ್ಪತಿಯ ಮಗ ಕುಶಧ್ವಜ.ವೇದಪಠಣ ಮಾಡುತ್ತಿರುವಾಗ ಅವನ ಬಾಯಿಯಿಂದ ಜನಿಸಿದ ಸುಂದರಿಯೇ ವೇದವತಿಯಾದಳು.ಅವಳನ್ನು ವಿಷ್ಣುವಿಗೆ ಕೊಟ್ಟು ಮದುವೆ ಮಾಡಬೇಕೆಂದು ಕುಶಧ್ವಜ ನಿರ್ಧರಿಸಿದ್ದ .  'ಶಂಬು" ಎಂಬ ರಾಕ್ಷಸ  'ವೇದವತಿಯನ್ನು ತನಗೆ ಕೊಡಬೇಕೆಂದು ಹಠ ಹಿಡಿದಾಗ ಅಲ್ಲಗಳೆದ  ಕುಶಧ್ವಜನನ್ನು ಶಂಬು ಕೊಂದುಹಾಕಿದ.ಕುಶಧ್ವಜನ ಹೆಂಡತಿಯೂ ತೀರಿ ಕೊಂಡಳು.ತಂದೆಯ ಬಯಕೆ ಈಡೇರಿಸಲು ವೇದವತಿಯು ವಿಷ್ಣುವನ್ನು ಕುರಿತು ತಪಸ್ಸು ಮಾಡುತ್ತಿದ್ದಳು.
                ದಿಗ್ವಿವಿಜಯಕ್ಕೆಂದು ಹೊರಟ ರಾವಣ, ತಪಸ್ಸು ಮಾಡುತ್ತಿದ್ದ ವೇದವತಿಯನ್ನು ಕಂಡು ಮೋಹಿತನಾಗಿ ಅವಳು ತಿರಸ್ಕರಿಸಿದಾಗ ಬಲಾತ್ಕಾರಕ್ಕೆ ಯತ್ನಿಸಿದ. ಕೋಪಗೊಂಡ ವೇದವತಿ "ನಿನ್ನನ್ನು ನಾಶ ಮಾಡುವದಕ್ಕಾಗಿಯೇ ಮತ್ತೆ ಜನ್ಮವೆತ್ತಿ ಬರುವೆ" ಎಂದು ಪ್ರತಿಜ್ಞೆಗೈದು ಅಗ್ನಿಕುಂಡಕ್ಕೆ ಹಾರಿ ದೇಹ ತ್ಯಜಿಸಿದಳು.
ವೇದವತಿ ಮತ್ತೆ ರಾವಣನ ಅರಮನೆಯ ಕೊಳದಲ್ಲಿ ಕಮಲದ ಪುಷ್ಪದಲ್ಲಿ  ಜನಿಸಿದಳು. ಹೂ ಕೊಯ್ಯಲು ಬಂದ ರಾವಣ ಸುಂದರ ಶಿಶುವನ್ನು ಕಂಡು ಅರಮನೆಗೆ ಕೊಂಡೊಯ್ದ. ಮಗುವಿನ ಮುಖ ನೋಡಿದ ಜ್ಯೋತಿಷ್ಯಕಾರರು "ಈ ಮಗುವಿನಿಂದ ನಿನ್ನ ವಂಶ ನಿರ್ವಂಶವಾಗುವುದು" ಎಂದಾಗ ರಾವಣ ಬೆದರಿ ಮಗುವನ್ನು ಪೆಟ್ಟಿಗೆಯಲ್ಲಿಟ್ಟು ಸಮುದ್ರದಲ್ಲಿ ತೇಲಿಬಿಟ್ಟ. ಸಮುದ್ರದಲ್ಲಿ ತೇಲುತ್ತ ಹೋದ ಪೆಟ್ಟಿಗೆ ಜನಕರಾಜನ ಅರಮನೆಯ ಹತ್ತಿರ ಯಜ್ಞದ ಸಲುವಾಗಿ ನೇಗಿಲಿನಿಂದ ನೆಲವನ್ನು ಊಳುತ್ತಿದ್ದ ನೇಗಿಲಗುಳಕ್ಕೆ ಪೆಟ್ಟಿಗೆ ಸಿಕ್ಕಿಕೊಂಡಿತಂತೆ.ಜನಕರಾಜ ಪೆಟ್ಟಿಗೆಯೊಳಗಿನ ಶಿಶುವನ್ನು ಕಂಡು ಅರಮನೆಗೆ  ಕೊಂಡೊಯ್ದು ತನ್ನ ಮಗಳಂತೆ ಸಾಕಿದ. ನೇಗಿಲ ಗುಳಕ್ಕೆ ಸಿಕ್ಕು ಲಭಿಸಿದ್ದರಿಂದ ಸೀತೆ ಎಂದು ಹೆಸರಿಟ್ಟರು. ಸೀತೆಯಾಗಿ ಜನ್ಮ ತಳೆದ ವೇದವತಿ ಮುಂದೆ ರಾವಣನ ನಾಶಕ್ಕೆ  ಕಾರಣಳಾದಳು

ಚಿತ್ರ ಕೃಪೆ : ಅಂತರ್ಜಾಲ (ಗೂಗಲ್)

Rating
No votes yet

Comments