ಪುಸ್ತಕನಿಧಿ  - ಭವಿಷ್ಯವಾಣಿ ಮತ್ತು ಇತರ ಕತೆಗಳು

ಪುಸ್ತಕನಿಧಿ  - ಭವಿಷ್ಯವಾಣಿ ಮತ್ತು ಇತರ ಕತೆಗಳು

ಚಿತ್ರ

ಈ ಪುಸ್ತಕದ ಕತೆಗಳನ್ನು ಹಿಂದೆ ಓದಿದುದಾಗಿ ಅಲ್ಲಿ ಗುರುತು ಹಾಕಿದ್ದೆ . ಈಗ ಈ ಪುಸ್ತಕವನ್ನು ಇನ್ನೊಮ್ಮೆ ಓದಿದೆ. ಆಗ ಗಮನಕ್ಕೆ ಬರದೆ ಇದ್ದುದು ಈಗ ಗಮನಕ್ಕೆ ಬಂದಿತು.  ಆಗ ಹೇಗೆ ಓದಿದ್ದೆನೋ? ಇಲ್ಲಿನ  ಬಹುತೇಕ ಕತೆಗಳು ಚೆನ್ನಾಗಿವೆ. ಶೈಲಿ ಮತ್ತು  ಹೂರಣದಲ್ಲಿ ಕನ್ನಡ ಸಣ್ಣಕತೆಗಳ ಜನಕ ಶ್ರೀಯುತ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳನ್ನು ಹೋಲುತ್ತವೆ.  

 

 

ಸೀತೆಯ ಅಗ್ನಿಪ್ರವೇಶ ಮತ್ತು ಕೈಕೇಯಿಯ ಪಶ್ಚಾತ್ತಾಪ ಕುರಿತಾದ ಕತೆಗಳಂತೂ ಮಾಸ್ತಿಯವರೇ ಬರೆದ ಕತೆಗಳೇನೋ ಎಂದು ಅನ್ನಿಸುತ್ತದೆ.  

 

ಮತ್ತೆ  'ಭವಿಷ್ಯವಾಣಿ'  ಎಂಬ ಕತೆಯು ಭವಿಷ್ಯಗಳ  ಸತ್ಯತೆಯ ಬಗ್ಗೆ ವಿಚಾರ ಮಾಡುತ್ತ  - ಸತ್ಯವಾಗಿ ಪರಿಣಮಿಸಿದ ಮೂರು ಭವಿಷ್ಯವಾಣಿಗಳ ಕುರಿತೂ ತಿಳಿಸುತ್ತದೆ. ನೀನು ಸನಿಯದಲ್ಲಿ ಸಾಯಲಿರುವೆ  ಎಂಬ ಭವಿಷ್ಯವಾಣಿ ಕೇಳಿದವರು ಏನು ಮಾಡಬಹುದು ? ಏನು ಮಾಡಬೇಕು ಎಂದು ಸೂಚಿಸುತ್ತದೆ. 

 

 

ಅಂದ ಹಾಗೆ ಈ ಪುಸ್ತಕವು ಧಾರವಾಡದ  ಮನೋಹರ ಗ್ರಂಥಮಾಲೆಯ ಪ್ರಕಟಣೆ.  ಕತೆಗಾರರು ಎನ್. ಪಿ.  ಶಂಕರನಾರಾಯಣ ರಾವ್. 1994 ರಲ್ಲಿ ಪ್ರಕಟವಾಗಿದ್ದು. ಬೆಲೆ ಮೂವತ್ತೈದು ರೂಪಾಯಿ. ಪುಟಗಳು 122 .

 

Rating
Average: 4 (1 vote)