ಪುಸ್ತಕನಿಧಿ(೩) - ಪ್ರಾಣ ಹೋಗುವಾಗ ಪ್ರಾಣಾಯಾಮವೇ?

ಪುಸ್ತಕನಿಧಿ(೩) - ಪ್ರಾಣ ಹೋಗುವಾಗ ಪ್ರಾಣಾಯಾಮವೇ?

ಇದೇನು ಗಾದೇ ಮಾತು ಅಂದ್ಕೊಂಡ್ರಾ? ಅಲ್ಲ.
ಡಿಜಿಟಲ್ ಲೈಬ್ರರಿ ತಿರುವಿ ಹಾಕುವಾಗ ಒಂದು ಪುಸ್ತಕ ಸಿಕ್ಕಿತು . ವಿಷಯ ಗಂಭೀರವಾದದ್ದೇ. ಆದರೆ ಮೊದಲ ಕೆಲವು ಸಾಲು ನೋಡಿ ನಗು ತಡೆಯಲಿಕ್ಕಾಗಲಿಲ್ಲ.
ಕಂಸದಲ್ಲಿರುವದು ನನ್ನ ಉದ್ಗಾರ.

'ತನ್ನ ಪ್ರಾಣೋತ್ಕ್ರಮಣ ಕಾಲದಲ್ಲಿ ತಾನೇ ಮಾಡಬೇಕಾದ ಕರ್ತವ್ಯಗಳು'
------------------------------------------
ಮುಮುಕ್ಷು( ಅಂದ್ರೆ ಏನೋ ? ) ಆದವನು ತನ್ನ ಮರಣಕಾಲ ಸಮೀಪಿಸಿದುದನ್ನು ತಿಳಿದು , ಕೂಡಲೇ ಶುಚಿರ್ಭೂತನಾಗಿ ಆಚಮನ ಮಾಡಿ ಪವಿತ್ರ(?) ಧರಿಸಿ ಅಭಿವಾದನವನ್ನು ಮಾಡಿ ಶಿವಾದಿ ಶ್ರೀ ಗುರುಭ್ಯೋ ನಮಃ ಗುಂಗುರುಭ್ಯೋ ನಮಃ( ಗುಂಗುರು?) - ಇತ್ಯಾದಿ ಆಯಾ ಸ್ಥಾನಗಳಲ್ಲಿ ವಂದಿಸಿ ಪ್ರಾಣಾಯಾಮ ಮಾಡಿ
ಗಂಗೇ ಚ ಯಮುನೇಚ .....ಸನ್ನಿಧಿಂ ಕುರು.ಎಂದು ಜಲಶುದ್ಧಿಯನ್ನು ಮಾಡಿ ಕೈಯಲ್ಲಿ ದರ್ಭಾಕ್ಷತಗಳನ್ನು ಹಿಡಿದು ನೀರೆರೆದು ...

ಒಂದು ಪುಟದಷ್ಟು ಮಂತ್ರ ಹೇಳಿ ಐದು ಬ್ರಾಹ್ಮಣರನ್ನು ಕರೆದು ಮತ್ತೆ ಮಂತ್ರ ಹೇಳಿ , ಬಹಳಾ ದಾನಗಳನ್ನು ಮಾಡಿ ........

ಇತ್ಯಾದಿ ಹದಿನೈದು ಪುಟ ಇದೆ !!!..

ಅಲ್ಲಾ , ಪ್ರಾಣಾ ಹೋಗೋ ಮುಂದ ಇಷ್ಟೆಲ್ಲ ವ್ಯಾಳ್ಯಾ , ಸಮಾಧಾನಾ ಯಾರಿಗಾದ್ರೂ ಇರಲಿಕ್ಕೆ ಸಾಧ್ಯನ ?

ಡಿ.ವಿ.ಜಿ ಮ್ಯಾಕ್‌ಬೆತ್ ನಾಟಕ ಕನ್ನಡಾನುವಾದ -( ಸ್ವಲ್ಪ ಹಳಗನ್ನಡ ಮಾದರಿ ಪದ್ಯಗಳು ಇವೆ) ಇಬ್ಬರು ಪತ್ತೇದಾರಿ ಕಾದಂಬರಿ ಪ್ರಿಯರು ಓದಿ , ವಿಷ್ಲೇಶಿಸುತ್ತ , ತಮ್ಮದೇ ರೀತಿಯಲ್ಲಿ , ಪತ್ತೇದಾರಿಗಿಳಿವ ಬಗ್ಗೆ ಒಂದು ಹಾಸ್ಯ ಲೇಖನ ಬಹಳ ಹಿಂದೆ ಓದಿದ್ದೆ. ಅಲ್ಲಿ ಯಾರದೋ ( ನನಗೆ ಕತೆ ಸರಿಯಾಗಿ ಗೊತ್ತಿಲ್ಲ) ಹೆಣ ನೋಡಿದವನು ಒಂದು ಪದ್ಯ (!) ಹಾಡ್ತಾನೆ. ಈ ಅರಿಂಜಯ/ಪುರುಷೋತ್ತಮನ ಭಕ್ತರು ಹೆಣ ಮೊದಲು ನೋಡಿದವನ ಮೇಲೇ ಸಂಶಯ ಮಾಡ್ತಾರೆ . ' ವಿಧಿಗೆ......ಗಡಾ ' ಅಂತ ಯಾರಾದರೂ ಹಳಗನ್ನಡಪದ್ಯ ಹೇಳಕ್ಕೆ ಸಾಧ್ಯವೇ ? 'ಯಪ್ಪೋ , ಇಲ್ಲೊಂದು ಖೂನೀ ಆಗೈತೆ' ಅಂತ ಯಾರಾದರೂ ಕಿರುಚಿಯಾರು. ಅವ ಕೊಲೆಗಾರನಲ್ಲದಿದ್ರೆ ಕಡೇಪಕ್ಷ ಶಾಮೀಲಾದ್ರೂ ಆಗಿರ್ಬೇಕು . ಪೋಲೀಸ್ ಸ್ಟೇಷನ್ನಿಗೊಯ್ದು ಒಂದಿಷ್ಟು ಒದ್ರೆ ಬಾಯ್ಬಿಡ್ತಿದ್ದ' ಅಂತಾರೆ!

ತಮಾಷೆಗೆ ಬರ್ದಿದ್ದೇನೆ.

Rating
No votes yet

Comments