ಪುಸ್ತಕನಿಧಿ(೬) : ಕನ್ಫ್ಯೂಷಿಯಸ್ ನ ಓದು
ಚೀನಾದೇಶದ ಗಾಂಧಿ - ಕನ್ಫ್ಯೂಷಿಯಸ್ ಕುರಿತ ಜಿ.ಪಿ.ರಾಜರತ್ನಂ ಅವರ ಪುಸ್ತಕ . ಅವನ ಹೇಳಿಕೆಗಳು ಅಲ್ಲಿವೆ. ಇದು ಅವಸರದ ಓದಿಗೆ ಅಲ್ಲ . ಹೇಗೆ ಓದಬೇಕೆಂಬುದನ್ನೇ ಮುನ್ನುಡಿಯಲ್ಲಿ ಹೇಳಿದ್ದಾರೆ.ಇರಲಿ ನನಗೆ ತಿಳಿದ , ಸೇರಿದ , ನಿಮಗೆ ಹೇಳಬೇಕೆನಿಸಿದ ಕೆಲ ಭಾಗಗಳು ಇಲ್ಲಿವೆ.
-- ಇತರರು ನನ್ನನ್ನು ತಿಳಿಯಲಿಲ್ಲ ಎಂದು ನಾನು ದುಃಖಿಸುವದಿಲ್ಲ . ನಾನು ಇತರರನ್ನು ತಿಳಿದುಕೊಳ್ಳಲಿಲ್ಲ ಎಂಬುದು ನನ್ನ ದುಃಖ.
-- ಸಾಹಿತ್ಯದ ಅಭ್ಯಾಸದಲ್ಲಿ ನಾನು ಯಾರ ಸಮಕ್ಕಾದರೂ ಬಂದೇನು. ಆದರೆ ಉತ್ತಮಪುರುಷನು ಬದುಕುತ್ತಿರುವಂತೆ ಬದುಕುತ್ತಿರುವೆನೇ ಎಂದರೆ ನನಗೆ ಅದು ಸಾಧ್ಯವಾಗಿಲ್ಲವೆಂದೇ ತೋರುತ್ತದೆ.
-- ನನ್ನ ನಡತೆಯನ್ನು ಎಲ್ಲಿ ಉತ್ತಮಗೊಳಿಸುವದಕ್ಕೆ ಮರೆತೇನೋ , ನನ್ನ ವ್ಯಾಸಂಗದಲ್ಲಿ ಎಲ್ಲಿ ನಾನು ಪ್ರಮತ್ತನಾದೇನೋ, ಸರಿಯಾದ ದಾರಿ ಕಂಡಾಗ ಎಲ್ಲಿ ನಾನು ಮುಂದುವರೆಯದೆ ನಿಂತೇನೋ, ಮಾಡಿದ ತಪ್ಪು ಗೋಚರವಾದಾಗ ಎಲ್ಲಿ ತಿದ್ದಿಕೊಳ್ಳದೆ ಹೋದೇನೋ ಎಂಬುದೇ ನನ್ನ ಮನಸ್ಸನ್ನು ಸದಾ ಕೊರೆಯುವ ಚಿಂತೆ.
--ಮೂರು ಜನ ಒಟ್ಟಿಗೆ ಹೋಗುತ್ತಿದ್ದರೆ , ನಾನು ಎಲ್ಲಿ ಇಬ್ಬರು ಗುರುಗಳನ್ನು ಪಡೆಯಬಲ್ಲೆ.ಒಳ್ಳೆಯವನನ್ನು ಆರಿಸಿಕೊಂಡು ಅವನ ಉದಾಹರಣೆಯನ್ನು ಅನುಸರಿಸಲೆತ್ನಿಸುತ್ತೇನೆ. ಕೆಟ್ಟವನನ್ನು ಆರಿಸಿಕೊಂಡು ಆ ತಪ್ಪು ನನ್ನಲ್ಲಿ ಇಲ್ಲದಂತೆ ಮಾಡಲು ಯತ್ನಿಸುತ್ತೇನೆ.
-- ಸತ್ಯವಂತನಿಗೆ ಚಿಂತೆಯಿಲ್ಲ . ಧೈರ್ಯಶಾಲಿಗೆ ಭಯವಿಲ್ಲ . ಜ್ಞಾನಿಗೆ ಸಂಶಯವಿಲ್ಲ.
-- ನಾನು ತುಂಬ ಕಲಿತು ಎಲ್ಲವನ್ನು ನೆನಪಿನಲ್ಲಿದಲು ಪ್ರಯತ್ನಿಸಿದೆ ಎಂದು ತಿಳಿದಿದ್ದೀಯಾ ? ಇಲ್ಲ . ಆ ಎಲ್ಲವನ್ನು ಪೋಣಿಸಿ ಒಂದು ದಾರದಂತೆ ಹಿಡಿದಿಡುವ ಒಂದು ಕ್ರಮವಿದೆ , ದಾರಿಯಿದೆ.
-- ಕಷ್ಟ ಉತ್ತಮನಿಗೆ ಬರಬಹುದು. ಆದರೆ ಹೀನನಾದವನು ಆ ಕಾರಣವಾಗಿ ನಡತೆಕೆಡುತ್ತಾನೆ.
-- ಒಬ್ಬ ಶಿಷ್ಯ ಕೇಳಿದ - ಈ ಆಚರಣೆಗಳನ್ನು ಈಗಲೇ ಜಾರಿಗೆ ತರಲೇನು?
ಗುರು ಹೇಳಿದ - ಅವಸರ ಏಕೆ , ಹಿರಿಯರ ಸ್ನೇಹಿತರ ಅಭಿಪ್ರಾಯ ಕೇಳಿ , ಮುಂದುವರಿ .
ಇನ್ನೊಬ್ಬ ಶಿಷ್ಯನ ಅದೇ ಪ್ರಶ್ನೆಗೆ - ತಡ ಯಾಕೆ ? ಈ ಕ್ಷಣದಿಂದಲೇ ಉಪದೇಶವನ್ನು ಆಚರಿಸು .
ಅದೇಕೆ ಹೀಗೆ? ಎಂದವರಿಗೆ ಗುರು ಹೇಳಿದ . ಮೊದಲನೇಯವನು ಆತುರಗಾರ . ಎರಡನೇಯವನು ಆಲಸಿ . ಅದಕ್ಕೆ!
-- ಐಶ್ವರ್ಯ ಸಂಪಾದನೆಯಾಗುವದು ಖಂಡಿತವಾದರೆ , ಗಾಡಿಯನ್ನು ಬೇಕಾದರೂ ಹೊಡೆದೇನು.ಅದು ನಿಶ್ಚಿತವಿಲ್ಲದಿರಲು , ನನಗೆ ಪ್ರೀತಿಯುಳ್ಲದ್ದನ್ನೇ ಮಾಡುವೆನು.
-- ದೂತ ಹೇಳಿದ - ನನ್ನ ಒಡೆಯ ತನ್ನ ದೋಷಗಳನ್ನು ಕಡಿಮೆ ಮಾಡಿಕೊಳ್ಲಬೇಕೆಂದು ಹುಡುಕುತ್ತಿದ್ದಾನೆ. ಆದರೆ ಇನ್ನೂ ಜಯಶೀಲನಾಗಿಲ್ಲ.
( ಅವಸರದಲ್ಲಿ ಓದಿದ್ದರೆ ಈ ವಾಕ್ಯ ಇನ್ನೊಮ್ಮೆ ಓದಿ!)
ಸದ್ಯಕ್ಕೆ ಈವರೆಗೆ ಓದಿರುವೆ.
ಪುಸ್ತಕ ಡಿಜಿಟಲ್ ಲೈಬ್ರರಿಯಲ್ಲಿದೆ, (http://dli.iiit.ac.in/cgi-bin/Browse/scripts/use_scripts/advnew/aui/bookreader_india/1.cgi?barcode=2030020027962).
(ಅನುಕೂಲ ಇದ್ದವರು ಇಡೀ ಪುಸ್ತಕವನ್ನೇ ಓದಲಿ)