ಪುಸ್ತಕನಿಧಿ (೮)-ಕನ್ನಡ ಭಾಷಾ ಸಂಪದ ಎಂಬ ಪುಸ್ತಕ

ಪುಸ್ತಕನಿಧಿ (೮)-ಕನ್ನಡ ಭಾಷಾ ಸಂಪದ ಎಂಬ ಪುಸ್ತಕ

ಕನ್ನಡ ಭಾಷಾ ಸಂಪದ ಎಂಬ ಪುಸ್ತಕವನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ . ೯೦ ಪುಟಗಳ ಪುಟ್ಟ ಪುಸ್ತಕ ಇದು . ಭಾಷೆಗಳು , ದ್ರಾವಿಡ ಭಾಷೆಗಳು , ಕನ್ನಡ ಕುರಿತಾದ ಎಷ್ಟೋ ಸಂಗತಿ ಇಲ್ಲಿದೆ. ನಾನು ಗಮನಿಸಿದ ಕೆಲ ವಿಷಯಗಳು . ದ್ರಾವಿಡರೂ ಹೊರಗಿನಿಂದ ಬಂದವರು! ಕನ್ನಡದಲ್ಲಿ ಭೌಗೋಲಿಕ, ಸಾಮಾಜಿಕ ಎಂದು ಎಪ್ಪತ್ತು ಪ್ರಭೇದಗಳನ್ನು ಗುರುತಿಸಿದ್ದಾರೆ. ಕನ್ನಡದಲ್ಲಿನ ಪ್ರಾಚೀನ ವ್ಯಾಕರಣಗಳು ಮೂರೂವರೆ(!). ಅದರಲ್ಲಿ ಎರಡು ಸಂಸ್ಕೃತದಲ್ಲಿವೆ ( ಕನ್ನಡಕ್ಕೆ ಗೌರವ ತಂದು ಕೊಡಬೇಕೆಂದು ಸಂಸ್ಕೃತದಲ್ಲಿ ಬರೆದಿರಬಹುದಂತೆ) . ಅರ್ಧ ಎಂದು ಹೇಳುವದು ಇನ್ನೊಂದು ಕೃತಿಯ ಭಾಗವಾಗಿ ಬಂದಿದೆಯಂತೆ . ಉಳಿಯುವುದೊಂದು ಕೇಶಿರಾಜನ ಶಬ್ದಮಣಿದರ್ಪಣ. ಕನ್ನಡದಲ್ಲಿ ನಂತರ ಬಂದ ವ್ಯಾಕರಣಗಳ ಕುರಿತೂ ಮಾಹಿತಿ ಇಲ್ಲಿದೆ. ನೀವೂ ತಿರುವಿ ಹಾಕಬಹುದು.(http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010065436)

Rating
No votes yet