ಪುಸ್ತಕನಿಧಿ - 'ನಮ್ಮ ಭಾರತ ' - ಯಥಾ ಪ್ರಜಾ ತಥಾ ರಾಜಾ?

ಪುಸ್ತಕನಿಧಿ - 'ನಮ್ಮ ಭಾರತ ' - ಯಥಾ ಪ್ರಜಾ ತಥಾ ರಾಜಾ?

ಏನು? ತಲೆಬರಹದಲ್ಲಿ ತಪ್ಪಿದೆಯೇ ? "ಯಥಾ ಪ್ರಜಾ ತಥಾ ರಾಜಾ" ? ಅದು "ಯಥಾ ರಾಜಾ ತಥಾ ಪ್ರಜಾ " ಅಲ್ಲವೆ? ಸರಿ, ಸ್ವಾಮೀ. ನಾವೆಲ್ಲ ಹಾಗೆಯೇ ಕೇಳಿದ್ದೇವೆ . ಆದರೆ ರಾಜರ ಕಾಲ ಮುಗಿದಿದೆ ಅಲ್ಲವೇ ? ಈಗ ಪ್ರಜೆಗಳ ಆಳ್ವಿಕೆಯ ಕಾಲ ಅಲ್ಲವೇ ? ದಯವಿಟ್ಟು ಮುಂದೆ ಓದಿ. ಮೀನೂ  ಮಸಾನಿ ಸ್ವತಂತ್ರ ಭಾರತದ ಒಬ್ಬ ಗೌರವಾನ್ವಿತ ರಾಜಕಾರಣಿ . ಅವರ ಬಗ್ಗೆ ವಿಕಿಪೀಡಿಯಾ ಮೂಲಕ ತಿಳಿಯಬಹುದು 1940 ರಲ್ಲಿ ಅವರು our India ಎಂಬ ಪುಸ್ತಕ ಬರೆದಿದ್ದರು. ಕನ್ನಡಕ್ಕೆ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಅನುವಾದಿಸಿದ್ದರು.  ಭಾರತ ಎಂದರೆ ಏನು, ಭಾರತದ ಜನ ಜೀವನ ಹೇಗಿದೆ.  ಜಗತ್ತಿನ ಇತರ ದೇಶಗಳ ಜನರಿಗೆ ಹೋಲಿಸಿದರೆ ನಾವು ಹೇಗಿದ್ದೇವೆ. ನಮ್ಮ ಸ್ಥಿತಿಗತಿ ಸುಧಾರಿಸಲು ಏನು ಮಾಡಬೇಕು ಹೇಗೆ ಮಾಡಬೇಕು ಎಂಬಂತಹ ಸಂಕೀರ್ಣ ವಿಷಯಗಳನ್ನೂ  ಸರಳ ರೀತಿಯಲ್ಲಿ ಮಕ್ಕಳು ತಿಳಿಯುವ ಹಾಗೆ ತಿಳಿಸಿದ್ದಾರೆ. 
ಅದರಲ್ಲಿನ ಒಂದು ಭಾಗ :- 

 

ರಾಷ್ಟ್ರ ಅಥವಾ ಸರಕಾರ, ದೇಶದಲ್ಲಿ ಬಾಳುತ್ತಿರುವ ನಾವು ನೀವು ಬಯಸಿದ ಹಾಗೆ ಮಾಡುವ ಒಂದು ಯಂತ್ರ, ಸಾಧನ. ಅದನ್ನೆಲ್ಲ ಮಾಡಬೇಕಾದುದು ಅದರ ಕರ್ತವ್ಯ. ಅನೇಕ ಸಲ ಅದು ಮಾಡದು. ಏನು ದುರ್ದೈವವೋ ಸರಕಾರಗಳೆಲ್ಲ ಬಹುಮಟ್ಟಿಗೆ ಸೋಮಾರಿ ಛತ್ರಗಳು; ತುಂಬಾ ನಿಧಾನ. ಜನ ಎಷ್ಟು ಬಲಾತ್ಕಾರ ಮಾಡಿದರೆ ಅಷ್ಟೇ ಕೆಲಸ. ಜನ ಕೊಂಚ ಅಸಡ್ಡೆಯಾಗಿದ್ದರೆ, ನಿಧಾನವಾಗಿದ್ದರೆ ಸರ್ಕಾರ ನಿಧಾನ, ಅದಕ್ಕೆ ಅಸಡ್ಡೆ. ಯಾರೋ ಹೇಳಿದಾರೆ 'ಯಥಾ ಪ್ರಜಾ ತಥಾ ರಾಜಾ'. ನೀವು ಎಂಥ ಪ್ರಜೆಯಾಗುತ್ತೀರೋ ನಮ್ಮ ದೇಶವನ್ನು ಅದರ ಸಮಸ್ಯೆಗಳನ್ನು ಎಷ್ಟು ಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತೀರಿ ಅದರ ಮೇಲೆಯೇ ಎಲ್ಲರೂ ಆಧಾರ
ಗೊಂಡಿದೆ. ಇದನ್ನು ನೆನಪಿಡಿ.

Rating
Average: 4 (3 votes)