ಪುಸ್ತಕನಿಧಿ: ಪ್ರಸನ್ನ ಅವರ ಮೂಲ ರಾಮಾಯಣ (ಭಾಗ ಒಂದು )

ಪುಸ್ತಕನಿಧಿ: ಪ್ರಸನ್ನ ಅವರ ಮೂಲ ರಾಮಾಯಣ (ಭಾಗ ಒಂದು )

ಚಿತ್ರ

ಕನ್ನಡ ರಂಗಭೂಮಿಯ ನಿರ್ದೇಶಕ ರೂ ಕ್ರಿಯಾಶೀಲ ರಂಗ ಕಾರ್ಯಕರ್ತರೂ ಆದ ಪ್ರಸನ್ನ  ಅವರು ಬರೆದ 'ಮೂಲ' ರಾಮಾಯಣ - ಭಾಗ ಒಂದು ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗ ಇವುಗಳ ನಡುವಿನ ಸಮತೋಲನವನ್ನು ಪ್ರತಿಪಾದಿಸುತ್ತ ರಾಮಾಯಣದ ಕಥೆಯನ್ನು ಹೇಳಲಾಗಿದೆ. ಕಥೆಯ ಚೌಕಟ್ಟಿನ ಮಟ್ಟಿಗೆ ಹೇಳುವುದಾದರೆ  ಇದು ವಾಲ್ಮೀಕಿ ರಾಮಾಯಣವನ್ನು ಅನುಸರಿಸಿದರೂ ಕೂಡ ಶ್ರೀರಾಮನನ್ನು ಇಲ್ಲಿ ವಿಶ್ವಮಾನವನನ್ನಾಗಿ ನೋಡಲಾಗಿದೆ. ಇದರ ಎರಡನೆಯ ಭಾಗ ನನಗೆ ಓದಲು ಸಿಕ್ಕಿಲ್ಲವಾದರೂ ಮೊದಲೇ ಭಾಗದಲ್ಲಿ ಸಾಮಾನ್ಯವಾಗಿ ನಾನು ಕಂಡ ಕೆಲ ಸಂಗತಿಗಳು ಇಲ್ಲಿವೆ: -

 

೧) ರಾಮನನ್ನು ಯುವರಾಜನನ್ನಾಗಿ ಮಾಡುವ ಸುದ್ದಿ ಹೊರಬಿದ್ದ ಕೂಡಲೇ ಎಲ್ಲರ ಬಾಯಲ್ಲಿ ಶ್ರೀರಾಮಚಂದ್ರ ಆಗಿಬಿಟ್ಟ!

 

 

೨) ದಶರಥ ಸಾಯುವ ಮೊದಲೊಮ್ಮೆ ಶ್ರೀರಾಮನಿಗೆ ಹೇಳುತ್ತಾನೆ - "ಒಳ್ಳೆಯ ರಾಜನಾಗು, ಒಳ್ಳೆಯ ಗಂಡನಾಗು. ಸಾಧ್ಯವಾದರೆ ಒಬ್ಬಳೇ ಹೆಂಡತಿಗೆ ಗಂಡನಾಗು !" ( ಸ್ಪಾನುಭವದಿಂದ ಕಲಿತ ಪಾಠ!)

 

 

೩) 14 ವರ್ಷಗಳ ವನವಾಸದ ಆಣತಿಯನ್ನು ರಾಮನು ಹಳ್ಳಿಗಳ ಮತ್ತು ಆಶ್ರಮಗಳ ಜೀವನ ವಿಧಾನಗಳನ್ನು ತಿಳಿಯಲು ಒಂದು ಅವಕಾಶವನ್ನಾಗಿ ತನ್ನ ಕಲಿಕೆಯ ಭಾಗವನ್ನಾಗಿ ನೋಡುತ್ತಾನೆ. ರಾಜಧಾನಿಯಲ್ಲಿ ನಗರಗಳಲ್ಲಿ ಅಧಿಕಾರ, ಸಂಪತ್ತು, ಸೈನ್ಯ, ಆಡಳಿತ ಎಲ್ಲಾ ಇವೆ . ಇವು ಆಶ್ರಮಗಳನ್ನು ಹಳ್ಳಿಗಳನ್ನು ಸಾಮಾನ್ಯ ಜನರನ್ನು ತಲುಪಬೇಕು. ನಗರಗಳನ್ನು ಕಾಡದೆ ಹಳ್ಳಿಗರನ್ನು ಆಶ್ರಮವಾಸಿಗಳನ್ನು ಕಾಡುವ ರಾಕ್ಷಸರ ಕಾಟವನ್ನು ನಿವಾರಿಸುವುದು ಅವನ ಬಯಕೆ. ರಾಜಧಾನಿ ಮತ್ತು ನಗರಗಳ ವ್ಯವಸ್ಥೆ ಒಂದು ರೀತಿ ರಾಕ್ಷಸ ವ್ಯವಸ್ಥೆಯಾಗಿದೆ!

 

೪) ಸರಳಜೀವನವನ್ನು ಕಾಡಿನಲ್ಲಿ ನಡೆಸಲು ಪ್ರಕೃತಿಯ ಮಡಿಲಲ್ಲಿ ಬೆಳೆದ ಸೀತೆಯು ರಾಮಲಕ್ಷ್ಮಣರಿಗೆ ನೆರವಾಗುತ್ತಾಳೆ. ಅವಳು ಒಂದು ತರಹ ಹಳ್ಳಿಯ ಹುಡುಗಿ ಎನ್ನಬಹುದು. 

 

೫) ರಾಮಲಕ್ಷ್ಮಣರನ್ನು ನೋಡಲೆಂದು ಬಂದ ಭರತನು "ರಾಜನಾಗುವ ಯೋಗ್ಯತೆ ಇರುವ ರಾಮನು ಈಗ ದರಿದ್ರನಂತೆ ಬದುಕಿದ್ದಾನೆ " ಎಂದರೆ ಶತ್ರುಘ್ನನು ಅವನನ್ನು ತಿದ್ದುತ್ತಾನೆ - "ಸರಳವಾಗಿ ಬದುಕುತ್ತಿದ್ದಾನೆ ಅಂತ ಹೇಳು "

 

ಇನ್ನುಳಿದ ಸಂಗತಿಗಳನ್ನು ನೀವೇ ಓದಿ !

 

ಈ ಪುಸ್ತಕವು ಮೊದಲ ಭಾಗವಾಗಿದ್ದು ಇದರಲ್ಲಿ ರಾಮಾಯಣದ ಬಾಲ ಕಾಂಡ ಮತ್ತು ಅಯೋಧ್ಯ ಕಾಂಡಗಳು ಮಾತ್ರ ಇವೆ. ಎರಡನೆಯ ಭಾಗ ಓದುವ ಕುತೂಹಲ ನನ್ನಲ್ಲಿ ಉಂಟಾಗಿದೆ.

ಬ್ಲಾಗ್ ವರ್ಗಗಳು
Rating
Average: 4 (1 vote)