ಪುಸ್ತಕನಿಧಿ: ಭಿ. ಪ. ಕಾಳೆ ಅವರ 'ದೇವತೆಗಳ ಆಗಮನ'
140 ಪುಟಗಳ ಈ ಪುಟ್ಟ ಪುಸ್ತಕವು https://archive.org/details/dli.osmania.3597 ಕೊಂಡಿಯಲ್ಲಿ ನಿಮಗೆ ಸಿಗುತ್ತದೆ.
ಇಲ್ಲಿ ಬ್ರಹ್ಮ ಮುಂತಾದ ದೇವತೆಗಳು ದೇವಲೋಕದಿಂದ ಕರ್ನಾಟಕಕ್ಕೆ ಬಂದು ಬೇರೆ ಬೇರೆ ಪಟ್ಟಣಗಳನ್ನು ನೋಡುತ್ತಾರೆ. ಈ ಪುಸ್ತಕವು 1930ರಲ್ಲಿ ಪ್ರಕಟವಾಗಿರುವುದರಿಂದ ಅಂದಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು.
ಉದಾಹರಣೆಗೆ ಇದರಲ್ಲಿ ಇಂದಿನ ಮಹಾರಾಷ್ಟ್ರದ ಮಿರಜ ಕೊಲ್ಲಾಪುರಗಳನ್ನು ಸೇರಿಸಿದ್ದಾರೆ !. ಹೀಗಾಗಿ ಸ್ವಾತಂತ್ರ್ಯ ಪೂರ್ವ ಭಾರತ ಮತ್ತು ಕರ್ನಾಟಕದ ಏಕೀಕರಣದ ಮೊದಲಿನ ಸಂಗತಿಗಳನ್ನು ಗಮನಿಸಬಹುದು. ಧಾರವಾಡದಲ್ಲಿ ಪ್ರತಿದಿನ 12 ಗಂಟೆಗೆ ಒಂದು ತೋಫನ್ನು ಹಾರಿಸುತ್ತಿದ್ದ ಪದ್ಧತಿ ಇತ್ತಂತೆ.
Rating