ಪುಸ್ತಕನಿಧಿ : ಮಹಾಭಾರತ ತಾತ್ಪರ್ಯ ನಿರ್ಣಯ ಭಾವಸಂಗ್ರಹ

ಪುಸ್ತಕನಿಧಿ : ಮಹಾಭಾರತ ತಾತ್ಪರ್ಯ ನಿರ್ಣಯ ಭಾವಸಂಗ್ರಹ

ಇತ್ತೀಚೆಗೆ "ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ  ಭಾವಸಂಗ್ರಹ"  ಎಂಬ ಪುಸ್ತಕವು https://archive.org/details/mahabharata-tatparyanirnaya-bhavasangraha-sri-raghavendra-tirtha-raja.-s.-gururajacharya ಈ ಕೊಂಡಿಯಲ್ಲಿ ಸಿಕ್ಕಿತು.

 

ಮಹಾಭಾರತ ತಾತ್ಪರ್ಯ ನಿರ್ಣಯವು ದ್ವೈತ ತತ್ವಶಾಸ್ತ್ರದ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ವೈದಿಕ ಮಹಾಕಾವ್ಯ.  ಇದರಲ್ಲಿ ಮಹಾಭಾರತ ಅಷ್ಟೇ ಅಲ್ಲ, ರಾಮಾಯಣ ದ ಕಥೆಯೂ ಇದೆ. ಗೂಗಲ್ ಮಾಡಿದಾಗ ಅದು ವಿಷ್ಣು ಪಾರಮ್ಯವನ್ನು ಹೇಳುತ್ತದೆ ಎ೦ದು ಗೊತ್ತಾಯಿತು.

 

ಮಧ್ವಾಚಾರ್ಯರು ಬರೆದ  ಈ ಮಹಾಭಾರತ ತಾತ್ಪರ್ಯ ನಿರ್ಣಯ ಎಂಬ ಭಾರೀ ಗಾತ್ರದ ಪುಸ್ತಕಗಳನ್ನು ಸಂಪ್ರದಾಯಸ್ಥರ ಮನೆಗಳಲ್ಲಿ ನೋಡಿದ್ದ ಕಾರಣ ಈ ಪುಟ್ಟ ಪುಸ್ತಕವನ್ನು ಇಳಿಸಿಕೊಂಡು ತಿರುವಿ ಹಾಕಿದೆ. 

 

ಆ ಪುಸ್ತಕದ "ಭಾವ ಸಂಗ್ರಹ" ಈ ಪುಸ್ತಕ. ಕನ್ನಡ ಲಿಪಿಯಲ್ಲಿ ಇರುವ ಸಂಸ್ಕೃತ ಶ್ಲೋಕಗಳನ್ನು ಮತ್ತು ಶಬ್ದವಾರು ಕೊಟ್ಟಿರುವ ಅನ್ವಯಾರ್ಥ ಬಿಟ್ಟರೆ ಉಳಿಯುವದು ಕೇವಲ ಹತ್ತು ಪುಟಗಳು. 

 

ಆ ಹತ್ತು  ಪುಟಗಳಲ್ಲಿ ನನ್ನ ಗಮನಕ್ಕೆ ಒಂದ ಕೆಲವು ಆಸಕ್ತಿಕರ ವಿಷಯಗಳು.

 

1 ) ದ್ರೋಣಾಚಾರ್ಯರು ಶ್ರೀಕೃಷ್ಣನ ಪ್ರೇರಣೆಯಿಂದ ತಮ್ಮ ಪುತ್ರ ಅಶ್ವತ್ಥಾಮಾಚಾರ್ಯರಿಗೆ ಹಾಲಿಗೋಸ್ಕರವಾಗಿ ಶ್ರೀಪರಶುರಾಮದೇವರಲ್ಲಿ ಹೋಗಿ ಅವರ ಆಶ್ರಯದಲ್ಲಿದ್ದು ಸಮಸ್ತ ವಿದ್ಯೆಗಳನ್ನೂ ಕಲಿತರು.(ಇದು ನನಗೆ ಗೊತ್ತಿರಲಿಲ್ಲ)

೨) ಕೋಪದಿಂದ ಜರಾಸಂಧನು ಸಕಲ ಸಾಮಂತರಾಜರು ಮತ್ತು ಸೈನಿಕರಿಂದೊಡಗೂಡಿ ಶ್ರೀಕೃಷ್ಣನನ್ನು ಜಯಿಸಿ ಸಂಹರಿಸಬೇಕೆಂಬ ದುಭಿಸಂಧಿಯಿಂದ ಬಂದನು. ಶ್ರೀಕೃಷ್ಣನು ಜರಾಸಂಧನು ಮತ್ತೆ ತನ್ನ ಮೇಲೆ ಯುದ್ಧ ಮಾಡಲು ಬಂದಿದ್ದಾನೆಂದು ತಿಳಿದು, ಅತ್ಯಂತ ಸಮರ್ಥನೂ, ಅರಿಭಯಂಕನೂ ತಾನಾಗಿದ್ದರೂ, ಜರಾಸಂಧನನ್ನು ಅಲ್ಲಿಯೇ ಜಯಿಸಲು ಸಮರ್ಥನಾಗಿದ್ದರೂ, ಜಗತ್ತಿಗೆ ಇಂಥ ಸಮಯದಲ್ಲಿ ಹೇಗೆ ವರ್ತಿಸಬೇಕೆಂದು ರಾಜನೀತಿಯನ್ನು ತೋರಿಕೊಡಲೋಸುಗ ಅಣ್ಣ ಬಲರಾಮನಿಂದ ಕೂಡಿಕೊಂಡು ಅತಿಗಹನವಾದ ಗೋಮಂತಪರ್ವತಕ್ಕೆ ಹೋದನು. 

 

("  ಇಂಥ ಸಮಯದಲ್ಲಿ ಹೇಗೆ ವರ್ತಿಸಬೇಕು" ಇದನ್ನು ಹುಡುಕಬೇಕು.)

 

(ಭಸ್ಮಾಸುರನಿಗೆ ವರ ಕೊಟ್ಟ ಶಿವನ ಮೇಲೆಯೇ ಕೈ ಇಡಲು ಹೋದಾಗ, ಶಿವ ಅಲ್ಲಿಂದ ಓಡಿ ಹೋದದ್ದು ಅಹಿಂಸೆಯ ಬುದ್ದಿಯಿಂದ ಎ೦ದು ಇತ್ತೀಚೆಗೆ ಎಲ್ಲೋ ಓದಿದ್ದು ನೆನಪಾಯಿತು.)

೩) 

ಒಂದು  ಪ್ರಸಂಗದಲ್ಲಿ  ಯುಧಿಷ್ಠಿರನು" ಅರ್ಜುನ! ನಿನಗೇತಕ್ಕೆ ಈಗಾಂಡೀವ? ಅದನ್ನು ಬಿಸುಡು'' ಎಂದು ನಿಂದಿಸಿದನು. ಆಗ ಅರ್ಜುನನು ಹಿಂದೆ "ನನ್ನ ಗಾಂಡೀವವನ್ನು ಅವಹೇಳನ ಮಾಡಿದವರನ್ನು ಸಂಹರಿಸುತ್ತೇನೆ” ಎಂದು ಪ್ರತಿಜ್ಞೆ ಮಾಡಿದ್ದರಿಂದ, ಗಾಂಡೀವವನ್ನು ನಿಂದಿಸಿದ ಅಣ್ಣನಾದ ಧರ್ಮಜನನ್ನೇ ಸಂಹರಿಸಲು ಉದ್ಯುಕ್ತನಾದನು. ಆಗ ಶ್ರೀವಾಸುದೇವನು ಧನಂಜಯನನ್ನು ತಡೆದು ಆ ದೋಷದಿಂದ ಅರ್ಜುನನನ್ನು ಮತ್ತು ಧರ್ಮರಾಜನ್ನು ರಕ್ಷಿಸಿದನು. ಆಗ ಪಾರ್ಥನು ಅಣ್ಣನನ್ನೇ ಸಂಹರಿಸಲು ಮುಂದಾದೆನಲ್ಲಾ ಎಂದು ಕಡುನೊಂದು ಭ್ರಾತೃವಧಪ್ರಯತ್ನ ಮತ್ತು ನಿಂದನೆಯ ಅಪರಾಧ ಮಾಡಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾದಾಗ ಶ್ರೀಕೃಷ್ಣನು “ಅರ್ಜುನ ತಡೆ, ತಡೆ, ಭ್ರಾತೃಹತ್ಯಾ ಪ್ರಯತ್ನದಿಂದ ಆಪರಾಧವಾಯಿತೆಂದು ಭಾವಿಸುವಿಯಾದರೆ ಆತ್ಮಸ್ತುತಿಯನ್ನು ಮಾಡಿಕೋ ಅದು ಆತ್ಮಹತ್ಯೆ ಮಾಡಿ- ಕೊಂಡಂತಾಗುವುದು'', ಎಂದು ಹೇಳಿ ಅರ್ಜುನನು ಆತ್ಮಸ್ತುತಿ ಮಾಡಿಕೊಳ್ಳುವಂತೆಮಾಡಿ ಅರ್ಜುನನು ಆತ್ಮಸ್ತುತಿ ಮಾಡಿ- ಕೊಳ್ಳುವಂತೆಮಾಡಿ ಅರ್ಜುನನನ್ನು ಸಂರಕ್ಷಿಸಿದನು. 

 

(ಇಲ್ಲಿ ಆತ್ಮ ಸ್ತುತಿಯನ್ನು ಮಾಡಿಕೊಂಡರೆ ಅದು ಆತ್ಮಹತ್ಯೆ ಸಮ ಎಂಬ ಮಾತು ಇಷ್ಟವಾಯ್ತು )

 

೪)  (ಕುರುಕ್ಷೇತ್ರ ಯುದ್ಧದ ನಂತರ )ಛದ್ಮ ವೇಷಧಾರಿಯಾಗಿ ಭಿಕ್ಷುಕನ ರೂಪದಿಂದ ಬಂದ ದುರ್ಯೋಧನನ 'ಮಿತ್ರನಾದ' ಎಂಬ ಅಸುರನು, ಧರ್ಮರಾಜನನ್ನು ನಿಂದಿಸುತ್ತಿರಲು ಆ ಭಿಕ್ಷುಕನನ್ನು ಅಲ್ಲಿದ್ದವರು ಶಾಪಪ್ರದಾನದಿಂದ ದಗ್ಧಗೊಳಿಸಿದರು. ಆಗ ಧರ್ಮರಾಜನು ತನ್ನ ರಾಜಪಟ್ಟವನ್ನು (ರಾಜ್ಯವನ್ನು) ತ್ಯಜಿಸಲು ಉದ್ಯುಕ್ತನಾದನು.  

 

( ಆ ಭಿಕ್ಷುಕನನ್ನು ಕೊಂದದ್ದಾಗಲೀ ಕೊಲ್ಲಿಸಿದ್ದಾಗಲೀ ಇವನಲ್ಲವಲ್ಲ, ಅದೇಕೆ ರಾಜ್ಯವನ್ನು ತ್ಯಜಿಸಲು  ಸಿದ್ಧನಾದ ? ಇದಕ್ಕೆ ಉತ್ತರವನ್ನು ಮಹಾಭಾರತದಲ್ಲಿ ಹುಡುಕಬೇಕೇನೋ)  

 

 

 

 

 

 

 

 

 

 

 

 

 

Rating
Average: 4 (1 vote)