ಪುಸ್ತಕನಿಧಿ - ಮೃತ್ಯುವಿಗಿಂತಲೂ ಬಲಶಾಲಿಯಾದುದು ಏನು?

ಪುಸ್ತಕನಿಧಿ - ಮೃತ್ಯುವಿಗಿಂತಲೂ ಬಲಶಾಲಿಯಾದುದು ಏನು?

"ಎಲ್ಲಕಾಲಕ್ಕೂ ಬರುವ ಕಥೆಗಳು " - ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡಿದ್ದ ಪುಸ್ತಕ. ಈಗ archive.org ನಲ್ಲಿ ಸಿಕ್ಕೀತು.  ಇದು ಮಕ್ಕಳಿಗಾಗಿ ನ್ಯಾಷನಲ್ ಬುಕ್ ಟ್ರಸ್ಟ್ ನವರು ಹೊರತಂದ ಪುಸ್ತಕ. 

ಇದರಲ್ಲಿ ಖಾಂಡವ ದಹನ , ಬಕಾಸುರನ ವಧೆ , ಉಪಮನ್ಯುವಿನ ಕಥೆ , ಪರೀಕ್ಷಿತನ ಕಥೆ ಮತ್ತು ಸತ್ಯವಾನ ಸಾವಿತ್ರಿ ಕಥೆ ಇವೆ. 

ಇಲ್ಲಿನ ಕಥೆಗಳ ವಿಶೇಷ ಹೀಗಿವೆ: -

೧) ಸತ್ಯವಾನ ಸಾವಿತ್ರಿ ಕಥೆಯಲ್ಲಿ ಸಾವಿತ್ರಿಯು ಸತ್ಯವಾನನನ್ನು ಮೆಚ್ಚಿ , ಅವನು ಬೇಗನೆ ಸಾಯಲಿರುವ ಬಗ್ಗೆ ಗೊತ್ತಿದ್ದೂ ಹಟ ಮಾಡಿ  ಮದುವೆಯಾದವಳು. ಸತ್ಯವಾನನು ಬೇಗನೆ ಸಾಯಲಿರುವ ಸಂಗತಿ ಸತ್ಯವಾನನನ್ನು ಬಿಟ್ಟು ಎಲ್ಲರಿಗೂ ಗೊತ್ತಿದೆ. ಆ ದಿನ ಸಾವಿತ್ರಿ ಸತ್ಯವನ್ನು ಜೊತೆಗೆ ಅರಣ್ಯಕ್ಕೆ ಹೋಗುವಳು. .ಅವನಿಗೆ ಒಂದು ಹಾವು ಕಡಿದು ಅವನು ಸತ್ತು ಹೋಗುವನು .  ಅವನನ್ನು ತೆಗೆದುಕೊಂಡು ಹೋಗಲು ಸ್ವತಹ ಯಮನೇ ಬಂದಿದ್ದಾನೆ,  ಆ ತರಹ ಯಮನೇ  ಹೋಗಲು ಆತನಿಗೆ ನಾರದನ ಸಲಹೆಯಿದೆ. ಅಲ್ಲಿ ಯಮನ ಜೊತೆ ಮಾತನಾಡಿ ಸತ್ಯವಾನನ ಪ್ರಾಣವನ್ನು ಮರಳಿ ಪಡೆದ ಕಥೆ ನಿಮಗೆಲ್ಲ ಗೊತ್ತಿದೆ, ಅಲ್ಲವೆ? 
ಆಮೇಲೆ ಸಾವಿತ್ರಿಯ ತಂದೆಯು ಅವಳನ್ನು ಕೇಳಿದ - ನಿನಗೆ ಯಮನನ್ನು ಎದುರಿಸಲು ಇಷ್ಟೊಂದು ಧೈರ್ಯ ಹೇಗೆ ಬಂತು?
ಆಗ ಅವಳು ಹೇಳಿದಳು -"ನಾನು ಮೊದಲ ಸಲ ಸತ್ಯವಾನನ ತಾಯಿಯನ್ನು ಕಂಡಾಗಲೇ ಆಕೆ, ಸತ್ಯವಾನ ಹುಟ್ಟಿದಾಗ ಜ್ಯೋತಿಷಿಗಳು ಜಾತಕ ರಚಿಸಿದ್ದನ್ನು ಹೇಳಿದ್ದಳು. ಮತ್ತು ಆ ಜ್ಯೋತಿಷಿಗಳಲ್ಲಿ ಉಳಿದವರಿಗಿಂತ ಜ್ಞಾನಿಯೂ  ದೂರದೃಷ್ಟಿಯುಳ್ಳವನೂ ಆದ ಒಬ್ಬ ಜ್ಯೋತಿಷಿ ಮಾತ್ರ, ಉಳಿದವರು ಹೇಳಿದ ಭವಿಷ್ಯ ತುದಿಯಲ್ಲಿ ತನ್ನದೊಂದು ಸೂಚನೆಯನ್ನು ಕೂಡಿಸಿದ್ದನಂತೆ, ಸಾವಿಗಿಂತಲೂ ಬಲಶಾಲಿಯಾದ ಇನ್ನೊಂದು ವಸ್ತುವಿನಿಂದ  ಸತ್ಯವಾನನ ಮರಣವನ್ನು ನಿವಾರಿಸಲು ಸಾಧ್ಯ ಎಂದು. ಆ ಮಾತು ನನಗೆ ಭರವಸೆ ಕೊಟ್ಟಿತು, ಧೈರ್ಯ ಕೊಟ್ಟಿತು. ನನ್ನಲ್ಲಿ ಸಾವಿಗಿಂತ ಬಲಶಾಲಿಯಾದ ವಸ್ತುವಿತ್ತು, ಅದೇ ಪ್ರೇಮ. 

೨) ರಾಜ ಪರೀಕ್ಷಿತನು ಬೇಟೆಗೆ ಹೋದಾಗ ದುಡುಕಿ ಒಬ್ಬ ಸಾಧು ಮನಸ್ಸಿನ ಋಷಿಗೆ ಅವಮಾನ ಮಾಡಿದ. ಅವನ ಮಗನಿಗೆ ಸಿಟ್ಟು ಬಂದು ಪರೀಕ್ಷಿತನಿಗೆ ಒಂದು ವಾರದಲ್ಲಿ ಹಾವಿನಿಂದ ಸಾಯುವಂತೆ ಶಾಪ ಕೊಟ್ಟ. ಆಗ ಋಷಿಯು ಮಗನಿಗೆ ತಿಳಿ ಹೇಳುತ್ತಾನೆ - ನೀನು ತಪ್ಪು ಮಾಡಿದೆ, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ   ಶಾಪ ಕೊಟ್ಟೆ. ನಿನ್ನ ಶಾಪ ನಿಜವಾಗುತ್ತದೆ. ಆದರೆ ಅದನ್ನು ತಪ್ಪಿಸುವ ಶಕ್ತಿ ನಿನಗೆ ಇಲ್ಲ.ಇದು ಸಾಧುಜನರು ನಡೆದುಕೊಳ್ಳುವ ರೀತಿಯಲ್ಲ.

ನಂತರ ಅವನು  ತನ್ನ ಮಗನು ಕೊಟ್ಟ ಶಾಪದ ಸಂಗತಿಯನ್ನು  ರಾಜನಿಗೆ ತಿಳಿಸಿ ಎಚ್ಚರದಿಂದಿರಲು ಹೇಳುತ್ತಾನೆ. 

ರಾಜನು ತನ್ನ ತಪ್ಪನ್ನು ತಿಳಿದುಕೊಳ್ಳುತ್ತಾನೆ, ಋಷಿಯ ಒಳ್ಳೆಯ ಮನಸ್ಸಿನ ಕುರಿತಾಗಿ ಅವನಲ್ಲಿ ಗೌರವ ಭಾವನೆ ಮೂಡುತ್ತದೆ. ತನ್ನ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಾನೆ. ಜೊತೆಗೆ ಯಾವುದೇ ಹಾವಿನ ವಿಷದಿಂದ ಕಾಪಾಡುವ ಶಕ್ತಿ ಇರುವ ರಾಜ ವೈದ್ಯನಿಗೆ ಹೇಳಿ ಕಳಿಸುತ್ತಾನೆ. 

ಆ ರಾಜವೈದ್ಯನು ರಾಜನ ಜೀವ ಉಳಿಸಲು ಹೊರಟಾಗ ದಾರಿಯಲ್ಲಿ ರಾಜನ ಜೀವ ತೆಗೆಯಲು ಹೊರಟಿರುವ ತಕ್ಷಕನ ಭೆಟ್ಟಿಯಾಗುತ್ತದೆ. ಆ ತಕ್ಷಕನು ರಾಜವೈದ್ಯನಿಗೆ ತಿಳಿ ಹೇಳುತ್ತಾನೆ - ಪರೀಕ್ಷಿತನ ಮರಣವು ವಿಧಿಲಿಖಿತವಾಗಿದೆ. ಋಷಿಯ ಮಗನು ಶಾಪವನ್ನು ಕೊಟ್ಟಿಲ್ಲ.  ಆದರೆ ವಿಧಿಲಿಖಿತವನ್ನು ಹೇಳಿದ್ದಾನೆ ಅಷ್ಟೇ.   ಅವನ ಆಯುಷ್ಯವು ಕೊನೆಯಾಗುವುದು ಮೊದಲೇ ನಿಶ್ಚಯವಾಗಿದೆ. 

ಇದನ್ನು ಕೇಳಿ ರಾಜ ವೈದ್ಯನು ತಾನು ಈ ವಿಷಯದಲ್ಲಿ ನಡುವೆ ಬರುವುದಿಲ್ಲ ಎಂದು ತನ್ನ ಪ್ರಯಾಣವನ್ನು ರದ್ದು ಮಾಡುತ್ತಾನೆ! ಆಮೇಲೆ ನಿಮಗೆ ಗೊತ್ತಿರುವ ಹಾಗೆ ಒಂದು ಹಣ್ಣಿನಿಂದ ಹೊರಟು ಹುಳು ದೊಡ್ಡದಾಗಿ ರಾಜನನ್ನು ಕಚ್ಚಿ ಕೊಲ್ಲುತ್ತದೆ. 

೩) ನಿಮಗೆ ಭೀಮನು ಬಕಾಸುರನನ್ನು ಕೊಂದ ಕಥೆ ಗೊತ್ತಿದೆ - ಈ ಪುಸ್ತಕದಲ್ಲಿ ಅದರ ಕಥೆಯಲ್ಲಿ ಹೇಳಿದಂತೆ ಈ  ಬಕಾಸುರ ಯಾರು ಗೊತ್ತೆ?

“ಈ ದೇಶದ ರಾಜ ದುರ್ಬಲ ನಾಗಿದ್ದಾನೆ. ಪ್ರಜೆಗಳನ್ನು ರಕ್ಷಿಸಿಕೊಳ್ಳುವ ಚಾತುರ್ಯ ಆತನಿಗಿಲ್ಲ. ಮೇಲಾಗಿ ಅವರು ಶತಮೂರ್ಖ, ತಾನು ಆಲಸಿಯಾಗಿ, ರಾಜ್ಯದ ಬೇರೆ ಬೇರೆ ಭಾಗಗಳನ್ನು ತನ್ನ ಹೆಸರಿನಲ್ಲಿ ಆಳುವುದಕ್ಕೆ ಅನೇಕ ದಳಪತಿಗಳನ್ನು ನೇಮಿಸಿದ್ದಾರೆ. ಈ ಗ್ರಾಮ ಮತ್ತು ಸುತ್ತಣ ಪ್ರದೇಶವನ್ನು ಅಳುವುದಕ್ಕೆ ನೇಮಕವಾಗಿರುವವನು ಬಕ ಎಂಬ ಒಬ್ಬ ರಾಕ್ಷಸ. ಅವನು ಮನುಷ್ಯರನ್ನು ತಿನ್ನುತ್ತಾನೆ. "

:)

Rating
Average: 5 (3 votes)