ಪುಸ್ತಕನಿಧಿ- 'ವಾಗ್ದೇವಿ' - ಕನ್ನಡದ ಒಂದು ಆರಂಭಿಕ ಸಾಮಾಜಿಕ ಕಾದಂಬರಿ

ಪುಸ್ತಕನಿಧಿ- 'ವಾಗ್ದೇವಿ' - ಕನ್ನಡದ ಒಂದು ಆರಂಭಿಕ ಸಾಮಾಜಿಕ ಕಾದಂಬರಿ

 

ಮೊದಲು ಪುರಾಣದ ಕತೆ ನೆನಪಿಸುವೆ. ಶಂತನು ರಾಜನು. ದೇವವ್ರತನು ಅವನ ಬೆಳೆದ ಮಗನು. (ಮುಂದೆ ಅವನೇ ಭೀಷ್ಮ ಎಂದು ಪ್ರಖ್ಯಾತಿ ಹೊಂದಿದನು. ) ಶಂತನುವು ಒಂದು ಸಲ ಮತ್ಸ್ಯಗಂಧಿಯನ್ನು ನೋಡಿ ಮರುಳಾದನು. ಅವಳು ಇವನನ್ನು ಮದುವೆಯಾಗಲು ಒಂದು ಶರತ್ತು ವಿಧಿಸಿದಳು . ಅದೇನಪ್ಪಾ ಎಂದರೆ ಮುಂದೆ ತನಗೆ ಹುಟ್ಟುವ ಮಗನಿಗೇ ಪಟ್ಟ ಬರಬೇಕು ಅಂತ.

 

ಈ ಕತೆ ನಿಮಗೆಲ್ಲ ಗೊತ್ತು.

 

ಈಗ ವಾಗ್ದೇವಿ ಎಂಬ ಈ ಕಾದಂಬರಿಗೆ ಬನ್ನಿ. ಇದು ಕನ್ನಡದ ಆರಂಭಿಕ ಸಾಮಾಜಿಕ ಕಾದಂಬರಿಗಳಲ್ಲಿ ಒಂದು. ಬೋಳಾರ ಬಾಬುರಾವ್ ಎಂಬವರು ಬರೆದು 1905 ರಲ್ಲಿ ಪ್ರಕಟವಾದ ಕಾದಂಬರಿ. .ನಿಜಕ್ಕೂ ನಡೆದ ಒಂದು ಘಟನೆಯ ಆಧಾರಿತವಂತೆ. ತುಂಬ ನೈಜವಾಗಿ , ಲೇಖಕನಿಂದ ಯಾವುದೇ ಟೀಕೆ, ಟಿಪ್ಪಣಿಗಳಿಲ್ಲದೆ ಕಾದಂಬರಿಯು ಸಾಗುತ್ತದೆ. ಮುನ್ನೂರು ಪುಟಗಳಿಗಿಂತ ದೊಡ್ಡ ಕಾದಂಬರಿಯಾದರೂ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಇಷ್ಟಕ್ಕೂ ಕತೆ ಏನು?

 

ಇಲ್ಲಿ ಒಬ್ಬ ಮಠದ ಸ್ವಾಮೀಜಿ (ಅವನ ಹೆಸರು ಚಂಚಲನೇತ್ರ ಶ್ರೀ ಪಾದಂಗಳವರು !) ಯು ಅದಾಗಲೇ ಮದುವೆಯಾಗಿರುವ ಒಬ್ಬಳ ಮೋಹಕ್ಕೆ ಒಳಗಾಗಿ ಅವಳನ್ನು ಮಠದ ಅವರಣದೊಳಗೇ ತಂದಿಟ್ಟುಕೊಳ್ಳುತ್ತಾರೆ. ಅವಳ ಗಂಡ, ತಾಯಿ, ತಂದೆ ಸಮೇತ . ಅವಳೂ ಒಂದು ಶರತ್ತು ಹಾಕುತ್ತಾಳೆ. ತನಗೆ ಮುಂದೆ ಹುಟ್ಟುವ ಮಗನೇ ಮಠದ ಸ್ವಾಮಿಜಿಯ ಪಟ್ಟಕ್ಕೆ ಬರಬೇಕು ಅಂತ!

 

ಮೊದಲ ನೂರು ಪುಟಗಳಲ್ಲಿ ಅವಳನ್ನು ಹೇಗೆ ಮಠದಲ್ಲಿ, ನೆಲೆಯಾಗಿಸುತ್ತಾರೆ, ಯಾರೋ ನೇರವಾಗಿ ದೊರೆಗೆ ಈ ಬಗ್ಗೆ ದೂರು ಕೊಟ್ಟಾಗ ದೊರೆ ಹೇಗೆ ವಿಚಾರಣೆ ಮಾಡುತ್ತಾನೆ , ಮಠದ ಸ್ವಾಮೀಜಿಯು ಹೇಗೆ ಈ ಆಪತ್ತಿನಿಂದ ಪಾರಾಗುತ್ತಾರೆ ಎಂಬುದು ವಿವರವಾಗಿ ಇದೆ. ಈಗ ನಾನು ನೂರಾ ಇಪ್ಪತ್ತನೇ ಪುಟದಲ್ಲಿ ಇದ್ದೇನೆ . ಈಗ ಅವಳಿಗೆ ಮಗುವೂ ಹುಟ್ಟಿದೆ! ಮುಂದೆ ಏನಾಗುತ್ತದೆ ? ನೋಡಬೇಕು. 

 

 

(ಈ ಕಾದಂಬರಿಯು ನಿಮಗೆ ಅಂತರ್ಜಾಲದಲ್ಲಿ ಪುಕ್ಕಟೆಯಾಗಿ ಸಿಗುತ್ತದೆ.

https://pustaka.sanchaya.net/ ದಲ್ಲಿ ವಾಗ್ದೇವಿ ಅಂತ ಹುಡುಕಿ. )

 

 

 

Rating
Average: 4 (1 vote)