ಪುಸ್ತಕನಿಧಿ: 'ಶ್ರೀ ರಾಮಚಂದ್ರ' - ಜಿ. ಪಿ. ರಾಜರತ್ನಂ ಅವರ ಪುಸ್ತಕ

ಪುಸ್ತಕನಿಧಿ: 'ಶ್ರೀ ರಾಮಚಂದ್ರ' - ಜಿ. ಪಿ. ರಾಜರತ್ನಂ ಅವರ ಪುಸ್ತಕ

ಈ ಪುಸ್ತಕವು archive.org ತಾಣದಲ್ಲಿ ಇದ್ದು, 'ಶ್ರೀ ರಾಮಚಂದ್ರ' ಎಂದು ಹುಡುಕಿ ಪಡೆಯಬಹುದು.

ಇದರಲ್ಲಿ ರಾಮಾಯಣದ ಕಥೆಯು ತುಂಬಾ ಸರಳವಾಗಿ 120 ಪುಟಗಳಲ್ಲಿ ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಅಯೋಧ್ಯೆಗೆ ಬಂದು ಅಧಿಕಾರವನ್ನು ವಹಿಸಿಕೊಂಡವರೆಗೆ ಕಥೆಯನ್ನು ಹೇಳಿದ್ದಾರೆ. ಬಹುಶ: ವಾಲ್ಮೀಕಿ ರಾಮಾಯಣವೇ ಇದಕ್ಕೆ ಆಧಾರವಾಗಿರಬೇಕು. ಇದರಲ್ಲಿ ಯಾವುದೇ ಮುನ್ನುಡಿ ಇಲ್ಲದ್ದರಿಂದ ಈ ಬಗ್ಗೆ ಏನೂ ತಿಳಿಯುವದಿಲ್ಲ.

ರಾಮಾಯಣದ ಕಥೆ ನನಗೆ ಈಗಾಗಲೇ ಗೊತ್ತಿತ್ತಾದರೂ ಈ ಪುಸ್ತಕದಲ್ಲಿ ಏನಾದರೂ ಸದ್ಗುಣದ ಮತ್ತು ಸನ್ನಡತೆಯ ಉದಾಹರಣೆಗಳು ನಮಗೆ ಸಿಗಬಹುದು ಎಂದುಕೊಂಡು ಇದನ್ನು ಪೂರ್ತಿಯಾಗಿ ಓದಿದೆ.

ಅಲ್ಲಿ ಕೆಳಗಿನ ಸಂಗತಿಗಳು ನನ್ನ ಗಮನಕ್ಕೆ ಬಂದವು.

1) ರಾಮನು ಪರಶುರಾಮನಿಗೆ ಹೇಳಿದ- ನೀನು ಸಾಹಸಿ ಹೌದು. ಆದರೆ ಉಳಿದವರನ್ನು ಅಸಾಹಸಿಗಳೆಂದೂ ನಿರ್ವೀಯರೆಂದೂ ಹಳಿಯುವದು, ಹೀಗೆ ಗರ್ವಿತನಾಗಿರುವದು ನಿನ್ನಂತವನಿಗೆ ತಕ್ಕದ್ದಲ್ಲ.

2) ರಾಮನು ವನವಾಸಕ್ಕೆ ಹೊರಟ ಸಂದರ್ಭದಲ್ಲಿ ರಥದಲ್ಲಿ ಕುಳಿತಿದ್ದ ಅವನನ್ನು ಪ್ರಜೆಗಳು ನಡೆಯುತ್ತ ಹಿಂಬಾಲಿಸುವುದನ್ನು ನೋಡಿ ರಾಮನು ರದದಿಂದ ಇಳಿದು ಅವನೂ ಪಾದಚಾರಿಯಾಗಿ ನಡೆದನು.

3) ಭರತನು ರಾಮನನ್ನು  ಭೇಟಿಯಾಗಲು ಹೊರಟು ತನ್ನ ಕ್ಷತ್ರಿಯ ವೇಷವು ನಾರುಮಡಿ ಧರಿಸಿರುವ ರಾಮನ ಮುಂದೆ ಸರಿಯಾಗದೆಂದು ಅದನ್ನು ಕಳಚಿ ತಾನು ಕೂಡ ನಾರುಮಡಿಯನ್ನು ಧರಿಸಿದ.

4) ಭರತನು ಅಯೋಧ್ಯೆಗೆ ಮರಳಿ ರಾಜನಾಗು ಎಂದು ಶ್ರೀರಾಮನನ್ನು ಕೇಳಿಕೊಂಡನು. ಅದಕ್ಕೆ ವಸಿಷ್ಟ ಮುನಿ ತನ್ನ ಬೆಂಬಲವನ್ನು ನೀಡಿ ರಾಜನಾಗು ಎಂದು ಹೇಳಿ ಆಚಾರ್ಯನಾದ ತನ್ನ ಮಾತನ್ನು ಶ್ರೀ ರಾಮ ನಡೆಸಬೇಕೆಂದು ಹೇಳಿದನು. ಅದಕ್ಕೆ ಪ್ರತಿಯಾಗಿ ಆಚಾರ್ಯ ವಚನಕ್ಕಿಂತ ಪಿತೃವಾಕ್ಯವೇ ಹೆಚ್ಚಿನದೆಂದು ರಾಮನು ಹೇಳಿದನು.

5) ಭ್ರತ್ಯರಿರುವಾಗ ಒಡೆಯನು ತಾನೇ ಕೆಲಸಕ್ಕೆ ನಿಲ್ಲಬಾರದು ಎಂದು ವಾನರರು ಹೇಳಿದರು.

Rating
Average: 4 (2 votes)