ಪುಸ್ತಕನಿಧಿ-ಸಮವಾಯೋ ಏವ ಸಾಧು-ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು
ಸಮವಾಯೋ ಏವ ಸಾಧು - (ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು) ಇದು ಅಶೋಕನ ಶಿಲಾಶಾಸನದಲ್ಲಿನ ವಾಕ್ಯ . ಸ್ವಮತವನ್ನು ಪೂಜಿಸುವದಾಗಲೀ ಪರಮತವನ್ನು ನಿಂದಿಸುವದಾಗಲೀ ಆಗಬಾರದು . ಇದೇ ಮಾತನ್ನೇ ಭಗವಾನ್ ಬುದ್ಧನೂ ಹೇಳಿದ್ದಾನೆ . ''ಅನ್ಯರಿಗೆ ಅಸಹ್ಯಪದಬೇಡ ,ತನ್ನ ಬಣ್ಣಿಸಬೇಡ, ಇದಿರ ಹಳಿಯಲು' ಬೇಡ ' ಎಂದು ಬಸವಣ್ಣನವರೂ ಹೇಳಿದ್ದಾರೆ. ಇಂತ್ಹದೇ ಮಾತನ್ನು ಬುಕ್ಕರಾಯನ ಶಾಸನದಲ್ಲಿ - ಶೈವರಿಗೂ ವೈಷ್ಣವರಿಗೂ ಇದ್ದ ಮನಸ್ತಾಪವನ್ನು ನಿವಾರಿಸುವಲ್ಲಿ ನೋಡಬಹುದು. ಇದೇ ಮಾತನ್ನು 'ರಸವೇ ಜನನ , ವಿರಸ ಮರಣ , ಸಮರಸವೇ ಜೀವನ' ಎಂಬ ಕವಿವಾಣಿಯೂ ಹೇಳುತ್ತದೆ . ಇದು ಇಂದು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಇಂದು ನಾನು ಓದಿದ 'ಮಹಾತ್ಮರ ಮರಣ' ಎಂಬ ಪುಸ್ತಕದಲ್ಲಿನ ಒಂದು ಲೇಖನದ ವಿಷಯ . ಈ ಪುಸ್ತಕವನ್ನು ಶ್ರೀ .ಜಿ. ಪಿ.ರಾಜರತ್ನಂ ಅವರು ಬರೆದಿದ್ದಾರೆ . ಒಳ್ಳೆಯ ಪುಸ್ತಕ . ನೀವೂ ಓದಿ. ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
Rating