ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’

ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’

ಏನಿದು? ಕನ್ನಡಿಗರು ಅಮೇರಿಕವನ್ನು ಆಳಿದರೆ ? ಯಾವಾಗ ?
ಈ ವಿಷಯಕ್ಕೆ ಆಮೇಲೆ ಬರೋಣ , ಮೊದಲು ಇದನ್ನು ಓದಿ .
ಕನ್ನಡ ಮೊದಲಾದ ದ್ರಾವಿಡ ಭಾಷೆಗಳಿಗೂ ವಿಶ್ವದ ಇತರ ಭಾಷಾ ಸಮುದಾಯಗಳಿಗೂ ಯಾವ ಸಂಬಂಧವೂ ಇಲ್ಲವೆಂದು ಹೇಳುವದು ತಪ್ಪು.... ಜನಸಾಮಾನ್ಯರು ದ್ರವದಂತೆ ಬಳಸುವ ಭಾಷೆ ದ್ರಾವಿಡವೆಂದೂ ಸಾಹಿತ್ಯಕ್ಕಾಗಿ ಪರಿಷ್ಕೃತವಾದ ಭಾಷೆ ಸಂಸ್ಕೃತವೆಂದೂ ತಿಳಿಯಬೇಕು ... ಇಂಗ್ಲೀಷಿನ ಮೂಲಪದಗಳೆಲ್ಲಾ ಎಷ್ಟು ಆರ್ಯಶಬ್ದಗಳೋ ಅಷ್ಟೇ ದ್ರಾವಿಡ ಶಬ್ದಗಳೂ ಅಗಿವೆ. ....
.....
.....
.... ಇವೆಲ್ಲಾ ವಿಶ್ವದಾದ್ಯಂತ ಬಳಸಲ್ಪಡುತ್ತಿರುವ ಕನ್ನಡ ತಮಿಳು ಮೂಲದ ಪದಗಳೇ ಆಗಿವೆ . ಸ್ಪೇನಿನವರು ಅಮೇರಿಕವನ್ನು ದುರಾಕ್ರಮಣ ಮಾಡುವ ಮೊದಲು ಅಲ್ಲಿ ಬಳಸುತ್ತಿದ್ದ ಒಂದು ನೂರು ಕನ್ನಡ-ತೆಲುಗು-ಸಂಸ್ಕೃತ ಪದಗಳ ಪರಿಚಯ ನಾನು(*- ಅಂದ್ರೆ ನಾನು- ಸ್ರೀಕಾಂತ ಮಿಸರಿಕೋಟಿ ಅಲ್ಲ !- ಮುಂದೆ ಹೇಳುವ ಪುಸ್ತಕದ ಲೇಖಕರು ) ಬರೆದ "ಕನ್ನಡಿಗರು ಆಳಿದ ಅಮೇರಿಕ" ಪುಸ್ತಕದಲ್ಲಿದೆ.

ಈ ಮಾಹಿತಿಯನ್ನು ನೀವೇ ಕಣ್ಣಾರೆ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010044122 ಈ ವಿಳಾಸದಲ್ಲಿರುವ ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’ ಪುಸ್ತಕದಲ್ಲಿ ಓದಿ.

ಇದು ಮಹೇಶರು ಕಾಲಕಾಲಕ್ಕೆ ನಮಗೆ ತಿಳಿಸುತ್ತಿರುವ ವಿಷಯಗಳಿಗೆ ಬೆಂಬಲಿಸುವಂತಿದೆ .

ಅಂದ ಹಾಗೆ ಮಹೇಶರು ಅಂತ ಕಾಣುತ್ತೆ , ಕಿತ್ತಾಟಕ್ಕೆ ಸೂಕ್ತವಾದ ವಿಷಯ ಸೂಚಿಸಲು ಹೇಳಿದ್ದರು ! ನಾನು ಇಲ್ಲಿ ಬರೆದ ವಿಷಯವೂ ಒಂದು ಎಂಟ್ರಿ ಆಗಬಹುದೇ?

Rating
No votes yet