ಪುಸ್ತಕನಿಧಿ : 1956ರ ನವೆಂಬರ್ ಕಸ್ತೂರಿ

ಪುಸ್ತಕನಿಧಿ : 1956ರ ನವೆಂಬರ್ ಕಸ್ತೂರಿ

1956 ರ ನವೆಂಬರ್ ಕಸ್ತೂರಿಯು archive.org ತಾಣದಲ್ಲಿದೆ . ಅದನ್ನು ಇತ್ತೀಚೆಗೆ ನಾನು ಓದಿದೆ. ಅಲ್ಲಿಂದ ನಾನು ಬರೆದುಕೊಂಡ ವಿಷಯ ಕೆಳಗಿದೆ

1905ರಲ್ಲಿ ಕನ್ನಡ ಮಾತನಾಡುವ ಕರ್ನಾಟಕ ಜನರು 19 ಆಡಳಿತಗಳಲ್ಲಿ ಹಂಚಿ ಹೋಗಿದ್ದರು. ಕರ್ನಾಟಕ ಏಕೀಕರಣದ ಕನಸು ನನಸಾಗಲು ಅರ್ಧ ಶತಮಾನವೇ ಬೇಕಾಯಿತು. ಎಂಬ ಸಂಗತಿ ಇದೆ. ಅನುಭವವು ಸೀಮಿತ ಇರುತ್ತದೆ, ನಿರೀಕ್ಷಣೆಯು ಹಾಗಲ್ಲ. ನಿರೀಕ್ಷಣೆಯಿಂದ ನಾವು ಹೆಚ್ಚಿಗೆ ಕಲಿಯಬಹುದು. 

ಹಳೆಯದು ಎಂದು ಎಲ್ಲವೂ ಒಳ್ಳೆಯದಲ್ಲ ; ಹೊಸದೆಂದು ಎಲ್ಲವೂ ಕೆಟ್ಟದ್ದಲ್ಲ. ಸಜ್ಜನರು ಪರೀಕ್ಷಿಸಿ ಒಂದನ್ನು ಆಯುತ್ತಾರೆ. ಮೂಢರು ಇನ್ನೊಬ್ಬರ ನಂಬಿಕೆಯಿಂದ ನುಡಿಯುತ್ತ ಇರುತ್ತಾರೆ -ಕಾಳಿದಾಸ. ಕರ್ನಾಟಕ ಏಕೀಕರಣವಾದಾಗ ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಎರಡೇ ಇದ್ದವು. ಮೃದೂನಿ ಕುಸುಮಾದಪಿ ವಜ್ರಾದಪಿ ಕಠೋರಾಣಿ ಇದು ಸಜ್ಜನರ ಸ್ವಭಾವ. 

ವಿ ಕೆ ಮೆನನ್ನರ ಬಗೆಗೆ ಅನೇಕ ಆಕ್ಷೇಪಗಳನ್ನು ನೀವು ಈಗ ಕೇಳಿರಬಹುದು. ಆದರೆ ಕಸ್ತೂರಿ ಈ ಸಂಚಿಕೆಯಲ್ಲಿ ಅವರ ಬಗೆಗೆ ಹೀಗಿದೆ - ವಿ ಕೆ ಮೆನನ್ನರದು ಅಸಂಗ್ರಹ ವೃತ್ತಿ. ನಿರಾಡಂಬರ ಜೀವನ. ವಕೀಲ ವೃತ್ತಿಯಲ್ಲಿ ಫೀಸ್ ನಿರಾಕರಿಸುತ್ತಿದ್ದರು. ಮದುವೆ ಆಗಿರಲಿಲ್ಲ. ಮಾಂಸವನ್ನು ತಿನ್ನುತ್ತಿರಲಿಲ್ಲ . ಮಧ್ಯ ಕುಡಿಯುತ್ತಿರಲಿಲ್ಲ. ಲಂಡನ್ ರಾಯಭಾರಿಯಾಗಿದ್ದಾಗ ದೇಶದ ಮರ್ಯಾದೆಗಾಗಿ ಕೆಲಸ ಸಂಬಂಧ ಕಾರ್ ಉಪಯೋಗಿಸುತ್ತಿದ್ದರು . ವೈಯಕ್ತಿಕ ಕೆಲಸಕ್ಕಾಗಿ ಬಸ್ನಲ್ಲಿ ಹೋಗುತ್ತಿದ್ದರು. ಭಾರತ ಭವನದಲ್ಲಿ ವಾಸವಿದ್ದರೂ ಒಂದು ಕೋಣೆಯನ್ನು ಮಾತ್ರ ತಮಗಾಗಿ ಇಟ್ಟುಕೊಂಡಿದ್ದರು. ಜನರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರಲಿಲ್ಲ. ಆದರೆ ಶತ್ರುಗಳೂ ಅವರನ್ನು ಮೆಚ್ಚಿಕೊಳ್ಳುತ್ತಿದ್ದರು. ಕೋಟು ಪ್ಯಾಂಟ್ ಹಾಕುತ್ತಿದ್ದರಾದರೂ, ಕೆಲಸದ ಸಂಬಂಧ. 

ರಾಜಕೀಯ ಚಾಕ ಚಕ್ಯತೆ ಅವರಲ್ಲಿ ಇರಲಿಲ್ಲ. ಅವರನ್ನು ಕಮ್ಯುನಿಸ್ಟ್ ಎಂದು ಇತರರು ಟೀಕಿಸುತ್ತಿದ್ದರಾದರೂ ಅವರು ಎಂದೂ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿರಲಿಲ್ಲ. ಅವರಂಥ ಸ್ವತಂತ್ರ ನಿರ್ಭಯ ವ್ಯಕ್ತಿಗೆ ಅದು ಸಾಧ್ಯವೂ ಇರಲಿಲ್ಲ.  ನೆಹರು ಮತ್ತು ಮೆನನ್ ಸ್ವಭಾವಗಳಲ್ಲಿ ತೀರ ಬೇರೆ ಬೇರೆಯಾಗಿದ್ದರೂ ಮಿತ್ರರಾಗಿದ್ದರು. ಎರಡು ದೇಹಗಳಲ್ಲಿ ಉರಿಯುತ್ತಿದ್ದ ಆತ್ಮಪ್ರದೀಪ ಒಂದೇ-ಲೋಕಾಃ ಸಮಸ್ತಾಃ ಸುಖಿನೋಭವಂತು ಎಂಬುದೇ ಅದು. ಅವರ ವ್ಯಕ್ತಿತ್ವಗಳು ಒಂದಕ್ಕೊಂದು ಪೂರಕವಾಗಿದ್ದವು . ಓ ಹೃದಯ ಬುದ್ಧಿಗಳ ಹಾಗೆ.

ಎಸ್ ನಿಜಲಿಂಗಪ್ಪ, ವಿ ಕೆ ಕೃಷ್ಣ ಮೆನನ್ ಕುರಿತು ಲೇಖನಗಳು ಇವೆ.  ಈ ನವಂಬರ್ ಒಂದರಂದು ಭಾರತದ ಎಲ್ಲ ಸಂಸ್ಥಾನಿಕರು ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ಕಳೆದುಕೊಂಡರು. ಭಾರತವು ಹದಿನಾರಾಣೆ ಪ್ರಜಾರಾಜ್ಯವಾಯಿತು. 1857ರಲ್ಲಿ ಎಲ್ಲಾ ಸಂಸ್ಥಾನಿಕರು ಬ್ರಿಟಿಷರ ವಿರುದ್ಧ ಇರಲಿಲ್ಲ. ಅಂತ ಒಂದು ಲೇಖನದಲ್ಲಿ ಹೇಳುತ್ತಾರೆ.

ಚರ್ಚಿಲ್ಲರಿಗೆ ಶಾಲೆ ಎಂದರೆ ಸೇರುತ್ತಿರಲಿಲ್ಲ. ಸಾಕ್ಷರರು ವಿರುದ್ಧರಾದರೆ ರಾಕ್ಷಸರು ಆಗುತ್ತಾರೆ. ಸರಸ ಜನರು ವಿಪರೀತ ಆದರೂ ತಮ್ಮ ಸರಸತ್ವವನ್ನು ಬಿಡುವುದಿಲ್ಲ. - ಸಂಸ್ಕೃತ ಸುಭಾಷಿತ. ಕರ್ನಾಟಕದ ಡೆಕ್ಕನ್ ಪೀಠ ಭೂಮಿಯು ಜ್ವಾಲಾಮುಖಿಗಳಿಂದ ಆಗಿದೆ. ಅದು ಎರಡು ಮೈಲು ಆಳವಾಗಿದೆ. ಜ್ವಾಲಾಮುಖಿಗಳು ಸ್ಫೋಟವಾಗಿ ಡೆಕ್ಕನ್ ಪ್ರಸ್ಥಭೂಮಿ ಆಗುತ್ತಿರುವಾಗ ಗಂಗಾ ನದಿಯ ಬಯಲು ಸಮುದ್ರವಾಗಿತ್ತು ಅಂತೆ.

ಏಕಾಂಗಿಯಾಗಿರುವಾಗ ನಾವು ಎಂದು ಕಾವ್ಯದಲ್ಲಿ ಹೇಳುವುದೇಕೆ? ಜಬ್ ದಿಲ ಹೀ ಟೂಟ ಗಯಾ ಹಮ್ ಜೀಕೆ ಕ್ಯಾ ಕರೆಂಗೆ ಎಂದು ಹಿಂದಿಯ ನಾಯಕ ಹಾಡುವುದು ಏಕೆ? ಕುಮಾರವ್ಯಾಸನು ಭಾರತದಲ್ಲಿ ಅಲ್ಲಲ್ಲಿ ಬಹುವಚನವನ್ನು ಉಪಯೋಗಿಸುವುದು ಏಕೆ? ಬೇಂದ್ರೆ ಅವರು ಧಾರವಾಡ ಬಿಡುವಾಗ ನಾವು ಬರತೇವಿ ಇನ್ನ ಎನ್ನುವುದೇಕೆ? ಈ ಕುರಿತು ಮನಸುಖರಾಯರ ಒಂದು ಲೇಖನ ಇಲ್ಲಿದೆ. 

ಟಿಪ್ಪು ಸುಲ್ತಾನನು ಕೇವಲ ಮೈಸೂರಿನ ಹುಲಿ ಆಗಿರಲಿಲ್ಲ . ಅವನು ಮೈಸೂರನ್ನು ಕುಬೇರ ಬಂಡಾರವನ್ನಾಗಿ ಮಾಡಲು ಕೂಡ ಪ್ರಯತ್ನಿಸಿದ್ದನು ಎಂದು ಒಂದು ಲೇಖನ 'ರಾಷ್ಟ್ರೀಕರಣದ ಪ್ರವರ್ತಕ ಟಿಪ್ಪು ' ಇಲ್ಲಿದೆ. ಭಾರತದ ರಾಜರುಗಳಲ್ಲೆಲ್ಲ ಇವನೊಬ್ಬನೇ ವಿದೇಶ ಸಂಪರ್ಕ,ಹಾಗೂ ವಾಣಿಜ್ಯೋದ್ಯಮಗಳ ಮಹತ್ವವನ್ನು ತಿಳಿದಿದ್ದನು. ಅವನು ತನ್ನ ಕಾಲಕ್ಕೆ ಮೊದಲೇ ಹುಟ್ಟಿದ್ದರೆ ಭಾರತದಲ್ಲಿ ವಿದೇಶಿಯರ ಆಡಳಿತ ಸಾಧ್ಯವೇ ಆಗುತ್ತಿರಲಿಲ್ಲವಂತೆ. 

ಜಗತ್ತಿನ ಮೊಟ್ಟ ಮೊದಲ ಅಂಚೆ ಚೀಟಿಯ ಬಗ್ಗೆ ಒಂದು ಲೇಖನವಿದೆ. ಅದು ಬಂದಾಗ ಜನರಿಗೆ ಅದರಲ್ಲಿ ನಂಬಿಕೆ ಹುಟ್ಟಲಿಲ್ಲವಂತೆ. ವೃತ್ತಿಯಲ್ಲಿ ಮೇಲೆ ಏರ ಬಯಸುವವರಿಗೆ ಇರಬೇಕಾದ 12 ಗುಣಗಳ ಪಟ್ಟಿ ಇಲ್ಲಿದೆ. ಸಂಘಟನೆಯ ಅನಾನುಕೂಲತೆ ಏನು? ರಾಜಾಜಿಯವರ ಹೇಳಿಕೆ ಇಲ್ಲಿದೆ. ಮಗುವು ತೀರಿಕೊಂಡಾಗ, ಈ ದುಃಖ ಎಂದು ಮರೆತೀತು ಎಂದು ಒಬ್ಬ ತಾಯಿ ಕೇಳಿದಾಗ ತಂದೆಯಾದವನು ಅದಕ್ಕಿಂತ ಹೆಚ್ಚಿನ ದುಃಖ ಬಂದಾಗ ಎಂದು ಹೇಳಿದನಂತೆ. 

ಹಾರೆಗಳನ್ನು ಖರೀದಿ ಮಾಡುವಾಗ ಹಿಂದೊಮ್ಮೆ ನಿಯಂತ್ರಣ ಪದ್ಧತಿ ಇತ್ತಂತೆ. ಕೇವಲ ಬೇಸಾಯಕ್ಕಾಗಿ ಪರ್ಮಿಟ್ ಕೊಡುತ್ತಿದ್ದರಂತೆ. ಹೆಣ ಹೂಳುವುದು ಬೇಸಾಯ ಪದ್ಧತಿ ಅಲ್ಲ ಎಂದು ಅದಕ್ಕಾಗಿ ಹಾರೆಗಳ ಖರೀದಿಗೆ ಅನುಮತಿ ಕೊಡಲಿಲ್ಲವಂತೆ. ಕ್ಯಾನ್ಸರ್ ರೋಗದ ಬಗ್ಗೆ ಇಲ್ಲಿ ಒಂದು ಪರಿಚಯಾತ್ಮಕ ಲೇಖನ ಇದೆ. ನೆಹರು ಕಾಲದಲ್ಲಿ ಬುದ್ಧನ 2500 ನೇ ಜಯಂತಿಯನ್ನು ಆಚರಿಸಿದಾಗ ಬುದ್ಧನು ದೆಹಲಿಗೆ ಹೋದಾಗ ಏನಾಯಿತು ಎಂಬ ಒಂದು ಕಥೆ ಇಲ್ಲಿದೆ.

ಆ ಕಥೆಯಲ್ಲಿ ಭಾರತದ ಸ್ವತಂತ್ರವಾದರೂ ನನಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಒಬ್ಬನು ಯೋಚಿಸಿದನು. ಕ್ಲರ್ಕ್ ಆದ್ಮೇಲೆ ಬೈಗುಳ ಪ್ರೂಫ್ ಆಗಿರಬೇಕು! ಆ ಸಮಯದಲ್ಲಿ ಬುದ್ಧನು ಅಲ್ಲಿ ಪ್ರತ್ಯಕ್ಷ ಆದನು. ತನ್ನ ಮೂರ್ತಿಯ ಹಾಗೆ ಅವನು ಸುಂದರನಾಗಿ ಇದ್ದಾನೆಯೋ ಇಲ್ಲವೋ ನೋಡಬೇಕು ಎಂದು ಜನರು ಅಂದರು. ಬುದ್ಧನು ಬಡ ಕಾರಕೂನರ ವಸತಿಗೆ ಬಂದನು. ರಾಷ್ಟ್ರಪತಿ ಭವನಕ್ಕೆ ಬರಲು ಅವನು ನಿರಾಕರಿಸಿದನು- ಏಕೆಂದರೆ ರಾಷ್ಟ್ರಪತಿ ಭವನಕ್ಕೆ ಸಾಮಾನ್ಯ ಜನರು ಬರಲಾರದು ಅಲ್ಲವೇ? ಎಂದನು. 

ತನಗೆ ತಾನೇ ಶರಣಾಗು. ತನಗಿಂತ ಬೇರೆಯವರಿಗೆ ಶರಣು ಎನ್ನ ಬೇಡ. ಅಪ್ಪ ದೀಪೋ ಭವ - ಬುದ್ಧ. ವೈರದಿಂದ ವೈರಿಯನ್ನು ಶಾಂತಗೊಳಿಸುವುದು ಎಂದಿಗೂ ಸಾಧ್ಯವಿಲ್ಲ ವೈರಿಯನ್ನು ಪ್ರೇಮದಿಂದ ಗೆಲ್ಲಬಹುದೆಂದು ಸನಾತನರ ಮತ- ಧಮ್ಮಪದ ಜ್ಞಾನವೆಂದರೆ ಮುಂದೇನು ಮಾಡಬೇಕೆಂಬ ತಿಳಿವಳಿಕೆ; ಶೀಲವೆಂದರೆ ಹಾಗೆ ಮಾಡುವಿಕೆ. —ಡೆವಿಡ್‌ ಸ್ಟಾರ್‌ ಜಾರ್ಡನ್‌. ಶೀಲವು ದುರ್ವ್ಯಸನದಿಂದ ದೂರ ಉಳಿಯುವುದರಲ್ಲಿಲ್ಲ; ಅದನ್ನು ಮನಸಾ  ಬಯಸದಿರುವುದರಲ್ಲಿದೆ.—ಬರ್ನಾಡ್‌ಶಾ,

ಎಡಿಸನ್ನರು ತಟಕ್ಕನೆ ಎದ್ದುನಿಂತು ಹೇಳಿದರು: ಮಾತಾಡುವ ಯಂತ್ರವನ್ನು ದೇವರು ತಯಾರಿಸಿದ್ದಾನೆ. ಆದರೆ ಬೇಡದಿದ್ದಾಗ ನಿಲ್ಲಿಸಲು ಬರುವ ಮಾತಾಡುವ ಯಂತ್ರವನ್ನು ಮಾತ್ರ ನಾನು ಮೊಟ್ಟಮೊದಲಾಗಿ ಶೋಧಿಸಿದ್ದೇನೆ.''

ತಂತಿಯ ಚಮತ್ಕಾರ- ಅದ್ಭುತ ರೋಮಾಂಚಕಾರಿ ಪತ್ತೇದಾರಿ ಕಾದಂಬರಿಗಳ ಲೇಖಕರಾದ ಸರ್‌ ಆರ್ಥರ ಕಾನನ್‌ ಡಾಯಲ್‌ ಒಮ್ಮೆ ತಮ್ಮ ಹನ್ನೆರಡು ಜನ ಸ್ನೇಹಿತರಿಗೆ ಒಂದು ತಂತಿ ಕಳುಹಿದರು, ಈ ಹನ್ನೆರಡು ಜನರೂ ತಮ್ಮ ಊರಿನಲ್ಲಿ ಪ್ರಾಮಾಣಿಕತೆ ಮತ್ತು ಫನತೆಗಳಿಗಾಗಿ ಹೆಸರಾಂತವರಾಗಿದ್ದರು. ಸರ್‌ ಆರ್ಥರರು ಅವರಿಗೆ ಕಳಿಸಿದ ತಂತಿಯಲ್ಲಿ “ ರಹಸ್ಯ ಸ್ಪೋಟವಾಗಿದೆ. ಕೂಡಲೆ ಕಣ್ಮರೆಯಾಗಿರಿ" ಎಂದು ಬರೆದಿದ್ದರು. ತಂತಿ ಮುಟ್ಟದ ೨೪ ತಾಸುಗಳಲ್ಲಿ ಈ ಹನ್ನೆರಡು ಜನರಲ್ಲಿ ಪ್ರತಿ ಯೊಬ್ಬರೂ ಮಾಯವಾಗಿದ್ದರು ಎಂದು ಹೇಳುತ್ತಾರೆ.

ಮಾತಾಡುವ ಕುದುರೆ- “ ರಾತ್ರಿಯೆಲ್ಲ ರಾಧಾ ಎಂದು ಕನವರಿಸುತ್ತಿದ್ದಿರಲ್ಲ, ಯಾರ್ರೀ ಆಕೆ?” ಮುದ್ದಿನ ಮಡದಿ ಕೇಳಿದಳು- ಮುಂಜಾನೆ ಉಪಾಹಾರಕ್ಕೆ ಕುಳಿತಾಗ.  ರಾಧಾ....? ರಾಧಾ....??' ಮೆಲಕು ಹಾಕಿದ ಪತಿರಾಜ. “ ಓ ಅದೊ, ನಿನ್ನೆ ಎರಡು ರೂಪಾಯಿ ಕಟ್ಟಿದ್ದೆನಲ್ಲ, ಆ ಜೂಜಿನ ಕುದುರೆಯ ಮೇಲೆ, ಅದೇ ಚಿನ್ನಾ.''

ಮಧ್ಯಾಹ್ನ ಉಟಕ್ಕೆ ಕುಳಿತಾಗ ಹೆಂಡತಿ ಅಂದಳು: “ ನಿಮ್ಮ ಆ ಕುದುರೆ ನಿಮ್ಮೊಡನೆ ಫೋನಿನಲ್ಲಿ ಮಾತನಾಡಬೇಕೂಂತ ಎರಡು ಸಲ ಪ್ರಯತ್ನಿಸಿತಲ್ರಿ.''

ಹೊಲಗಳೂ ಮರಗಳೂ ನನಗೇನನ್ನೂ ಕಲಿಸುವುದಿಲ್ಲ; ಆದರೆ ನಗರದ ಜನರು ಕಲಿಸುತ್ತಾರೆ. -ಸುಕ್ರಾತ

Rating
Average: 4 (2 votes)