ಪುಸ್ತಕನಿಧಿ - 23. 'ಕಲ್ಯಾಣ' ಡೈಜೆಸ್ಟ್‌ನ 1961 ರ ಡಿಸೆಂಬರ್‌ನ ಸಂಚಿಕೆ
'ಕಸ್ತೂರಿ' ಹೆಸರಿನ ಮಾಸಪತ್ರಿಕೆ ನಿಮಗೆ ಗೊತ್ತಿರಬೇಕು . ಅದು ಇಂಗ್ಲೀಷಿನ ರೀಡರ್ಸ್ ಡೈಜೆಸ್ಟ್ ಮಾದರಿಯ ಕನ್ನಡ ಡೈಜೆಸ್ಟ್ ಆಗಿದೆ.
ಇದೇ ತರಹದ ಕೆಲವು ಡೈಜೆಸ್ಟ್‌ಗಳು ಕನ್ನಡದಲ್ಲಿ ಹಿಂದೆ ಇದ್ದವು. ಅವುಗಳಲ್ಲಿ ಈ 'ಕಲ್ಯಾಣ' ಒಂದು. ಇದರ ಕೆಲವು ಸಂಚಿಕೆಗಳು ಹಳೆಯ ಸಂಪದಿಗ ಗೆಳೆಯ ಶ್ರೀ ಓಂ ಶಿವಪ್ರಕಾಶರಿಂದಾಗಿ archive.org ಎಂಬ ತಾಣದಲ್ಲಿ ಸಿಕ್ಕವು . (ಅಲ್ಲಿ 'ಕಲ್ಯಾಣ ಡೈಜೆಸ್ಟ್' ಎಂದು ಕನ್ನಡದಲ್ಲಿ ಟೈಪ್ ಮಾಡಿ ಹುಡುಕುವುದರಿಂದ ಸಿಗುತ್ತವೆ. )
ಈ ಡೈಜೆಸ್ಟ್ ಇಂದಿನ ವಿಜಯಪುರ (ಹಿಂದಿನ ವಿಜಾಪುರ) ನಗರದಿಂದ ಹೊರಡುತ್ತಿತ್ತು. ಶ್ರೀ ಆರ್. ಬಿ. ಕುಲಕರ್ಣಿಯವರ ಒಡೆತನದ ಈ ಪತ್ರಿಕೆಯನ್ನು ಸುಪ್ರಸಿದ್ಧ ಸಾಹಿತಿ 'ಸತ್ಯಕಾಮ'ರು ಸಂಪಾದಿಸುತ್ತಿದ್ದರು.
ಈ ಪತ್ರಿಕೆಯ ಡಿಸೆಂಬರ್ 1961 ರ ಸಂಚಿಕೆಯನ್ನ ನಾನು ಇತ್ತೀಚೆಗೆ ಓದಿದೆ. ಅದರಲ್ಲಿ ನಾ ಕಂಡ ವಿಶೇಷವನ್ನು ನಿಮಗೆ ಇಲ್ಲಿ ತಿಳಿಸುವೆ.
1) ಶ್ರೀ ಶಂಕರಾಚಾರ್ಯರು ಪ್ರತಿ ದಿನವೂ ಸ್ನಾನದಿಂದ ಬರುವಾಗ ಒಬ್ಬ ಶೂದ್ರ ಶಿಷ್ಯನ ಹೆಗಲ ಮೇಲೆ ಕೈಯಿಟ್ಟುಕೊಂಡು ಬರುತ್ತಿದ್ದರು. ಕೆಲವರು ಇದನ್ನು ಆಕ್ಷೇಪಿಸಿದರು. ಆಗ ಶಂಕರರು ಹೇಳಿದರು - 'ಶರೀರ ದ ಮಲಕಳೆದುಕೊಂಡು ಶುದ್ಧ ನಾಗಿ ಮಠಕ್ಕೆ ಬಂದು ಪೂಜೆಮಾಡಲು ಮನಸ್ಸು ಶುದ್ಧ ವಾಗಿ ಮಡಿಯಾಗ ಬೇಡ ವೆ ? ನಾವು ಉಚ್ಚ ಜಾತಿಯವರೆಂಬುದೂ ಮನಸ್ಸಿನ ಮೈಲಿಗೆ, ಅದನ್ನು ಕಳೆದುಕೊಳ್ಳಲು ಶೂದ್ರ ಶಿಷ್ಯನ ಹೆಗಲು ಅನುಸರಿಸಿ ಬರುವೆ. '
2) ಸಾಮ್ರಾಟ್ ಅಶೋಕನು ಕಳಿಂಗದ ಮೇಲೆ ದಾಳಿ ಮಾಡಿದನು. ಆಗ ಕಳಿಂಗಕ್ಕೆ ಪುಟ್ಟ ಬಾಲಕಿ ಅಮಿತಾ ರಾಣಿಯಾಗಿದ್ದಳು. ಅವಳು ಅಶೋಕನನ್ನು ಕೇಳಿದಳು - " ಯಾಕೆ ನಮ್ಮ ಜನರನ್ನು ಹೆದರಿಸುತ್ತಿದ್ದೀಯ ? ಕೊಲ್ಲುತ್ತಿದ್ದೀಯ ? ಯಾಕೆ ನಿನಗೆ ತಿನ್ನಲು ಅನ್ನ ಕಡಿಮೆಯಾಗಿದೆಯೇ ? ದುಡ್ಡು ಬೇಕಾಗಿದೆಯೇ ? ಆಡಲು ಆಟಿಕೆಗಳಿಲ್ಲವೇ? "
ಆಗ ಅವನ ಮನಃಪರಿವರ್ತನೆ ಆಯಿತು.
3) ಹಿರಿಯ ಸುಪ್ರಸಿದ್ಧ ಸಾಹಿತಿ ಶ್ರೀರಂಗ ಅವರ ಒಂದು ವಿಡಂಬನೆ ಇಲ್ಲಿದೆ. ಸ್ವಾತಂತ್ರ್ಯದ ಕುರಿತು. ಶ್ರೀರಂಗರ ಅನೇಕ ಪುಸ್ತಕಗಳು archive.org ಯಲ್ಲಿ ಇರುವವಾದರೂ ನಾನು ಇನ್ನೂವರೆಗೆ ಓದಿಲ್ಲ. ಈ ಲೇಖನವು ಅವರ ಶೈಲಿಯ ಪರಿಚಯವನ್ನು ನನಗೆ ಮಾಡಿ ಕೊಟ್ಟಿತು. ಮೂರು ಪುಟಗಳ ಈ ಲೇಖನವನ್ನು ಪೂರ್ತಿ ಓದಿಯೇ ಸವಿಯಬೇಕು.
ಈ ಪುಸ್ತಕವು https://archive.org/details/unset0000unse_o3v0 ಈ ಕೊಂಡಿಯಲ್ಲಿ ಸಿಗುತ್ತದೆ. ಅದನ್ನು ಅಲ್ಲೇ ಓದಬಹುದು. ಅಥವಾ pdf ರೂಪದಲ್ಲಿ ನಿಮ್ಮ ಕಂಪ್ಯೂಟರ್ / ಲ್ಯಾಪ್‌ಟಾಪ್ / ಮೊಬೈಲಿಗೆ ಇಳಿಸಿಕೊಂಡು ನಂತರ ಓದಬಹುದು.