ಪುಸ್ತಕ ನಿಧಿ: 'ದೈವತಂತ್ರ' ಕಾದಂಬರಿ

ಪುಸ್ತಕ ನಿಧಿ: 'ದೈವತಂತ್ರ' ಕಾದಂಬರಿ

 ಈ ಪುಟ್ಟ ಪುಸ್ತಕವು ವಿಜಯನಗರದ ಕಾಲದಲ್ಲಿ ಇದ್ದ , ಶ್ರೀವೈಷ್ಣವ (ವಿಶಿಷ್ಟಾದ್ವೈತ ) ಮತ್ತು ಶೈವ (ಅದ್ವೈತ /ಸ್ಮಾರ್ತ ) ಮತಾನುಯಾಯಿಗಳ ನಡುವಿನ ಸಂಘರ್ಷದ ಕತೆ. ಜಗತ್ತು ದೈವತಂತ್ರ ದಿಂದ ನಡೆದಿರುವದೇ ಹೊರತು ಮನುಷ್ಯರ ತಂತ್ರಗಳಿಂದ ಅಲ್ಲ ಎಂಬ ನೀತಿಯನ್ನು ನಿರೂಪಿಸುತ್ತದೆ.

 

ಅಲ್ಲಿನ ಕೆಲವು ವಾಕ್ಯಗಳು ಇಲ್ಲಿವೆ :-

ಸ್ವಮತವು ಶ್ರೇಷ್ಠ ಎಂದು ತಿಳಿಯುವುದು ಪ್ರತಿಯೊಬ್ಬರಿಗೂ ಅಗತ್ಯವಾದರೂ ಅನ್ಯಮತದ ದೂಷಣೆ ಕೂಡದು.

ಬೇಕೆಂದರೆ ಬುದ್ಧಿಯಿಂದ ಅನ್ಯಮತದ ಖಂಡನೆ ಮಾಡಬಹುದು. ಆದರೆ ವ್ಯಕ್ತಿದ್ವೇಷ ಕೂಡದು. ಅನ್ಯಮತದವರ ಪೀಡನೆ ಕೂಡದು.

 

ನಾನೇ ಶ್ರೇಷ್ಠ ಎಂದು ಯಾರೂ ಅಹಂಭಾವ ತಾಳಬಾರದು. ಹಾಗು ಮತವೈಷಮ್ಯ ಬುದ್ಧಿಯನ್ನು ತಂದುಕೊಳ್ಳಬಾರದು. ಯಾವದೊಂದು ಮತಸಿದ್ಧಾಂತಗಳ ವಿಷಯವಾಗಿ ಶಾಸ್ತ್ರದೃಷ್ಟಿಯಿಂದ ಬೇಕಾದಷ್ಟು ಚರ್ಚೆ ಮಾಡಬಹುದು. ತಮ್ಮಲ್ಲಿ ಪ್ರತಿಭಾಶಕ್ತಿಯಿದ್ದ ಮೇರೆಗೆ ತಮಗೆ ಸರಿ ತೋರದ ಮತಸಿದ್ಧಾಂತಗಳ ಮೇಲೆ ಯನ್ನು ಸಿದ್ಧ ಮಾಡಿ ಅನ್ಯಮತಗಳ ಸಿದ್ದಾಂತಗಳನ್ನು ಖಂಡಿಸಬಹುದು. ವಾದವಿವಾದವು ಶಬ್ದದಲ್ಲಿ ಮುಗಿಯಬೇಕಲ್ಲದೆ ವ್ಯವಹಾರದಲ್ಲಿ ದ್ವೇಷ ರೂಪದಿಂದ ಪ್ರಕಟವಾಗಬಾರದು, ಹಾಗು ತಾವು ನಂಬಿದ ಮತವನ್ನು  ಸ್ವೀಕರಿಸಬೇಕೆಂದು ಅನ್ಯರಿಗೆ ಒತ್ತಾಯ ಮಾಡಕೂಡದು. ತಾತಾಚಾರ್ಯರು ದೊಡ್ಡ ವಿದ್ಯಾವಂತರಾದರೂ ಈ ವಿಷಯದಲ್ಲಿ ತಪ್ಪಿದರು. ತಮ್ಮ ಮತವನ್ನೇ ಸರ್ವತ್ರದಲ್ಲಿ ಹರಡಬೇಕೆಂದು ಅಸುರೀ ಲಾಲಸೆಯನ್ನು ತಾಳಿ ಶೈವರ ದ್ವೇಷ ಮಾಡಲಾರಂಭಿಸಿದರು. ಅದೈತಸಿದ್ಧಾಂತಗಳು ತಮ್ಮ ಮನಸ್ಸಿಗೆ ಬಾರದಿದ್ದ ಮಾತ್ರಕ್ಕೆ ಅವುಗಳನ್ನು ನಿಂದಿಸಬೇಕೆಂದೂ ಅವರಿಗೆ ದುಶ್ಯಬ್ದಗಳನ್ನಾಡಬೇಕೆಂದೂ ಎಲ್ಲಿ ಹೇಳಿರುವದು? ಮತ್ಸರವು ಆಸುರೀಲಕ್ಷಣವು. ಬ್ರಾಹ್ಮಣರಾದವರು ಈ ಮತ್ಸರಪಿಶಾಚಿಯೊಡನೆ ವ್ಯವಹರಿಸಬಾರದು.

ಒಂದು ಸಾಂಪ್ರದಾಯದವನನ್ನು ಮತ್ತೊಂದು ಸಾಂಪ್ರದಾಯಕ್ಕೆ ಬಲವಂತದಿಂದ  ಎಳೆದು ಕೊಂಡರೆ ಅವನಲ್ಲಿ ವ್ಯಭಿಚಾರ ದೋಷವನ್ನುಂಟು ಮಾಡಿದಂತಾಗುವದು. ಯಾವನು ಯಾವ ಹೆಸರಿನಿಂದ ಈಶ್ವರೋಪಾಸನೆ ಮಾಡು ವನೋ ಅದೇ ಹೆಸರಿನಲ್ಲಿಯೇ ಅವನ ಪ್ರೇಮವು ಬೆಳೆಯುವಂತೆ ಅವನಿಗೆ ಪ್ರೋತ್ಸಾಹ ಕೊಡಬೇಕು, ಜಗತ್ತಿಗೆ ಈಶ್ವರನೊಬ್ಬನೇ ಎಂದು ತಿಳಿಯಲಾರದ ಅಜ್ಞಾನಿಗಳು ಮಾತ್ರ ಈ ಹೆಸರು ಶ್ರೇಷ್ಠ ಈ ಹೆಸರು ಕನಿಷ್ಠವೆಂದು ಬಡಿದಾಡುವರು

 

ಬೇರೆಯವರ ಸಿದ್ಧಾಂತಗಳಲ್ಲಿ ತಪ್ಪು ಹೇಳಬಹುದು. ಆದರೆ ದ್ವೇಷವು ಕೂಡದು.

 

ರಾಜನು ಅವರನ್ನು ಕರೆದು ಹೀಗೆ ಹೇಳಿದನು - ಇನ್ನು ಮುಂದೆ ನೀವು ನನ್ನ ಆಸ್ಥಾನದಲ್ಲಿ ಇರಬಾರದು. ಯಾಕಂದರೆ ನಿಮ್ಮ ಸ್ವಭಾವವು ನನ್ನ ಮನಸ್ಸಿಗೆ ಬಂದಿರುವುದಿಲ್ಲ.

 

(ಇಲ್ಲಿ ತನ್ನ ಮಾತಿಗೆ ಕಾರಣವನ್ನು ಅವರಿಗೆ ತಿಳಿಸುವನು. ಇದು ಅಪೇಕ್ಷಿತ ನಡತೆ ಎಂದು ಇನ್ನೊಂದು ಪುಸ್ತಕದಲ್ಲಿ ಓದಿದ್ದೆ)

 

 

 

Rating
Average: 4 (1 vote)