ಪುಸ್ತಕ ನಿಧಿ - 17. 'ಚಂದ್ರಗುಪ್ತ ಚಕ್ರವರ್ತಿ'
ಈ ಪುಸ್ತಕವು archive.org ತಾಣದಲ್ಲಿದೆ. ಇದರ ಕೊಂಡಿಯನ್ನು pustaka.sanchaya.net ತಾಣದಲ್ಲಿ 'ಚಂದ್ರಗುಪ್ತ ಚಕ್ರವರ್ತಿ' ಎಂದು ಹುಡುಕುವ ಮೂಲಕ ಪಡೆಯಬಹುದು.
ನಾನು ಈ ಪುಸ್ತಕವನ್ನು ಸ್ವಲ್ಪ ವಿವರವಾಗಿ, ಸ್ವಲ್ಪ ಹಾರಿಸಿ ಹಾರಿಸಿ ಓದಿದೆ.
ಇದು ತೆಲುಗಿನ ಪುಸ್ತಕವೊಂದರ ಅನುವಾದ. ಇದು ಕತೆ ಅಥವಾ ಕಾದಂಬರಿ ಏನಲ್ಲ, ಆದರೆ ಇತಿಹಾಸ ದೃಷ್ಟಿಯಿಂದ 'ಚಂದ್ರಗುಪ್ತ ಚಕ್ರವರ್ತಿ'ಯ ಕುರಿತು ಇದೆ. ಚಂದ್ರಗುಪ್ತ ,ಚಾಣಕ್ಯರ ಬಗ್ಗೆ ನಾವು ಓದಿರುತ್ತೇವೆ , ತಿಳಿದಿರುತ್ತೇವೆ. ಆದರೆ ಆ ಸಂಗತಿಗಳ ಮೂಲ ಏನು? ಎಂಬುದನ್ನು ಈ ಪುಸ್ತಕ ಚರ್ಚಿಸುತ್ತದೆ. ಐತಿಹಾಸಿಕ ದಾಖಲೆಗಳನ್ನು ಮುಂದಿಡುತ್ತದೆ.
ಚಂದ್ರಗುಪ್ತ ,ಚಾಣಕ್ಯರ ಬಗ್ಗೆ ನಮ್ಮ ಪುರಾಣಗಳಲ್ಲಿ ಉಲ್ಲೇಖ ಇದೆ. ಅನೇಕ ಕಾವ್ಯ, ಕಾದಂಬರಿ, ನಾಟಕಗಳಿವೆ. ಐತಿಹಾಸಿಕ ಮೂಲಗಳಿವೆ. ಆ ಐತಿಹಾಸಿಕ ಗ್ರೀಕ್ ಮೂಲಗಳ ಬಗ್ಗೆ, ಅಲ್ಲಿರುವ ಮಾಹಿತಿ ಇಲ್ಲಿದೆ. ತುಂಬ ಮಹತ್ವದ ಪುಸ್ತಕ.
ಸರಣಿ
Rating