ಪೆಟ್ರೊಮ್ಯಾಕ್ಸ್
ಪೆಟ್ರೊಮ್ಯಾಕ್ಸ್ ದೀಪಗಳನ್ನು ಯಾರಾದರೂ ಉರಿಸುತ್ತಿದ್ದರೆ ಅದನ್ನು ನೋಡುವುದೇ ಒಂದು ಸೊಗಸು. ನೀವು ಅದನ್ನು ಅನುಭವಿಸಿದ್ದೀರಾ?
ಸಭೆ ಸಮಾರಂಭಗಳ ಮುನ್ನಾದಿನ ಕರೆಂಟ್ ಹೋಗಿ ಬಿಟ್ಟರೆ ನೆರೆದವರಲ್ಲಿ ಅನುಭವಿಯೊಬ್ಬರು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ನಾವೆಲ್ಲಾ ಚಿಕ್ಕವರಿದ್ದಾಗ ಸುತ್ತ ಹೋಗಿ ಕುಳಿತುಕೊಳ್ಳುತ್ತಿದ್ದೆವು. ಕೆಟ್ಟು ತುಕ್ಕು ಹಿಡಿದು ಹೋದ ಪೆಟ್ರೋಮ್ಯಾಕ್ಸ್ಗ್ ಗಳನ್ನು ತಕ್ಕಮಟ್ಟಿಗೆ ಕ್ವಿಕ್ ಫಿಕ್ಸ್ ಮಾಡಿ, ಝಗಮಗಿಸಿ ಉರಿಯುವಂತೆ ಮಾಡುವುದು ಬಹುಶ: ಅಷ್ಟು ಸುಲಭವಲ್ಲ. ’ಬಹುಶ:’ ಏಕೆಂದರೆ, ನಾನಂತೂ ಇಂದಿನವರೆಗೆ ಅದನ್ನು ಟ್ರೈ ಮಾಡಿದವನಲ್ಲ. ನಿಮಗೆ ಈ ಕಲೆ ಸಿದ್ಧಿಯಾಗಿದೆಯೆ?
ನನ್ನ ಅಣ್ಣನ ಉಪನಯನದ ಮುನ್ನಾದಿನ, ನನ್ನ ಸೋದರ ಮಾವ ದೀಪ ಉರಿಸುತ್ತಿರಬೇಕಾದರೆ, ನಾನು ಮತ್ತು ನನ್ನಣ್ಣ ಸುತ್ತ ಕುಳಿತು ನೋಡುತ್ತಿರುವುದೊಂದು ಫೊಟೊ ಚೆನ್ನಾಗಿ ಬಂದಿತ್ತು..
ಇತ್ತೀಚೆಗೆ ನನಗೆ ಅಂಥ ಫೊಟೊಗಳನ್ನು ತೆಗೆಯುವ ಅವಕಾಶ ಸಿಕ್ಕಿತ್ತು. ಅವನ್ನು ಇಲ್ಲಿ ನೋಡಿ:
http://flickr.com/photos/vasanthkaje/337312996/in/set-72157594568932077/
http://flickr.com/photos/vasanthkaje/337312997/in/set-72157594568932077/
LPG ಲ್ಯಾಂಪ್ಗಳ ಯುಗದಲ್ಲಿ ಕ್ಲಾಸಿಕಲ್ ಪೆಟ್ರೋಮ್ಯಾಕ್ಸ್ ಗಳು ನಿಧಾನವಾಗಿ ತೆರೆಮರೆಗೆ ಸೇರುತ್ತಿವೆ..
ಮತ್ತೆ ಸಿಗೋಣ
ವಸಂತ್ ಕಜೆ.