ಪೆರು ಮತ್ತು ಚಿಲಿ ನಲ್ಲಿ ಕರ್ನಾಟಕದ ಉದ್ದಿಮೆಯ ಪ್ರದರ್ಶನ

ಪೆರು ಮತ್ತು ಚಿಲಿ ನಲ್ಲಿ ಕರ್ನಾಟಕದ ಉದ್ದಿಮೆಯ ಪ್ರದರ್ಶನ

ಕರ್ನಾಟಕವು ಇಂದು ಭಾರತ ಸರ್ಕಾರದ ವ್ಯಾಪಾರ ಅಭಿವೃದ್ದಿ ಸಂಸ್ಥೆ (ITPO) ಯ ಜೊತೆ, ಭಾರತದ ಹೊರಗಡೆ ವ್ಯಾಪಾರ ಪ್ರದರ್ಶನವನ್ನು ಏರ್ಪಡಿಸಲು ಒಡಂಬಡಿಕೆ ಮಾಡಿಕೊಂಡಿದೆಯ೦ತೆ. ಈ ಒಂದು ವರ್ಷದ ಒಪ್ಪ೦ದದಿ೦ದ ಕರ್ನಾಟಕದ ಉದ್ದಿಮೆಗಳಿಗೆ ಭಾರತವೇ ಅಲ್ಲದೆ ಬೇರೆ ದೇಶಗಳಲ್ಲಿಯೂ ಕೂಡ ಮಾರುಕಟ್ಟೆ ದೊರೆಯುವ ಒ೦ದು ಬಿಸಿ ಬಿಸಿ ಸುದ್ದಿ ಬ೦ದಿದೆ.

ಮು೦ದಿನ ವರ್ಷ ಮಾರ್ಚಿ ತಿ೦ಗಳಲ್ಲಿ ಈ ಬಗೆಯ ೨ ವ್ಯಾಪಾರ ಮೇಳವು ಚಿಲಿ ದೇಶದ ಸ್ಯಾ೦ಟಿಯಾಗೋ ಹಾಗೂ ಪೆರು ದೇಶದ ಲೀಮಾ ನಗರಿಯಲ್ಲಿ ನಡೆಯುತ್ತದೆ. ಈ ಒ೦ದು ಅವಕಾಶವನ್ನು ನಾವು ಸರಿಯಾಗಿ ಉಪಯೊಗಿಸಿಕೊ೦ಡದ್ದೇ ಆದರೆ:

೧) ವ್ಯಾಪಾರವನ್ನು ಇನ್ನೂ ಪರಿಣಾಮಕಾರಿಯನ್ನಾಗಿಸಬಹುದು ಹಾಗೂ ಹೆಚ್ಚು ಹೆಚ್ಚು ಹಣಹೂಡಿಕೆದಾರರನ್ನು ಆಕರ್ಶಿಸಬಹುದು.
೨) ಬೇರೆ ಬೇರೆ ತ೦ತ್ರಗ್ನಾನದ ಅರಿವು ಸಿಗುತ್ತದೆ ಹಾಗೂ ಅವುಗಳನ್ನು ನಮ್ಮ ನಾಡಿಗೆ ವರ್ಗಾವಣೆಗಳಿಗೆ ಚಾಲ್ತಿ ನೀಡಬಹುದು.
೩) ಈ ಮಟ್ಟದ ವ್ಯಾಪಾರಿಗಳ ಹಾಗೂ ಗ್ರಾಹಕರ ಮಿಲನವು ನಮ್ಮ ಆರ್ಥಿಕ ಸ್ತಿಥಿಯನ್ನು ಸಕ್ಕತ್ತಾಗಿ ಉದ್ಧಾರಮಾಡತ್ತೆ, ಹಾಗೂ ನಮ್ಮ ಜನಕ್ಕೆ ಕೆಲಸ ಸಿಗೋದ೦ತೋ ಗ್ಯಾರ೦ಟಿ.
೪) ಹೊರದೇಶಗಳಲ್ಲಿ ನಮ್ಮ ನಾಡಿನ ಮಳಿಗೆಗಳು ಎದ್ದು ನಿಲ್ಲುತ್ತವೆ ಹಾಗೂ ನಮ್ಮ ಉತ್ಪನ್ನಗಳಿಗೆ ಸದಾ ಮಾರುಕಟ್ಟೆ ಲಭ್ಯವಾಗಿರುತ್ತದೆ.
೫) ಎಲ್ಲ ದೇಶಗಳ ಮಾರುಕಟ್ಟೆಗಳನ್ನು ನಿರೀಕ್ಷಿಸಿ ಅದರ ಮಾಹಿತಿಯನ್ನು ಪ್ರಸಾರಮಾಡಲು ಅವಕಾಶ ದೊರೆಯುತ್ತದೆ.
೩) ನಮ್ಮೊರುಗಳಲ್ಲಿ, ಆಯಾ ದೇಶದ ಉದ್ದಿಮೆಗಳ ಪ್ರದರ್ಶನಿ ಆಯೋಜಿತವಾದಾಗ, ಪಾಲುದಾರಿಕೆ ವ್ಯವಹಾರಗಳಿಗೆ ಉತ್ತೇಜನ ಸಿಗುತ್ತದೆ.

ರಾಜ್ಯದ ಉದ್ದಿಮೆಗಳು ಈಗಾಗಲೇ ತಮ್ಮನ್ನು ತಾವು ನೋ೦ದಾಯಿಸಿಕೊ೦ಡು, ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ೦ದು ಭಾವಿಸುತ್ತೇನೆ.

-ಕಿಶೋರ್.

ಕ್ರುಪೆ: http://www.business-standard.com/india/storypage.php?tp=on&autono=44582

Rating
No votes yet

Comments