ಪೈರಿನ ಮೇಲಿನ ನೀರು - ನೀರ ಮೇಲಿನ ಗುಳ್ಳೆ

ಪೈರಿನ ಮೇಲಿನ ನೀರು - ನೀರ ಮೇಲಿನ ಗುಳ್ಳೆ

 
ನನ್ನ ಕಳೆದ ಬ್ಲಾಗ್ ಪೋಸ್ಟ್ ಗೆ ಪ್ರತಿಕ್ರಿಯಿಸಿ ಶೈಲಾ ಸ್ವಾಮಿಯವರು, ನಾನು ತೆಗೆದ ನೀರಿನ ಚಿತ್ರಗಳೆಲ್ಲಿ ಎಂದು ಕೇಳಿದ್ದರು...
ಒಂದೆರಡು ವಾರಗಳ ಹಿಂದೆ ಕಾಸರಗೋಡು ಜಿಲ್ಲೆಯಲ್ಲಿ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೆ. ಅವರು ಇನ್ನೂ ಭತ್ತದ ಗದ್ದೆ ಇಟ್ಟುಕೊಂಡಿದ್ದಾರೆ! ನಿಮಗೆ ದಕ್ಷಿಣಕನ್ನಡ ಜಿಲ್ಲೆ ಅಪರಿಚಿತವಾಗಿದ್ದರೆ ತಿಳಿದುಕೊಳ್ಳಿ - ಭತ್ತ ಸ್ವತ: ಬೆಳೆದು ಸ್ವಂತ ಅನ್ನ ಉಣ್ಣುವವರು ಇಲ್ಲಿ ನಿಜವಾದ ಅಲ್ಪ ಸಂಖ್ಯಾತರು (ಅವರಿಗೆ ಸ್ವಲ್ಪ ಹುಚ್ಚು ಎನ್ನುವಷ್ಟರಮಟ್ಟಿಗೆ).
ಎಂಭತ್ತರ ದಶಕ, ಭತ್ತದಿಂದ ಅಡಿಕೆಗೆ paradigm shift ತುರಾತುರಿಯಲ್ಲಿ ನಡೆಯುತ್ತಿದ್ದ ಕಾಲ. ಆಹಾರದ ಬೆಳೆ ಹೋಯಿತು ಎಂದು ಬಹಳಷ್ಟು ಹಳಬರು ಆಗ ದು:ಖಿಸಿರಬಹುದು. ನಾನೂ ಹೌದಲ್ಲ ಎಂದು (ಸ್ವಲ್ಪ ಆಮೇಲೆ ದೊಡ್ದವನಾದ ಮೇಲೆ) ಯೋಚಿಸುತ್ತಿದ್ದೆ. ತೊಂಭತ್ತರಲ್ಲಿ ಅಡಿಕೆಗೆ ಒಳ್ಳೆಯ ಬೆಲೆ ಬಂದು ಕಾಡು-ಗುಡ್ಡಗಳನ್ನು JCB ಯಲ್ಲಿ ಬಗೆದು ತೋಟಗಳ ನಿರ್ಮಾಣ ಭರದಿಂದ ನಡೆಯಲು ಶುರುವಾಯಿತು. ನನ್ನ ದೃಷ್ಟಿಕೋನದಿಂದ ಇದು ಎರಡನೆಯ ಸ್ಥಿತ್ಯಂತರ. ನಾವು ಇವೆರಡರಲ್ಲಿಯೂ ಪ್ರವಾಹದೊಂದಿಗೆ ಈಜಿದ್ದೇವೆ. ಅದರ ಬಗ್ಗೆ ಮನಸ್ಸಿನಲ್ಲಿ/ಮಾತಿನಲ್ಲಿ ದು:ಖಿಸಿಯೂ ಇದ್ದೇವೆ (ಕ್ರಿಯೆಯಲ್ಲಿ ಅಲ್ಲ!).
ಈಗ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಮಂಗಳೂರು ಆಸುಪಾಸಿನ ಸ್ಥಳಗಳಿಗೆ ಬಂಗಾರದ ಬೆಲೆ ಬಂದಿದೆ. ಪೇಟೆಗೆ ಹತ್ತಿರದ ಅಡಿಕೆ ತೋಟಗಳಲ್ಲಿ ಮರಗಳು ತಲೆ ಕಳೆದುಕೊಂಡು ಬರಿಯ ಬೆಂಕಿಕಡ್ಡಿಗಳಂತೆ ನಿಂತಿವೆ. ಅಳಿದುಳಿದ ಗದ್ದೆಗಳಿಗೆ earth mover ಗಳು ಭರದಿಂದ ಮಣ್ಣು ನೂಕುತ್ತಿವೆ. ನಮ್ಮ ಮನೆಗೆ ಮೂರೇ ಕಿಲೋಮೀಟರ್ ನಷ್ಟು ಹತ್ತಿರಕ್ಕೆ SEZ ಬಂದು (ಬಹುಶ:) ೬೦೦ ಎಕರೆಗಳಷ್ಟು ಭೂಮಿ ತೆರವುಗೊಳಿಸಿದೆ. ಕೈಯಲ್ಲಿ ಲಕ್ಷಗಟ್ಟಲೆ hard cash ಹಿಡಿದು ಕೃಷಿಕರು ಇದನ್ನು ಮಾಡುವುದೇನು ಎಂದು ಯೋಚಿಸುತ್ತಿದ್ದಾರೆ..!
ನಾನು, ಕೆಲವು ವರ್ಷಗಳಲ್ಲಿ ಅಸ್ತಂಗತವಾಗಬಹುದಾದ ಗದ್ದೆಯಲ್ಲಿ ಬಹಳ ಕಾಲದಿಂದ ತೆಗೆಯಬೇಕೆಂದುಕೊಂಡಿದ್ದ ಕೆಲವು ಚಿತ್ರಗಳನ್ನು ತೆಗೆದೆ..
ವಂದನೆಗಳು,
 ವಸಂತ್ ಕಜೆ.
Rating
No votes yet

Comments