ಪೈ ಸಂಖ್ಯೆ (ಕನ್ನಡದಲ್ಲಿ) ನೆನಪಿಟ್ಟುಕೊಳ್ಳುವುದು ಹೇಗೆ ?

ಪೈ ಸಂಖ್ಯೆ (ಕನ್ನಡದಲ್ಲಿ) ನೆನಪಿಟ್ಟುಕೊಳ್ಳುವುದು ಹೇಗೆ ?

ಶ್ರೀ ಎ.ಪಿ ರಾಧಾಕೃಷ್ಣರು “ಈ ದಿನ ಪೈಗಳ ದಿನ” ಎಂಬ ಒಳ್ಳೆಯ ಲೇಖನ ಬರೆದಿದ್ದಾರೆ. (http://sampada.net/article/17904)

ಅದರಲ್ಲಿ ಅವರು ಪೈಯ ಸಂಖ್ಯೆಯನ್ನು (3.14159265358979323846264…..) ನೆನಪಿಡುವುದಕ್ಕೆ ಒಂದು ಇಂಗ್ಲೀಷ್ ವಾಕ್ಯ ಉದಾಹರಿಸಿದ್ದಾರೆ.

How I want a drink, alcoholic of course, after the heavy lectures involving
3 1 4 1 5 9 2 6 5 3 5 8 9
quantum mechanics. All of thy geometry, Herr Planck, is fairly hard...:
7 9 3 2 3 8 4 6 2 6 4

ಈ ಸೂತ್ರವನ್ನು ಕನ್ನಡದಲ್ಲಿ ಯಾಕೆ ಮಾಡಬಾರದು ಅನ್ನಿಸಿತು. ಅದು ಹೀಗಿದೆ

ರಾಮನು ಆ ಸೀತಾಮಾತೆ, ಈ ಹನುಮಂತನ ವಾನರಸೇನೆಯೊಡಗೂಡಿ ಅಂದು
3 1 4 1 5 9 2

ಲಂಕಾಧಿಪತಿಯ ಅರಮನೆಯ ಬಾಗಿಲು ಮುರಿಯುವಾಗ, ರಾಕ್ಷಸಸೇನಾಪತಿಯು
6 5 3 5 8

ಕಪಿಸಮೂಹದಲ್ಲಿರುವ ಮುದಿಮರ್ಕಟಗಳ , ಅಜಗರದೋಪಾದಿಯಲ್ಲಿ ಸುತ್ತಿದ್ದ , ಬಾಲ
9 7 9 3 2

ಮೆಟ್ಟುವ ಕಿಡಿಗೇಡಿತನವನ್ನು ಮಾಡಿದನು. ಅತಿಕೋಪಗೊಂಡ ಅವು ಕಂಡಕಂಡದ್ದೆಲ್ಲಾ
3 8 4 6 2 6
ಮುರಿದವು....
4

ನೀವೂ ಓದಿ, ತಪ್ಪಿದ್ದರೆ ತಿದ್ದಿ, ಬದಲಾಯಿಸಿ , ಉತ್ತಮಪಡಿಸುವುದಕ್ಕೆ ಸ್ವಾಗತ

ನಾರಾಯಣ

Rating
No votes yet