ಪ್ಯಾಂಟು ಪುರಾಣ
ಸಂಪದದಲ್ಲಿ ಬರೆದು ತುಂಬ ದಿನವಾಯ್ತು, ಇಂದು ಬೆಳಿಗ್ಗೆ ನಡೆದ ಪ್ರಸಂಗವನನ್ನೇ ಬರೆಯೋಣ ಎಂದು ನಿರ್ಧರಿಸಿದೆ.
ರಜಕ್ಕೆ ಮನೆಗೆ ಬಂದಿದ್ದೆ, ಇಂದು, ಯಾವುದೋ ಮದುವೆಗೆ ಹೋಗಬೇಕಿತ್ತು. ನಾನು ಸಿದ್ಧನಾಗಿದ್ದೆ. ಆಮ್ಮ, ಯಾವುದೋ ಕಾಲದ ಪ್ಯಾಂಟು ಹಿಡಿದು, " ಏನೋ, ಇದೇನೂ ಹಳೆಯದಾಗಿಲ್ಲ, ಇನ್ನೂ ಹೊಸದರಂತೆ ಹೊಳಿತಾ ಇದೆ, ನೀನು ಹಾಕಲ್ಲ ಅಷ್ಟೆ, ಈಗ ಹಾಕದೇ ಹೋದರೆ, ಮುಂದೆ ವೇಷ್ಟ್ ಆಗತ್ತೆ ಅಷ್ಟೇ" ಅಂದಳು. ನಾನು, "ಅಮ್ಮಾ, ಅದರ ಜೇಬು ಚೆನ್ನಾಗಿಲ್ಲ, ಈಗಲೋ ಆಗಲೋ ಹರಿದು ಹೋಗೋ ಹಾಗಿದೆ. ಒಳ್ಳೆ ಬಟ್ಟೆಯಿಂದ ಪ್ಯಾಂಟು ಮಾಡಿದ್ದಾರೆ, ತೆಳು ಬಟ್ಟೆಯಿಂದ ಜೇಬು ಮಾಡಿದ್ದಾರೆ" ಅಂದೆ.
ಅಮ್ಮ, "ಜೇಬು ಚನ್ನಾಗಿಲ್ದೇದ್ರೆ ಏನಂತೆ? ಜೇಬೇನು ಕಾಣತ್ತಾ?" ಅಂದಳು
ನಾನು, "ಪ್ಯಾಂಟಿಗೆ ಜೇಬೇ ಮುಖ್ಯ ನಿಂಗೆ ಗೊತ್ತಿಲ್ಲ........ ದೊಡ್ಡವರು ಏನು ಹೇಳಿದಾರೆ ಗೊತ್ತಾ?
'ಜೇಬಿಲ್ಲದ ಪ್ಯಾಂಟ್ ಯಾವುದಯ್ಯ ?
ಜೇಬಿರಬೇಕು ಸಕಲ ಪ್ಯಾಂಟು-ಚಡ್ಡಿಗಳಲ್ಲಿ
ಜೇಬೇ ಪ್ಯಾಂಟಿನ ಮೂಲವಯ್ಯ' :D ;)
ಎಷ್ಟೋ ಜನ ಪ್ಯಾಂಟ್ ಹಾಕೋದೇ, ಜೇಬಿನಲ್ಲಿ ಏನೇನೋ ತುಂಬಿಕೊಳ್ಳಲು." ಎಂದು ಆಗಷ್ಟೇ ತಯಾರಿಸಿದ ರೀಲನ್ನು ಉರುಳಿಸಿದೆ . ಅಮ್ಮ ನಕ್ಕು ನಕ್ಕು ಸುಸ್ತು. :D :D
Comments
ಉ: ಪ್ಯಾಂಟು ಪುರಾಣ
In reply to ಉ: ಪ್ಯಾಂಟು ಪುರಾಣ by gopaljsr
ಉ: ಪ್ಯಾಂಟು ಪುರಾಣ
In reply to ಉ: ಪ್ಯಾಂಟು ಪುರಾಣ by ಭರತ. H. M
ಉ: ಪ್ಯಾಂಟು ಪುರಾಣ