ಪ್ರಗತಿಯೆಂಬ ಮರೀಚಿಕೆಯ ಬೆನ್ನೇರಿ

ಪ್ರಗತಿಯೆಂಬ ಮರೀಚಿಕೆಯ ಬೆನ್ನೇರಿ

 

             

                 ಭಾರತ ಹಳ್ಳಿಗಳ ದೇಶ.ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಹೀಗೆಂದವರು ಗಾಂಧೀಜಿ. ಆದರೀಗ ದೇಶದ ಪ್ರಗತಿ ಕನ್ನಡಿಯೊಳಗಿನ ಗಂಟಾಗಿದೆ.ನಮ್ಮ ಸರ್ಕಾರಗಳು ದೇಶ ಪ್ರಗತಿ ಪಥದಲ್ಲಿದೆ ಎನ್ನುತ್ತಿವೆ . ಅವರ ಪ್ರಕಾರ ಪ್ರಗತಿಯೆಂದರೆ ಕೆಲವು ಕೆಲವು ಶ್ರೀಮಂತರ  ಉದ್ದಾರ ಎಂದರ್ಥ.ಇಡೀ ದೇಶವೇ  ಸಂಪತ್ತು ಉಳ್ಳವರ ಹಿಡಿತದಲ್ಲಿದೆ. ಅವರ ಹಿಡಿತದಲ್ಲಿ ದೇಶದ ಆರ್ಥಿಕ ಸ್ಥಿತಿ ನಲುಗುತ್ತಿದೆ.ಪ್ರಕೃತಿ ವಿಕೋಪ,ಆರ್ಥಿಕ ಸಂಕಷ್ಟಗಳು,ಹಸಿವು ಬಡ ರೈತನಬೆನ್ನು ಹತ್ತಿ ಅವನನ್ನು ಆತ್ಮಹತ್ಯೆಯತ್ತ ಕೊಂಡೊಯ್ಯುತ್ತಿವೆ

.

                 ರಾಜಕೀಯ ವ್ಯಕ್ತಿಗಳು ಮೊಸಳೆ ಕಣ್ಣೀರು ಸುರಿಸುತ್ತಾ ನೊಂದವರಿಗೆ ಸಾಂತ್ವನ ಹೇಳುವ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಜೇಬಿಗಿಳಿಸುತ್ತಾರೆ. ತಮ್ಮ ಅಮೂಲ್ಯ ವೇಳೆಯನ್ನು ಪರಸ್ಪರ ಕಾದಾಡುತ್ತಾ ಕಳೆಯುತ್ತಾರೆ.ಹಳ್ಳಿಗಳು ನಗರವಾಗುತ್ತಿವೆ.ಹಣದ ಹೊಳೆ ಹಳ್ಳಿ ರೈತರನ್ನು ನಗರಗಳತ್ತ ಆಕರ್ಷಿಸುತ್ತಿವೆ. ಆದುನಿಕತೆಯ ಹೆಸರಿನಲ್ಲಿ ನೈತಿಕ ಮೌಲ್ಯಗಳು ನಾಶವಾಗುತ್ತಿವೆ.ಬಡತನ,ನಿರುದ್ಯೋಗ ಆಹಾರ ನಿರ್ಮಲ್ಯ, ವಸತಿ  ಸಮಸ್ಯೆ ನಗರದಲ್ಲಿ ಹೆಚ್ಚಾಗುತ್ತಿವೆ.ಇದಲ್ಲದೆ ಆತಂಕವಾದ,ಕಳ್ಳತನ ಸುಲಿಗೆ, ಭ್ರಷ್ಟತನ ದೇಶದಲ್ಲಿ ನೆಲೆಯೂರಿ ನಿಂತಿವೆ.


                    ಇವೆಲ್ಲವುಗಳ ನಿರ್ಮೂಲನೆಗಾಗಿ ಸರ್ಕಾರ ಹೊಸ ವ್ಯವಸ್ಥೆಗಳತ್ತ ಕಣ್ಣುಹಾಯಿಸಬೇಕಾಗಿದೆ.ಶೋಷಣೆ ಮುಕ್ತ,ಲೋಕತಾಂತ್ರಿಕ ಸಮಾಜದತ್ತ ಕ್ರಾಂತಿಕಾರಿ ಯೋಜನೆಗಳು ರೂಪಿತವಾಗಬೇಕು, ಬುದ್ದಿಜೀವಿಗಳು ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು.ಯುವಜನರರನ್ನು ಸಾಮಾಜಿಕ ಚಿಂತನೆಗಳತ್ತ ಪ್ರೆರೆಪಿಸಬೇಕಾಗಿದೆ.     

 

 

 ಕಮಲ ಬೆಲಗೂರ್ 

Rating
No votes yet

Comments