ಪ್ರಜಾಪ್ರಭುತ್ವ(೧) - ಸ್ವಲ್ಪವೂ ತಡವಿಲ್ಲ
ಪ್ರಜಾಪ್ರಭುತ್ವ(೧) - ಸ್ವಲ್ಪವೂ ತಡವಿಲ್ಲ
ಈಗ ನಮ್ಮನಾಳುತ್ತಿರುವ ಪ್ರಭುಗಳನ್ನು ಗಮನಿಸಿ, ನಾವು ಎಲ್ಲದಕ್ಕು ಅವರನ್ನು ತಡ ಎಂದು ಆಕ್ಷೇಪಣೆ ಮಾಡುತ್ತಿರುತ್ತೇವೆ. ೨-ಗಿ ತರಂಗಾಂತರದ ಹಗರಣದ ಆರೋಪಿಗಳಾದ ಎ.ರಾಜರನ್ನು ಅಧಿಕಾರದಿಂದ ಕೆಳಗಿಳಿಸಿ ಸೆರೆಗೆ ಹಾಕಲು ಸರ್ಕಾರ ಸಾಕಷ್ಟು ಪ್ರಯಾಸ ಪಡಬೇಕಾಯಿತು. ಕಡೆಗೆ ಅವರೇನು ಮಾಡಲು ಸಾದ್ಯವಿಲ್ಲ ಬಿಡಿ ಸುಪ್ರೀಮ್ ಕೋರ್ಟ್ ಆದೇಶದ ತನಿಖೆ ಪ್ರಾರಂಬವಾದಗ ರಾಜ ತಿಹಾರ್ ಜೈಲು ಸೇರಿದರು, ಅವರ ಹಿಂದೆಯೆ ಅವರದೆ ರಾಜ್ಯದ ಮುಖ್ಯಮಂತ್ರಿಗಳ ಮುದ್ದಿನ ಮಗಳು, ಅಮಾಯಕ ಮುಖದ ಕನ್ನಿಮೋಳೀ ಯವರು ಸೆರೆಮನೆ ಸೇರಿದರು. ಈ ಎಲ್ಲ ಭ್ರಷ್ಟಾಚಾರ ಹಗರಣಗಳಲ್ಲಿ ಸರ್ಕಾರ ಸಾಕಷ್ಟು ನಿದಾನ ತಂತ್ರವನ್ನು ಅನುಸರಿಸಿ ಟೀಕೆಗೆ ಒಳಗಾಯಿತು.
ಆದರೆ ನಂತರ ಗಮನಿಸಿ ಯೋಗ ಗುರು ಶ್ರೀ ರಾಮ್ ದೇವ್ ಭ್ರಷ್ಟಾಚಾರವನ್ನೆದುರಿಸಿ ತಮ್ಮ ಚಳುವಳಿ ಉಪವಾಸ ಮುಷ್ಕರ ಪ್ರಾರಂಬಿಸಿದಾಗ , ಸರ್ಕಾರ ತಕ್ಷಣ ಎಚ್ಚೆರಗೊಂಡಿತು, ಮೊದಲು ನಿದಾನಗತಿಯಲ್ಲಿ ಸಾಗಿ ಚೀಮಾರಿ ಹಾಕಿಸಿಕೊಂಡಿದ್ದ ಅದು ಮಿಂಚಿನಂತ ಕಾರ್ಯಪ್ರವೃತ್ತವಾಗಿ ಅವರನ್ನು ಅವರ ಅನುಯಾಯಿಗಳನ್ನು ರಾಮಲೀಲ ಮೈದಾನದಿಂದ ಓಡಿಸಿ , ದೇಶವನ್ನು ದೊಡ್ಡ ವಿಪ್ಪತ್ತಿನಿಂದ ರಕ್ಷಿಸಿತು. ದೇಶದ ಪ್ರಧಾನಿಗಳು ತಮ್ಮ ಮಿಂಚಿನ ಕಾರ್ಯಾಚರಣೆಗೆ ತಮ್ಮ ಬೆನ್ನು ತಾವೆ ತಟ್ಟಿ ಸಂತೋಷಬಿದ್ದರು.
ಈಗ ಹೇಳಿ ನಮ್ಮ ಸರ್ಕಾರವನ್ನು ನಾವು ನಿದಾನಗತಿ ಎಂದು ನಿಂದಿಸಲು ಸಾದ್ಯವೆ. ಪ್ರಧಾನಿಗಳು ಕ್ರಿಯಾಶೀಲರಲ್ಲ ಯಾವಾಗಲು ಜಡವಾಗಿರುತ್ತಾರೆ ಎಂದು ಟೀಕೆ ಮಾಡುವವರು ಈಗ ಏನ್ನನ್ನುತಾರಂತೆ ?
Comments
ಉ: ಪ್ರಜಾಪ್ರಭುತ್ವ(೧) - ಸ್ವಲ್ಪವೂ ತಡವಿಲ್ಲ