ಪ್ರಜಾಪ್ರಭುತ್ವ(೨)- ನಾಯಿಮರಿ ಕಳ್ಳಬಂದರೇನು ಮಾಡುವೆ?
ಪ್ರಜಾಪ್ರಭುತ್ವ(೨)- ನಾಯಿಮರಿ ಕಳ್ಳಬಂದರೇನು ಮಾಡುವೆ?
ನಾಯಿಮರಿ ನಾಯಿಮರಿ
ತಿಂಡಿಬೇಕೆ ?
ತಿಂಡಿಬೇಕು ತೀರ್ಥಬೇಕು ಎಲ್ಲ ಬೇಕೆ?
.....
ನಾಯಿಮರಿ ಕಳ್ಳ ಬಂದರೇನು ಮಾಡುವೆ?
------ಕೂಗಿ ಆಡುವೆ
ನಾಯಿಮರಿ ಪದ್ಯವನ್ನು ಹಿಂದೆ ಒಂದನೆ ತರಗತಿಯಲ್ಲಿ ಕಲಿಸಲಾಗುತ್ತಿತ್ತು. ನಮ್ಮ ಮೇಷ್ಟ್ರು ಅಭಿನಯಿಸುತ್ತ ಹೇಳಿದ್ದರು, ನಾಯಿಮರಿ ಸಾಕಿದರೆ ಅದು ಕಳ್ಳಬಂದರೆ ಹಿಡಿಯುತ್ತೆ, ನಾಯಿ ತುಂಬಾ ನಂಬಿಕಸ್ಥ ಪ್ರಾಣಿ... ಅಂತೆ ಏನೇನೊ. ನಿಜ ನಾನು ಅದನ್ನು ನಿಜ ಅಂತ ನಂಬಿ ಬಿಟ್ಟೆ. ನಮ್ಮ ಮನಸಿನಲ್ಲೆಲ್ಲ ಅದೆ ನಾಯಿ ಅಂದರೆ ಕಳ್ಳನನ್ನು ಹಿಡಿದು ಹಾಕುತ್ತೆ.
ಸ್ವಲ್ಪ ದೊಡ್ಡವನಾದ ನಂತರ ಅನ್ನಿಸಿತು, ಸರಿ ಕಳ್ಳನೆ ನಾಯಿಯನ್ನು ಸಾಕಿದ್ದಾಗ ಏನು? ಆಗ ಅದು ಖಂಡೀತ ಪೋಲಿಸ ಬಂದರು ಅವನ ಕಾಲು ಕಚ್ಚುತ್ತೆ. ಅಲ್ಲಿಗೆ ನಾಯಿ ಅಂದರೆ ಕಳ್ಳನನ್ನು ಹಿಡಿಯುತ್ತೆ ಅನ್ನುವ ನಮ್ಮ ನಂಬಿಕೆ ಸುಳ್ಳಾಯ್ತು.
ನಿಜ ಅಂದರೆ ಅದು ತನ್ನನ್ನು ಸಾಕಿದ ಯಜಮಾನನ ಕಡೆ ನಿಂತು, ಎದುರು ಯಾರೆ ಇದ್ದರು ಬೊಗಳುತ್ತೆ, ಕಚ್ಚುತ್ತೆ. ತನ್ನ ಯಜಮಾನನನ್ನು ರಕ್ಷಿಸಲು ಅನ್ನುವುದು ನಿಜ. ಈ ಹೋಲಿಕೆ ಇಲ್ಲಿಗೆ ನಿಲ್ಲಿಸಿ ಮುಂದೆ ನೋಡೋಣ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ರಕ್ಷಣೆಗೋಸ್ಕರ ಅಂತ ಇರುವುದು ಪೋಲಿಸ್ ಪಡೆ. ಆದರೆ ಇದು ಎಷ್ಟು ಸರಿಯಾಗಿ ಪ್ರಜೆಗಳ ರಕ್ಷಣೆ ಮಾಡುತ್ತಿದೆ. ಚಿಂತಿಸಿ. ನಿಜವಾಗಿ ಯೋಚಿಸಿದಾಗ ಪೋಲಿಸ್ ಪಡೆ ಆಳುವ ಪ್ರಭುತ್ವವನ್ನು ರಕ್ಷಿಸುವ ಕೆಲಸ ಮಾಡುತ್ತಿರುತ್ತೆ. ಬಹಳಷ್ಟು ಸಾರಿ ಪ್ರಜೆಗಳಿಗೆ ವಿರುದ್ದವಾಗಿಯೆ!.
ಮತ್ತು ಒಂದು ವಿಚಿತ್ರವೆಂದರೆ , ಅದಕ್ಕೆ ತನ್ನನ್ನು ಯಾರು ಆಳುತ್ತಿದ್ದಾರೆ ಅಂತ ಯೋಚಿಸುವ ಸ್ವಾತಂತ್ರವಿಲ್ಲ. ಈಗ ಆಳುತ್ತಿರುವ ಪಕ್ಷದ ಮಾತನ್ನು ಕೇಳಿ ಯಾರಿಗೆ ಹೊಡೆ ಎಂದರೆ ಹೊಡೆಯುತ್ತದೆ. ಮುಂದೆ ಬೇರೆ ಪಕ್ಷ ಬಂದಾಗ ಈಗ ಆಳುತ್ತಿರುವ ಪಕ್ಷದವರನ್ನು ಹೊಡೆ ಎಂದರೆ ಯೋಚನೆಯು ಮಾಡದೆ ಹೊಡೆಯುತ್ತದೆ ಅದೆ ಪೋಲಿಸ್ ಪಡೆ.
ಅಲ್ಲಿಗೆ ಪೋಲಿಸ್ ಪಡೆಯು ಅಷ್ಟೆ ತನ್ನನ್ನು ಯಾರು ಆಳುತ್ತಿರುವರೊ ಅವರನ್ನು ಕಾಯಬೇಕು ಅವನು ಕಳ್ಳನಾಗಲಿ, ಪೋಲಿಸನಾಗಲಿ ಅಷ್ಟೆ ಅಲ್ಲವೆ.
ದೆಹಲಿಯಲ್ಲಿ ಯೋಗಗುರು ರಾಮದೇವರ ಅನುಯಾಯಿಗಳನ್ನು ಹೊಡೆದು ಓಡಿಸಿದ ಪೋಲಿಸರ ಬಗ್ಗೆ ಚಿಂತನೆ ಅಷ್ಟೆ. ಅವರು ಒಂದು ಆಯುಧವಷ್ಟೆ ಉಪಯೋಗಿಸುವವರು ಅಧಿಕಾರದಲ್ಲಿರುವವರು.
Comments
ಉ: ಪ್ರಜಾಪ್ರಭುತ್ವ(೨)- ನಾಯಿಮರಿ ಕಳ್ಳಬಂದರೇನು ಮಾಡುವೆ?
In reply to ಉ: ಪ್ರಜಾಪ್ರಭುತ್ವ(೨)- ನಾಯಿಮರಿ ಕಳ್ಳಬಂದರೇನು ಮಾಡುವೆ? by kavinagaraj
ಉ: ಪ್ರಜಾಪ್ರಭುತ್ವ(೨)- ನಾಯಿಮರಿ ಕಳ್ಳಬಂದರೇನು ಮಾಡುವೆ?