ಪ್ರಜಾವಾಣಿಯಲಿ 'ಲ'ದ ಒತ್ತಕ್ಷರಗಳಿಗೆ ಭಾರೀ ಕೊರತೆ?

ಪ್ರಜಾವಾಣಿಯಲಿ 'ಲ'ದ ಒತ್ತಕ್ಷರಗಳಿಗೆ ಭಾರೀ ಕೊರತೆ?

ಪ್ರಜಾವಾಣಿಯ ಮುದ್ರಿತ ಆವೃತ್ತಿಯಲ್ಲಿ 'ಲ' ದ ಒತ್ತಕ್ಷರವು ತಲೆಬರಹಗಳಲ್ಲಿ ಕಾಣುವುದೇ ಇಲ್ಲ.  ಗಮನಿಸಿದ್ದೀರಾ?   'ನಗರದಲ್ಲಿ'  'ನಗರದಲಿ' ಆಗಿ ಕೆಲವೆಡೆ ಕಾವ್ಯಮಯವಾಗಿ ಕಂಡರೆ   'ಇಲ್ಲಿ'   'ಇಲಿ'ಯಾಗಿಬಿಟ್ಟಿದೆ! ಹೀಗೆ ಎಷ್ಟೋ ಆಭಾಸಗಳು. ಸುಮಾರು ೨-೩ ವಾರಗಳಿಂದ ಇದು ನಡೆದಿದೆ.   ಪ್ರಜಾವಾಣಿ ಪತ್ರಿಕೆಯವರು ತಮ್ಮ ಪತ್ರಿಕೆಯನ್ನು ಓದುವುದಿರಲಿ, ತಿರುವಿಯೂ  ಹಾಕುವುದಿಲ್ಲವೆನೋ ? ಅವರಿಗೆ ನಾನು ಈಮೇಲ್ ಒಂದನ್ನು ಕಳಿಸಿದ್ದೇನೆ.
 

Rating
No votes yet