ಪ್ರತೀಕಾರ

ಪ್ರತೀಕಾರ

ನದಿ ತೀರದಲ್ಲೀಗ..
ಕಲ್ಲುಗಳೇ ಇಲ್ಲ..
ನನ್ನವಳ ನಿರೀಕ್ಷೆಯಲ್ಲಿ,
ನಾನೇ.. ನೀರುಪಾಲು ಮಾಡಿದೆನಲ್ಲ..

ಎದೆಯಲ್ಲೀಗ.. ಅವಳು,
ಅವಳಾಗೇ... ಉಳಿದಿಲ್ಲಾ..
ಮನದ ಕೊಳದಲ್ಲೀಗ..
ಬರೀ.. ಕಲ್ಲುಗಳೇ ತುಂಬಿವೆಯಲ್ಲ..

ಅಪರಾಧಿ ಭಾವ,
ಬೆಂಬಿಡದೆ ಕಾಡುತ್ತಿದೆಯಲ್ಲಾ.!!
ಅವಳ ನಿರೀಕ್ಷೆಯಲ್ಲೆಸೆದ ..
ಆ ಕಲ್ಗಳೇ...ಹೀಗೆ ತಿರುಗಿ
ಹಗೆ ಸಾಧಿಸುತ್ತಿವೆಯೇ ??..ತಿಳಿಯುತ್ತಿಲ್ಲವಲ್ಲಾ..

Rating
No votes yet