ಪ್ರಭಾವಗಳು
ನಮ್ಮ ಕಾಲವನ್ನು (ಮತ್ತು ಅದರ ಸುತ್ತುಮುತ್ತ) ಬಿಟ್ಟು ಇತರ ಭೂತ ಭವಿಶ್ಯದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಲು ಎಷ್ಟು ಕಷ್ಟ ಅಲ್ವೇ.. ಹಿಂದಿನ ಕಾಲದ ಬಗ್ಗೆ ಈಗ ಪ್ರಚಲಿತದಲ್ಲಿರುವ ಯೋಚನಾಲಹರಿಗಳಿಗಿಂತ ಭಿನ್ನವಾಗಿ ಯೋಚಿಸಲು ಕಷ್ಟವೇ. ಆ ದಿನಗಳ ಬಗ್ಗೆ ಯಾವುದೇ ತರಹದ ನಿಖರ ಮಾಹಿತಿಗಳಿರದೇ ಇರುವುವೇ ಇದಕ್ಕೆ ಕಾರಣವಿರಬಹುದು.
ಈಗ, ಕನ್ನಡದಲ್ಲಿ ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು ಹಾಡು ನೋಡಿ, ಅಥವ ರಾಜ್ ಕುಮಾರರ ಆಂಗ್ಲ ಹಾಡಿದೆಯಲ್ಲ, (if you come today, its too early, if you come tommorrow, its too late :) ) ಅದರಲ್ಲಿ ಆಗಿನ ಕಾಲದ ರಾಕ್ ಅಂಡ್ ರೋಲ್ ಪ್ರಭಾವಗಳಿರುವುದು ಸ್ಪಷ್ಟವಾಗಿದೆ. ತೊಂಬತ್ತರ ದಶಕದ ಕನ್ನಡ/ಹಿಂದಿಯ ಜನಪ್ರಿಯ ಹಾಡುಗಳಲ್ಲಿ ಆಗಿನ ಕಾಲದ ಪಾಶ್ಚಾತ್ಯ ಸಂಗೀತದ ಪ್ರಭಾವಗಳು ಎದ್ದು ಕಾಣುತ್ತವೆ. ಹಾಗೆಯೇ ಇಂದಿನ ಪಾಶ್ಚಾತ್ಯ ಸಂಗೀತದಲ್ಲಿ (ಮುಖ್ಯವಾಗಿ hip hop) oriental ಮತ್ತು ಭಾರತೀಯ ಸಂಗೀತದ ಪ್ರಭಾವಗಳು ಅಲ್ಲಿ ಇಲ್ಲಿ ನೋಡುತ್ತಿರುತ್ತೇವೆ. ಆದರೆ ಇದೇ ಯೋಚನಾಸರಣಿಯನ್ನು ಹತ್ತೊಂಬತ್ತನೆಯ ಶತಮಾನದ ಶಾಸ್ತ್ರೀಯ ಸಂಗೀತಕ್ಕೆ ಅಂದಿನ ಕಾಲದ jazz ಮತ್ತು westren classic ಸಂಗೀತಕ್ಕೆ ವಿಸ್ತರಿಸಿದರೆ, ಇದೇ ತೀಯರಿಯ ಕಾರಣಗೆರೆಗಳು ಮಂದವಾಗುತ್ತವೆ.
ಇನ್ನೂ ಹಿಂದಕ್ಕೆ ಹೋಗೋಣ. ದ್ವೈತದ ದೇವ-ದಾಸ ಸಂಬಂಧ ಆಗಿನ ಕಾಲದಲ್ಲಿ ಹೊಸದಾಗಿ ಬಂದ ಕ್ರಿಶ್ಚಿಯನ್/ಮುಸ್ಲಿಮ್ ಮತಗಳ ಪ್ರಭಾವವೇಕಾಗಿರಬಾರದು.. ನಾವು ಈಗಿನ ಕಾಲದಲ್ಲಿ ರಿಕಿ ಮಾರ್ಟಿನ್, ಬ್ಯಾಕ್ ಸ್ಟ್ರೀಟ್ ಬಾಯ್ಸ್ ಗಳಂತಹ ಸಂಗೀತಕಾರರನ್ನು ಹೇಗೆ fashionable ಅಂತ ಪರಿಗಣಿಸುತ್ತೇವೋ ಹಾಗೆಯೇ ಆಗಿನ ಕಾಲಕ್ಕೆ ಪಾದ್ರಿಗಳು ಸಂತರೂ ಆಗಿರಬಹುದಲ್ಲವೇ... (ಯಾಕೆ ಅಂದ್ರೆ ಇವರುಗಳು ಹೊಸ ಬದಲಾವಣೆಗಳನ್ನು ನಮ್ಮ ದೇಶಕ್ಕೆ ಇದೇ ತರಹ ಅಮದು ಮಾಡಿದವರು ತಾನೆ) ಅಂದರೆ, ಆಗಿನ ಕಾಲದ ನಮ್ಮ ದಾಸ ಪರಂಪರೆ, ಭಕ್ತಿ ಪಂಥ ಇವುಗಳು western imitations ಆಗಿರಬಹುದೇ? imitation ಅಲ್ಲದಿದ್ದರೂ ಪ್ರಭಾವಗಳಾದರೂ ಇದ್ದೀತು ಅಲ್ಲವೇ.. ನಮ್ಮ ದಾಸಪಂಥದ ಪ್ರಮುಖ ಹೆಸರುಗಳು ಆಧ್ಯಾತ್ಮಿಕ ಗುರುಗಳಲ್ಲದೇ ಜನಪ್ರಿಯ ಮಾಧ್ಯಮದಲ್ಲಿಯೂ ಬಹಳ ಹೆಸರು ಮಾಡಿದ್ದಾರು, ಇಂದಿನ ಪಾಶ್ಚಾತ್ಯ ಪ್ರಭಾವಿತ ಸಂಗೀತಗಾರರಂತೆ.. ಇದು ನಿಜವೋ ಸುಳ್ಳೋ?
ಪಾಶ್ಚಾತ್ಯಪ್ರಭಾವಿತ ಸಂಗೀತಗಾರರ ವಿರುದ್ಧ ಧೋರಣೆಯಂತೂ ನಮ್ಮಲ್ಲಿದ್ದೇ ಇದೆ. ಅಂದಿನ ಕಾಲದ ದಾಸಪ್ರಮುಖರಿಗೊದಗಿದ ತೊಂದರೆಗಳೂ ಇದೇ ತರಹದ್ದಾಗಿರಬಹುದಲ್ಲವೇ? ಇಂದು ದಾಸ್ಯಪಂಥವನ್ನು ಸಮಾಜದಲ್ಲಿ ಉನ್ನತಸ್ಥಾನ ಕೊಟ್ಟಮೇಲೆ, ಅವರಿಗೊದಗಿದ ತೊಂದರೆಗಳೆಂಥವು ಎಂಬುದನ್ನು ನಾವು ವಿಶ್ಲೇಷಿಸುತ್ತೇವೆ. ಆದರೆ ದಾಸ್ಯಪಂಥದ ಬೆಳವಣಿಗೆ ಆರೋಗ್ಯಕರವೋ ಅಲ್ಲವೋ ಎಂಬುದರಲ್ಲಿಯೆ ಭೇದ ಉಂಟಾದರೆ ಅವರಿಗೊದಗಿದ ತೊಂದರೆಗಳು ಕೇವಲ ಅಂದಿನ ಸಮಾಜದ ಕ್ಷುದ್ರ ಅಂಶಗಳಾಗದೆ, ಬದಲಾಗುತ್ತಿರುವ ಸಮಾಜವನ್ನು ಉಳಿಸಿಕೊಳ್ಳಲು ಮಾಡಲ್ಪಟ್ಟ ಪ್ರಯತ್ನಗಳು ಅಂತಲೂ ಕರೆಯಬಹುದೇ?
Comments
ದಾಸಪಂಥ
In reply to ದಾಸಪಂಥ by tvsrinivas41
ಕ್ಷಮಿಸಿ
ಅನಿಸಿತು
In reply to ಅನಿಸಿತು by sinchanabhat
ಸಮಾಜ ಹೇಗೆ