ಪ್ರಮಾಣಿಕತೆ ಮೆರೆದ ನಾಯಿ........
೧೬/೧/೨೦೧೦
ಪ್ರಮಾಣಿಕತೆ ಮೆರೆದ ನಾಯಿ........
ಸೀತೆಗೆ ಸ್ವಲ್ಪ Low ಬಿ. ಪಿ.ಇತ್ತು. ಒಂದು ದಿನ ಎಂದಿನತೆ,ನಸುಕಿನಲ್ಲಿ ಜಾಗಿಂಗ್ ಮಾಡಲು ಹೋದಳು. ಸ್ವಲ್ಪ ದೂರ ಸಾಗಿದ ಮೇಲೆ, ಅವಳಿಗೆ ತಲೆ ಸುತ್ತಿದಂತಾಗಿ ನೆಲಕ್ಕೆ ಬಿದ್ದುಬಿಟ್ಟಳು. ಹಿಂದೆ ಅನೇಕ ಜನರು ಬೆಳಗಿನ ವಿಹಾರಕ್ಕಾಗಿ ಹೋಗುತ್ತಿದ್ದರು. ಅವರಲ್ಲಿ ಒಬ್ಬಳಾದ ಉಷಳ ಅತ್ಯಂತ ಪ್ರೀತಿಯ ನಾಯಿ
(ಬ್ರೌನಿ) ಬರುತ್ತಿತ್ತು. ಮರೆಯಲ್ಲಿ ಬಿದ್ದಿದ್ದ ಸೀತೆಯನ್ನು ತನ್ನ ಮೂಗಿನ ವಾಸನೆಯಿಂದಲೇ ಗುರುತಿಸಿ ಅಲ್ಲಿಯೇ ನಿಂತುಬಿಟ್ಟಿತು. ಮುಂದೆ ಹೋದ ಉಷಳಿಗೆ ತನ್ನ
ಬ್ರೌನಿ ಏಕೆ ಬರಲಿಲ್ಲವೆಂದು ತಿರುಗಿ ನೋಡಿದಳು.ಅದು ಮರದ ಹಿಂದೆ ಏನನ್ನೊ ಹುಡುಕುತ್ತಿರುವಂತೆ ತೋರಿತು. ಎಸ್ಟು ಸಾರಿ ಕರೆದರೂ ಬರಲಿಲ್ಲ. ಆದ್ದರಿಂದ ತಾನೇ ಓಡಿಬಂದು ನಾಯಿಯನ್ನು ಕರೆಯಲು ಬಂದಾಗ. ಬೇಶುದ್ದಿ ಬಿದ್ದಿದ್ದ ಸೀತೆಯನ್ನು ಕಂಡು, ತಕ್ಷಣವೇ ತುರ್ತುವಾಹನಕ್ಕೆ ಕರೆಮಾಡಿ, ಆಸ್ಪತ್ರೆಗೆ ಸೇರಿಸಿ,
ಡಾಕ್ಟರಿಗೆ ತೋರಿಸಿ.ಸರಿಯಾದ ಚಿಕಿತ್ಸೆಯನ್ನು ವೇಳೆಗೆ ಸರಿಯಾಗಿ ಕೊಡಿಸಿ,ತಮ್ಮ ಆದರ್ಶ ವನ್ನು ಮೆರೆದಿದ್ದಾರೆ. ಸ್ವಲ್ಪ ತಡ ಮಾಡಿದ್ದರೂ,ಸೀತೆಯು ಉಳಿಯುತ್ತಿರಲಿಲ್ಲವೆಂದು ಡಾಕ್ಟರರ ಮಾತಿನಿಂದ ತಿಳಿದಾಗ ಉಷೆಗೆ ತನ್ನ ನಂಬುಗೆಯ,ಪ್ರೀತಿಯ ಬ್ರೌನಿಯ ಮೇಲೆ ಇನ್ನೂ ಹೆಚ್ಚಿಗೆ ಪ್ರೀತಿ ಮಾಡುವಂತೆ
ಅನಿಸಿತು.ನಾಯಿಗೆ ಅನ್ನ ಹಾಕಿದ್ದು ಸಾರ್ಥಕವಾಯಿತೆಂದು ನಿಟ್ಟುಸಿರು ಬಿಟ್ಟಳು.
ಮರುದಿನ ಪೇಪರಿನಲ್ಲಿ ತನ್ನ ಬ್ರೌನಿಯ ಪ್ರಮಾಣಿಕತೆಯನ್ನು ಹೊಗಳಿ, ಅದಕ್ಕೆಬಹುಮಾನವನ್ನು ಪ್ರಕಟಿಸಿದ್ದನ್ನು ಕಂಡು ಉಷೆಗೆ ಅತೀವ ಸಂತೋಷ
ಉಂಟಾಗಿ,ತನ್ನ ಎಲ್ಲ ಸ್ನೇಹಿತೆಯರೊಂದಿಗೆ ಈ ಹರ್ಷವನ್ನು ಹಂಚಿಕೊಂಡಳು..
ಮನುಷ್ಯನಿಗಿಂತ ಪ್ರಾಣಿಗಳೇ ಎಷ್ಟೋಮೇಲು;;;;;;ಪ್ರಾಣಿಗಳು ಎಂದಿಗೂ ಮೋಸ ಮಾಡುವುದಿಲ್ಲ,.;;;;
ಅಂಬುಜ.ಜೋಶಿ.
Comments
ಉ: ಪ್ರಮಾಣಿಕತೆ ಮೆರೆದ ನಾಯಿ........