ಪ್ರಶ್ನೆ-ಉತ್ತರ
ನಾ ಸೋತಿದ್ದು..
ಮಲೆನಾಡ
ಸೊಬಗಿಗೆ,
ಮನಸೆಳೆದ
ಬೆಡಗಿಗೆ.
ತುಂಟಿಯ
ಚೇಷ್ಟೆಗೆ,
ಬೇಕೆನಿಸುವ
ಕುಚೇಷ್ಟೆಗೆ.
ನಾ ಸೋತಿದ್ದು..
ನನ್ನೆದೆ
ಮಿಡಿತಕೆ,
ನನ್ನದೇ
ತುಡಿತಕೆ.
ಒಲವಿನ
ಹಣತೆಗೆ
ಒಲುಮೆಯ
ಗೆಳತಿಗೆ.
ನಾ ಸೋತಿದ್ದು...
ಬಟ್ಟ ಕಂಗಳ
ಇಣುಕು
ನೋಟಕೆ,
ಮೋಡಿ
ಮಾತಿನ
ಮೃದುಮನಕೆ.
ನಾ ಸೋತಿದ್ದು...
ಭವಿಷ್ಯದ
ಬದುಕಿಗೆ,
ಭವಿತವ್ಯದ
ಬೆಳಕಿಗೆ.
ಬತ್ತದ
ಕನಸಿಗೆ,
ಭರವಸೆಯ
ಒಡಲಿಗೆ.
ನಾ ಸೋತಿದ್ದು.. .
ಹವಳದ
ಪ್ರೀತಿಗೆ,
ಅವಳದೇ
ರೀತಿಗೆ.
ಧನ್ಯತೆಯ
ಕುಸುಮಕೆ,
ಭವ್ಯತೆಯ
ಬೆಸುಗೆಗೆ.
ಏನೆಂದು
ಹೇಳಲಿ...
ನಮ್ಮ ಸಖ್ಯದ
ಆಖ್ಯಾನ.
ಅದು ಬತ್ತದ
ವ್ಯಾಖ್ಯಾನ.
Rating
Comments
ಉ: ಪ್ರಶ್ನೆ-ಉತ್ತರ
In reply to ಉ: ಪ್ರಶ್ನೆ-ಉತ್ತರ by ASHOKKUMAR
ಉ: ಪ್ರಶ್ನೆ-ಉತ್ತರ
ಉ: ಪ್ರಶ್ನೆ-ಉತ್ತರ