ಪ್ರಶ್ನೆ - ಉತ್ತರ
ಧಿಗ್ಗನೆ ತಿರುಗಿ ಕೇಳಿದ ಪ್ರಶ್ನೆಗೆ
ಉತ್ತರ ಏನು ನೀಡಲಿ
``ಬೇಗ ಬೇಗ'' ಎಂದು ಒತ್ತಾಯಿಸಿದರೆ
ಮತ್ತಿನ್ನೇನು ಹೇಳಲಿ
ಯಾಕೀ ಪ್ರಶ್ನೆ? ನಾನೇ
ಕೇಳಿದೆ ಮರು ಪ್ರಶ್ನೆ
ಪ್ರಶ್ನೆಗೆ ಪ್ರಶ್ನೆ ಅಲ್ಲ ಉತ್ತರ
ನನ್ನ ಪ್ರಶ್ನೆಗೇನು ಉತ್ತರ
ಮತ್ತದೇ ಪ್ರಶ್ನೆ
ನೀನು ಯಾರು?
ಅರೇ ನಾನು ನಾನೇ ಇನ್ಯಾರು ಆಗಲು ಸಾಧ್ಯ?
ಪ್ರಶ್ನೆ ಬೇಡ ಬೇಕು ಉತ್ತರ
ಕೊಟ್ಟಾಯಿತಲ್ಲ ಮತ್ತಿನ್ನೇಕೆ ಉತ್ತರ
ಅದು ಸರಿ ಈಗ ಹೇಳು
ನೀನು ಯಾರು?
ಕೇಳಿದ ಪ್ರಶ್ನೆಗೆ ಅವರು ಓಡಿಹೋದದ್ದೇ
ಉತ್ತರ
Rating
Comments
ಉ: ಪ್ರಶ್ನೆ - ಉತ್ತರ