ಪ್ರಸನ್ನರಿಗೆ ಧನ್ಯವಾದಗಳು

ಪ್ರಸನ್ನರಿಗೆ ಧನ್ಯವಾದಗಳು

ಸ್ನೇಹಿತರೆ, ಒಬ್ಬ ವ್ಯಕ್ತಿ ಇವತ್ತು ಬೆಳೆಯುತ್ತಾನೆಂದರೆ ಅಂತವರಿಗೆ ಕಾಲು ಎಳೆಯುವವರೆ ಹೆಚ್ಚು. ಅಂತಹುದರಲ್ಲಿ ನನ್ನಂತಹ ಸಣ್ಣ ಹಾಸ್ಯ ಲೇಖಕನಿಗೆ ಪ್ರೋತ್ಸಾಹಿಸುವವರು ಕೂಡ ಕಡಿಮೆಯೇ ಎನ್ನಬಹುದು. ಈವರೆಗೆ ಹಲವು ನಾಟಕಗಳನ್ನು ಸ್ನೇಹಿತರಿಗೆ ಬರೆದು ಕೊಟ್ಟಿದ್ದೆನೇದಾರೂ ಸೌಜನ್ಯಕ್ಕೂ ಅವರುಗಳು ವೇದಿಕೆಯಲ್ಲಿ ನನ್ನ ಹೆಸರು ಬಳಸುತ್ತಿರಲಿಲ್ಲ. ಹಾಗಂತ ಅವರನ್ನು ನಾನು ದೂರು ಇಟ್ಟಿಲ್ಲ. ಬದಲಾಗಿ ನನ್ನ ಪ್ರಯತ್ನ ಎಲ್ಲೋ ಒಂದು ಕಡೆ ಸಾಗುತ್ತಿದೆಯೆಲ್ಲಾ ಎನ್ನುವ ಖುಷಿ ನನ್ನಲ್ಲಿ ಇದೆ. ನಾನು ಊಹಿಸಿ ಕೊಂಡು ಹಾಸ್ಯ ಬರುವುದಕ್ಕಿಂತ ತಾನಾಗಿಯೇ ಬರುತ್ತದೆ. ಹಾಗಾಗಿ ಪ್ರಚಲಿತ ವಿದ್ಯಮಾನಗಳು ಅದರಲ್ಲಿ ಅಡಕವಾಗುತ್ತದೆ.

ಸ್ನೇಹಿತ ಪ್ರಸನ್ನ ತಮ್ಮ ಬ್ಲಾಗ್ ನಲ್ಲಿ ನನ್ನ ಬ್ಲಾಗ್ನ್ನು ಸೇರಿಸಿ ಓದುವಂತೆ ಇತರರಿಗೆ ಪ್ರೇರಿಪಿಸಿದ್ದಾರೆ. ಹಾಗೇ ನನ್ನ ಬಗ್ಗೆ ಸುದೀರ್ಘ ಲೇಖನ ಕೂಡ ಬರೆದಿದ್ದಾರೆ. ಯಾವುದೇ ಸ್ವಾರ್ಥವಿಲ್ಲದೆ ನನ್ನ ಬಗ್ಗೆ ಅಭಿಮಾನವಿಟ್ಟಿರುವ ಪ್ರಸನ್ನರಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರಿಗೆ ಇ-ಮೇಲ್ ನಲ್ಲೇ ಉತ್ತರಿಸಬಹುದಿತ್ತು. ಆದರೆ ಅವರ ದೊಡ್ಡತನ ಎಲ್ಲರಿಗೂ ತಿಳಿಯಲಿ ಎಂಬ ಕಾರಣಕ್ಕೆ ಇಲ್ಲಿ ಪ್ರಕಟಿಸಿದ್ದೇನೆ. ನನಗೆ ಪುಸ್ತಕ ಬರೆಯಿರಿ ಎಂಬ ಸಲಹೆಯನ್ನು ಕೂಡ ನೀಡಿದ್ದಾರೆ. ಖಂಡಿತಾ ಪ್ರಯತ್ನಿಸುತ್ತೇನೆ. ನಿಮ್ಮಂತವರ ಸಹಕಾರವೇ ನನ್ನ ನಿರಂತರ ಹಾಸ್ಯ ಲೇಖನ ಮೂಡಲು ಕಾರಣ ಎಂದು ಕಾಣುತ್ತದೆ. ಪ್ರಸನ್ನ ತಮಗೆ ಮುಜುಗರವಾಗಿದ್ದರೆ ಕ್ಷಮಿಸಿ. ಇದನ್ನ ಹೇಳಲೇಬೇಕೆಂದು ಇಲ್ಲಿ ಹಾಕಿದ್ದೇನೆ. ತಮಗೆ ಮತ್ತೊಮ್ಮೆ ಧನ್ಯವಾದಗಳು.

 

ಪ್ರಸನ್ ರ ಬ್ಲಾಗ್ - http://prasannakannada.blogspot.com/

 

ನನ್ನ ಬ್ಲಾಗ್ - http://www.komal1231.blogspot.com/

Rating
No votes yet

Comments