ಪ್ರಸವ..
ಪ್ರಕೃತಿ ನಳನಳಿಸಲು
ಕಾಲ ಬೇಕು, ಕಾಯ ಬೇಕು
ಪುರುಷನೋ
ಸದಾಕಾಲ ಸ್ರವಿಸುವವನು
ಮನೋರತಿಯಲ್ಲಿ
ನಮ್ಮಿಬ್ಬರ ಸಮಾಗಮ
ಅವಳು ಸ್ರವಿಸುವವರೆಗೆ
ನಾನೇನೂ ಸೃಷ್ಟಿಸಲಾರೆ
ಭಾವನೆಗಳ ಬೀಜವೆರಚಲು
ಅನುಗಾಲ ಸಿದ್ಧ ನಾನು
ಭೂಮಿ ಬೇಕು ಮೊಳಕೆಯೊಡೆಯಲು
ಭಾವಗಳು ಪದಗಳಾಗಲು
ಭಾವ ಬೀಜ ಎರಚುವ
ಕ್ಷಣವೇ ಬೇಕು ಅವಳ ಸಮಾಗಮ
ಏಕಕಾಲದ ನಾವಿಬ್ಬರೂ ಸ್ರವಿಸಿದರೇ
ಪ್ರಸವವೇದನೆ ಅವಳಿಗೆ
ಸೃಷ್ಟಿಯಾಗುವುದೊಂದು ಭಾವಬಿಂದು...
Rating