ಪ್ರಾಣಿಗಳ ಪ್ರವಾಸ ಅಸಾಧ್ಯವೇಕೆಂದರೆ ಅವುಗಳಿಗಿರಲೊಂದು ಮನೆಯಿರುವುದಿಲ್ಲ:ಗಾದೆಗೊಂದು ಗುದ್ದು-೬೩

ಪ್ರಾಣಿಗಳ ಪ್ರವಾಸ ಅಸಾಧ್ಯವೇಕೆಂದರೆ ಅವುಗಳಿಗಿರಲೊಂದು ಮನೆಯಿರುವುದಿಲ್ಲ:ಗಾದೆಗೊಂದು ಗುದ್ದು-೬೩

 (೩೨೧) ಪ್ರವಾಸ ಮಾಡುವಾಗ ನಾವುಗಳು ಕಟ್ಟಡ, ಸ್ಮಾರಕ, ಚಿತ್ರಶಾಲೆ, ಅರಮನೆ, ಹೋಟೆಲ್ ಮುಂತಾದುವಕ್ಕೆ ಭೇಟಿ ನೀಡುವುದಕ್ಕೆ ಕಾರಣ ನಾವು ನಮ್ಮ ಮನೆಯಲ್ಲೇ ಇರುವ ಭಾವವನ್ನು ಪುನರ್-ಸಂಪಾದಿಸಿಕೊಳ್ಳಲಿಕ್ಕೆ!

(೩೨೨) ಕೇವನ ಮಾನವರು ಮಾತ್ರ ಪ್ರವಾಸದ ಸ್ವಾದವನ್ನು ಅನುಭವಿಸುತ್ತಾರೆ. ಇತರೆ ಪ್ರಾಣಿಗಳು ಪ್ರವಾಸ ಹೋಗುವುದಿಲ್ಲವೇಕೆಂದರೆ ಅವುಗಳಿಗೆ ಇರಲು ಮನೆಯೆಂಬುದೇ ಇರುವುದಿಲ್ಲವಲ್ಲ!

(೩೨೩) ಮಾತೆಂಬುದು ವೈಯಕ್ತಿಕದಿಂದ ಸಾರ್ವತ್ರಿಕಕ್ಕಿರುವ ಏಕದಿಕ್ಕಿನ ಪ್ರಯಾಣ. ಅದು ತನ್ನ ಜನ್ಮಸ್ಥಾನವಾದ ಮೌನಕ್ಕೆ ಎಂದೂ ಹಿಂದಿರುಗಲಾರದು. 

(೩೨೪) ಯೌವನವು ಅತಿ ಸುಂದರವಾದುದು. ಅದನ್ನು ಉಳಿಸಿಕೊಳ್ಳಲು ಅಥವ ಪುನರ್-ಸಂಪಾದಿಸಿಕೊಳ್ಳಲು ನಿರಂತರವಾಗಿ ಸೋಲುವ ಮಾಪಕವನ್ನೇ ಸೌಂದರ್ಯಮಾಪಕ ಸಾಮಗ್ರಿ ಎನ್ನುತ್ತಾರೆ.

(೩೨೫) ಕೌಮಾರತ್ವದ ಪುನರುತ್ಥಾನದ ಸಾಧ್ಯತೆಯ ರಂಗಸಜ್ಜಿಕೆಯೇ ವಿಧುರತನ ಅಥವ ವಿಚ್ಛೇದಿತತನ!

 

 

Rating
No votes yet

Comments